ತಿರುವನಂತಪುರಂ: ನೇರ ಲಾಭ ವರ್ಗಾವಣೆ ಯೋಜನೆಯ ಅನುಷ್ಠಾನದ ಬಗ್ಗೆ ರಾಜ್ಯಗಳ ಕಳವಳಗಳನ್ನು ಪರಿಗಣಿಸಿದ ನಂತರವೇ ನಿರ್ಧಾರ ತೆಗೆದುಕೊಳ್ಳಲಾಗುವುದು ಎಂದು ಕೇಂದ್ರ ಆಹಾರ ಮತ್ತು ಸಾರ್ವಜನಿಕ ವಿತರಣಾ ಸಚಿವ ಪ್ರಹ್ಲಾದ್ ಜೋಶಿ ಭರವಸೆ ನೀಡಿದ್ದಾರೆ. ನೇರ ಲಾಭ ವರ್ಗಾವಣೆ ಯೋಜನೆಯು ಆಹಾರವನ್ನು ಒದಗಿಸುವ ಬದಲು ಫಲಾನುಭವಿಗಳ ಬ್ಯಾಂಕ್ ಖಾತೆಗಳಿಗೆ ಹಣವನ್ನು ವರ್ಗಾಯಿಸುತ್ತದೆ.
ಈ ಯೋಜನೆಯ ಅನುμÁ್ಠನದ ಬಗ್ಗೆ ರಾಜ್ಯ ಸರ್ಕಾರದ ಕಳವಳವನ್ನು ರಾಜ್ಯ ಆಹಾರ ಸಚಿವ ಜಿ.ಆರ್.ಅನಿಲ್ ವ್ಯಕ್ತಪಡಿಸಿದ್ದಾರೆ.ಈ ವೇಳೆ, ಕೇಂದ್ರ ಸಚಿವರು ಹೀಗೆ ಹೇಳಿದರು. ಈ ಯೋಜನೆ ಜಾರಿಗೆ ಬಂದರೆ, ಪಡಿತರ ವ್ಯಾಪಾರಿಗಳು, ಹಮಾಲಿಗಳು ಮತ್ತು ಪಡಿತರ ವಿತರಣಾ ವಲಯದಲ್ಲಿ ಕೆಲಸ ಮಾಡುವ ಇತರ ಗುಂಪುಗಳ ಮೇಲೆ ಪ್ರತಿಕೂಲ ಪರಿಣಾಮ ಬೀರುತ್ತದೆ ಎಂದು ರಾಜ್ಯ ಸರ್ಕಾರ ಕಳವಳ ವ್ಯಕ್ತಪಡಿಸಿದೆ.
ಕೇಂದ್ರ ಆಹಾರ ಮತ್ತು ಸಾರ್ವಜನಿಕ ವಿತರಣಾ ಸಚಿವ ಪ್ರಹ್ಲಾದ್ ಜೋಶಿ ಎರಡು ದಿನಗಳ ಕೇರಳ ಭೇಟಿಯಲ್ಲಿದ್ದಾರೆ. ರಾಜ್ಯದ ಆಹಾರ ಸಾರ್ವಜನಿಕ ವಿತರಣೆಗೆ ಸಂಬಂಧಿಸಿದ ತುರ್ತು ಅಗತ್ಯಗಳನ್ನು ಕೇಂದ್ರ ಸಚಿವರ ಗಮನಕ್ಕೆ ತರಲಾಗಿದೆ.





