ಕುಂಬಳೆ: ಕುಂಬಳೆ ಕಣಿಪುರ ಶ್ರೀ ಗೋಪಾಲ ಕೃಷ್ಣ ದೇವಾಲಯದ ನವೀಕರಣ, ಬೇರ್ಣೋದ್ಧಾರ ಸಹಿತ ಪುನರ್ ಪ್ರತಿಷ್ಠಾ ಬ್ರಹ್ಮಕಲಶೋತ್ಸವ ನಡೆಯಲು ಉದಾರ ದಾನಗಳಿಂದ ನೆರವಾದ ಮತ್ತು ಅದಕ್ಕೆ ಕಾರಣಕರ್ತರಾದವರನ್ನು ಗೋಪಾಲಕೃಷ್ಣ ಕ್ಷೇತ್ರದ ಜಾತ್ರಾ ಮಹೋತ್ಸವದ ನಡುದೀಪೆÇೀತ್ಸವ ಮತ್ತು ವಿಶ್ವರೂಪದರ್ಶನ ದಿನವಾದ ಗುರುವಾರ ಸಂಜೆ ನಡೆದ ಸಮಾರಂಭದಲ್ಲಿ ಗೌರವ ಸನ್ಮಾನಗಳಿಂದ ಅಭಿನಂದಿಸಲಾಯಿತು.
ಕಣಿಪುರ ಕ್ಷೇತ್ರದ ನವೀಕರಣ ಪುನರ್ ಪ್ರತಿμÁ್ಠ ಬ್ರಹ್ಮಕಲಶಕ್ಕೆ ಮಹಾದಾನ ಮಾಡಿದ ಸದಾಶಿವ ಶೆಟ್ಟಿ ಕುಳೂರು ಕನ್ಯಾನ, ಸಮಿತಿಯ ಪ್ರಮುಖರಾದ ಸಾಮಾಜಿಕ ಮುಂದಾಳು ಮಂಜುನಾಥ ಆಳ್ವ ಮಡ್ವ, ಕೊಡುಗೈದಾನಿ ಬಿ.ಕೆ. ಮಧೂರು ಹಾಗೂ ಬ್ರಹ್ಮಕಲಶೋತ್ಸವದ ಮುಂಬೈ ಸಮಿತಿ ಸಂಚಾಲಕ ಮೋಹನ ಶೆಟ್ಟಿ ಕುಂಡಾವು ಅವರನ್ನು ಕಣಿವುರ ದೇವಳದಲ್ಲಿ ಸನ್ಮಾನಿಸಲಾಯಿತು.
ಸಮಾರಂಭದಲ್ಲಿ ಪಾಲ್ಗೊಂಡು ಆಶೀರ್ವಚನ ನೀಡಿದ ಎಡನೀರು ಮಠಾಧೀಶ ಶ್ರೀ ಸಚ್ಚಿದಾನಂದ ಭಾರತೀ ಸ್ವಾಮೀಜಿಯವರು, ವ್ಯಕ್ತಿಯೊಬ್ಬ ಗಳಿಸಿದ ದುಡ್ಡಿನ ಆಧಾರದಲ್ಲಿ ಶ್ರೀಮಂತ ಎನಿಸುವುದಿಲ್ಲ. ಗಳಿಸಿದ ಆರ್ಥಿಕತೆಯನ್ನು ಸಮಾಜದ ಅಶಕ್ತರಿಗೆ ಹೇಗೆ ದಾನ ಮಾಡಿ ಲೋಕಕಲ್ಯಾಣಕ್ಕೆ ವಿನಿಯೋಗಿಸುತ್ತಾನೆ ಎಂಬುದರಲ್ಲಿ ಶ್ರೀಮಂತಿಕೆ ಅಡಕವಾಗಿದೆ ಎಂದರು. ಶ್ರೀಮಂತಿಕೆ ಎಂದರೆ ಎಷ್ಟು ಗಳಿಸಿದ್ದಾನೆಂದರ್ಥ ಅಲ್ಲ. ಗಳಿಸಿದ್ದನ್ನು ಹೃದಯ ವಿಶಾಲತೆಯಿಂದ ಸಮಾಜ ಮುಖಿಯಾಗಿ, ಧರ್ಮಕಾರ್ಯಕ್ಕೆ ಹೇಗೆ ವಿನಿಯೋಗಿಸಿದ್ದಾನೆ ಎಂಬ ಮೂಲಕ ಅಳೆಯಲ್ಪಡುತ್ತದೆ.. ಈ ನಿಟ್ಟಿನಲ್ಲಿ ಸದಾಶಿವ ಶೆಟ್ಟಿ ಕುಳೂರು ಕನ್ಯಾನ ಅವರು ಪ್ರತಿಯೊಬ್ಬರಿಗೂ ಆದರ್ಶಪ್ರಾಯ ವ್ಯಕ್ತಿ ಎಂದು ಸ್ವಾಮೀಜಿ ಹೇಳಿದರು.
ಉಪಸ್ಥಿತರಿದ್ದ ಮಾಣಿಲ ಶ್ರೀಧಾಮದ ಶ್ರೀ ಮೋಹನದಾಸ ಪರಮಹಂಸ ಸ್ವಾಮೀಜಿ ಆಶೀರ್ವದ ನವಿತ್ತು, ಕುಂಬಳೆ ಸೀಮೆಯ ದೇವಾಲಯಗಳ ಪುನರುತ್ಥಾನಕ್ಕೆ ಸದಾಶಿವ ಶೆಟ್ಟಿ ಕುಳೂರು ಕನ್ಯಾನ ಮತ್ತು ಕೆ.ಕೆ.ಶೆಟ್ಟಿ ಕುತ್ತಿಕ್ಕಾರು ಅವರ ಕೊಡುಗೆ ಅತ್ಯಂತ ನಿರ್ಣಾಯಕವಾಗಿದ್ದು ಇದು ಭಗವದನುಗ್ರಹದ ಕೊಡುಗೆ ಎಂದರು. ಶ್ರೀ ಕ್ಷೇತ್ರದ ತಂತ್ರಿಗಳಾದ ಬ್ರಹ್ಮಶ್ರೀ ದೇಲಂಪಾಡಿ ಗಣೇಶ ತಂತ್ರಿಗಳು ಶುಭಹಾರೈಸಿ ಮಾತನಾಡಿ, ಸದಾಶಿವ ಶೆಟ್ಟಿ ಮತ್ತು ಕೆ.ಕೆ.ಶೆಟ್ಟಿ ಅವರು ಕುಂಬಳೆ ಸೀಮೆಯ ದೇವಾಲಯಗಳ ಪುನರುತ್ಥಾನಕ್ಕೆಂದೇ ಜನಿಸಿದ ಕರ್ಮಯೋಗಿಗಳಷ್ಟೇ ಅಲ್ಲ, ಅವರು ಸೀಮೆಯ ಕಣ್ಣು ಎಂದು ಹೇಳಿದರು.
ಕಣಿಪುರ ಜಾತ್ರೋತ್ಸವದ ನಡುದೀಪೋತ್ಸವದಂದು ಸಂಜೆ ವಿಶ್ವರೂಪ ದರ್ಶನದ ವೇಳೆಯಲ್ಲೇ ನಡೆದ ಸಮಾರಂಭದಲ್ಲಿ ಸನ್ಮಾನ ಪಡೆದ ಸದಾಶಿವ ಶೆಟ್ಟಿ ಕುಳೂರು ಕನ್ಯಾನ ಅವರು ಸನ್ಮಾನಕ್ಕೆ ಕೃತಜ್ಞತೆ ಸಲ್ಲಿಸಿ ಮಾತನಾಡಿದರು. ಬ್ರಹ್ಮಕಲಶೋತ್ಸವ ಸಮಿತಿಯ ಕಾರ್ಯದರ್ಶಿ ಶಂಕರ ಆಳ್ವ ಕೋಟೆಕಾರು ಪ್ರಾಸ್ತಾವಿಕ ಮಾತನಾಡಿ ಸ್ಥಾಗತಿಸಿದರು. ಉದ್ಯಮಿ, ಕೊಡುಗೈದಾನಿ ಕೆ.ಕೆ.ಶೆಟ್ಟಿ, ಬ್ರಹ್ಮಕಲಶೋತ್ಸವ ಸಮಿತಿ ಅಧ್ಯಕ್ಷ ರಘುನಾಥ ಪೈ, ಪ್ರಧಾನ ಕಾರ್ಯದರ್ಶಿ ಜಯಕುಮಾರ್ ಕೆ.ಎಂ., ದೇವಳದ ಕಾರ್ಯನಿರ್ವಹಣಾಧಿಕಾರಿ ಸತ್ಯನಾರಾಯಣ, ಸಮಿತಿಯ ಪದಾಧಿಕಾರಿಗಳಾದ ಕೆ.ಸಿ.ಮೋಹನ್, ಲಕ್ಷ್ಮಣ ಪ್ರಭು, ಕೆ.ಸುಧಾಕರ ಕಾಮತ್ ಸೇರಿದಂತೆ ಹಲವಾರು ಮಂದಿ ಉಪಸ್ಥಿತರಿದ್ದರು. ಕಲಾರತ್ನ ಶಂನಾಡಿಗ ಕುಂಬಳೆ ಕಾರ್ಯಕ್ರಮ ನಿರೂಪಿಸಿದರು. ವಿಜಯಲಕ್ಷ್ಮಿ ಅಡಿಗ ಅವರು ಸದಾಶಿವ ಶೆಟ್ಟಿ ಅವರ ಸನ್ಮಾನ ಪತ್ರ ವಾಚಿಸಿದರು.




.jpg)
