ತಿರುವನಂತಪುರಂ: ಹಿರಿಯ ನಾಗರಿಕರ ಕಲ್ಯಾಣಕ್ಕಾಗಿ ಕೇರಳ ಸಾಮಾಜಿಕ ಭದ್ರತಾ ಮಿಷನ್ ಮೂಲಕ ಸಾಮಾಜಿಕ ನ್ಯಾಯ ಇಲಾಖೆ ಜಾರಿಗೆ ತಂದಿರುವ ವಯೋಮಿತ್ರಂ ಯೋಜನೆಗೆ ಹೆಚ್ಚುವರಿಯಾಗಿ 11 ಕೋಟಿ ರೂ.ಗಳನ್ನು ಹಂಚಿಕೆ ಮಾಡಲಾಗಿದೆ ಎಂದು ಸಚಿವ ಡಾ. ಆರ್.ಬಿಂದು ಮಾಹಿತಿ ನೀಡಿರುವರು.
ಇದು ಅರವತ್ತೈದು ವರ್ಷಕ್ಕಿಂತ ಮೇಲ್ಪಟ್ಟ ನಗರ ನಿವಾಸಿಗಳಿಗೆ ಮೊಬೈಲ್ ಕ್ಲಿನಿಕ್ ಮೂಲಕ ಉಚಿತ ಚಿಕಿತ್ಸೆ, ಉಚಿತ ಔಷಧಿಗಳು, ಸಮಾಲೋಚನೆ, ಉಪಶಮನ ಆರೈಕೆ, ಸಹಾಯವಾಣಿ ಸೇವೆಗಳು ಇತ್ಯಾದಿಗಳನ್ನು ಒದಗಿಸುವ ಯೋಜನೆಯಾಗಿದೆ. ರಾಜ್ಯದ ಎಲ್ಲಾ ನಗರಸಭೆ ಪ್ರದೇಶಗಳಿಗೆ ವಿಸ್ತರಿಸಲಾಗಿರುವ ಈ ಯೋಜನೆಯನ್ನು ಮೂರು ಬ್ಲಾಕ್ ಪಂಚಾಯತ್‍ಗಳಲ್ಲಿಯೂ ಪ್ರಾರಂಭಿಸಲಾಗಿದೆ ಎಂದು ಸಚಿವರು ತಿಳಿಸಿದರು.
ಉಚಿತ ಚಿಕಿತ್ಸೆಯ ಜೊತೆಗೆ, ಹಿರಿಯ ನಾಗರಿಕರಿಗೆ ಮಾನಸಿಕ ಸ್ವಾಸ್ಥ್ಯವನ್ನು ಒದಗಿಸುವ ಕಾರ್ಯಕ್ರಮಗಳು, ವಿಶೇಷ ವೈದ್ಯಕೀಯ ಶಿಬಿರಗಳು ಇತ್ಯಾದಿಗಳನ್ನು ವಯೋಮಿತ್ರದ ಮೂಲಕ ಕಾರ್ಯಗತಗೊಳಿಸಲಾಗುತ್ತದೆ. ಸಾಮಾಜಿಕ ಭದ್ರತಾ ಮಿಷನ್ ಈ ಯೋಜನೆಯನ್ನು ನಗರ ಪ್ರದೇಶಗಳಲ್ಲಿ ಸಾರ್ವಜನಿಕ ಸಹಭಾಗಿತ್ವದೊಂದಿಗೆ ಹಿರಿಯ ನಾಗರಿಕರ ಸಮುದಾಯವಾಗಿ ಬೆಳೆಸಲು ಪ್ರಯತ್ನಿಸುತ್ತಿದೆ ಎಂದು ಸಚಿವರು ಹೇಳಿದರು.





