HEALTH TIPS

ವಿದೇಶಿ ಹಸ್ತಕ್ಷೇಪವಿಲ್ಲದೆ ಮೊದಲ ಅಧಿವೇಶನ ನಡೆಯುತ್ತಿದೆ, ರಾಹುಲ್​ಗೆ ಮೋದಿ ಟಾಂಗ್

ನವದೆಹಲಿ: ಹತ್ತು ವರ್ಷಗಳಲ್ಲಿ ವಿದೇಶಿ ಹಸ್ತಕ್ಷೇಪವಿಲ್ಲದೆ ನಡೆಯುತ್ತಿರುವ ಮೊದಲ ಅಧಿವೇಶನವಿದು ಎಂದು ಪ್ರಧಾನಿ ನರೇಂದ್ರ ಮೋದಿ ವಿಪಕ್ಷ ನಾಯಕ ರಾಹುಲ್ ಗಾಂಧಿಗೆ ಟಾಂಗ್ ಕೊಟ್ಟಿದ್ದಾರೆ. 2014 ರಿಂದ, ಇದು ಮೊದಲ ಸಂಸತ್ ಅಧಿವೇಶನವಾಗಿದ್ದು, ನಮ್ಮ ವ್ಯವಹಾರಗಳಲ್ಲಿ ಯಾವುದೇ ವಿದೇಶಿ ಹಸ್ತಕ್ಷೇಪ ಕಂಡುಬಂದಿಲ್ಲ, ಇದರಲ್ಲಿ ಯಾವುದೇ ವಿದೇಶಿ ಶಕ್ತಿಗಳಿಲ್ಲ.

ಪ್ರತಿ ಬಜೆಟ್ ಅಧಿವೇಶನಕ್ಕೂ ಮುನ್ನ ನಾನು ಇದನ್ನು ಗಮನಿಸಿದ್ದೇನೆ ಎಂದು ಪ್ರಧಾನಿ ಮೋದಿ ಹೇಳಿದರು.

2014ರಿಂದಲೂ ಯಾವುದಾದರೂ ಒಂದು ವಿಚಾರವನ್ನಿಟ್ಟುಕೊಂಡು ತೊಂದರೆ ಸೃಷ್ಟಿಸಲು ಕೆಲವರು ಸಿದ್ಧರಿರುತ್ತಿದ್ದರು. ಆದರೆ 10 ವರ್ಷಗಳ ಬಳಿಕ ಯಾವುದೇ ವಿದೇಶಿ ಹಸ್ತಕ್ಷೇಪವಿಲ್ಲದೆ ಅಧಿವೇಶನ ನಡೆಯುತ್ತಿದೆ. 2047 ರಲ್ಲಿ ಅಭಿವೃದ್ಧಿ ಹೊಂದಿದ ಭಾರತದ ಸಂಕಲ್ಪವನ್ನು ಈಡೇರಿಸುತ್ತದೆ ಎಂದು ನಾನು ವಿಶ್ವಾಸದಿಂದ ಹೇಳಬಲ್ಲೆ ಎಂದು ಪ್ರಧಾನಿ ಮೋದಿ ಹೇಳಿದ್ದಾರೆ.

ದೇಶವಾಸಿಗಳು ಒಟ್ಟಾಗಿ ನಾವು ಈ ನಿರ್ಣಯವನ್ನು ಪ್ರಯತ್ನದಿಂದ ಈಡೇರಿಸುತ್ತೇವೆ. ಮೂರನೇ ಅವಧಿಯಲ್ಲಿ, ನಾವು ದೇಶದ ಸರ್ವತೋಮುಖ ಅಭಿವೃದ್ಧಿಯತ್ತ ಮಿಷನ್ ಮೋಡ್‌ನಲ್ಲಿ ಮುನ್ನಡೆಯುತ್ತಿದ್ದೇವೆ. ನಾವೀನ್ಯತೆ, ಸೇರ್ಪಡೆ ಮತ್ತು ಹೂಡಿಕೆ - ಇದು ನಮ್ಮ ಆರ್ಥಿಕ ಚಟುವಟಿಕೆಯ ಮಾರ್ಗಸೂಚಿಯ ಆಧಾರವಾಗಿದೆ.

ಜಾರ್ಜ್ ಸೊರೊಸ್
ಈ ಹಿಂದೆ ಚಳಿಗಾಲದ ಅಧಿವೇಶನದ ಸಮಯದಲ್ಲಿ ಬಿಲಿಯನೇರ್ ಜಾರ್ಜ್​ ಸೊರೊಸ್ ಮತ್ತು ಅವರ ಎನ್​ಜಿಒ ದಿ ಓಪನ್ ಸೊಸೈಟಿ ಫೌಂಡೇಷನ್​ನೊಂದಿಗಿನ ಕಾಂಗ್ರೆಸ್ ನಾಯಕಿ ಸೋನಿಯಾಗಾಂಧಿ ಸಂಬಂಧದ ಕುರಿತು ವಿಷಯವನ್ನು ಬಿಜೆಪಿ ಪ್ರಸ್ತಾಪಿಸಿತ್ತು. ಈ ವಿಷಯವು ಡಿಸೆಂಬರ್ 8 ಹಾಗೂ ನಂತರದ ದಿನಗಳಲ್ಲಿ ಸಂಸತ್ತಿನಲ್ಲಿ ಪ್ರಾಬಲ್ಯ ಸಾಧಿಸಿತ್ತು. ಸೋನಿಯಾ ಗಾಂಧಿ ಅವರು ಜಾರ್ಜ್ ಸೊರೊಸ್ ಅವರ ಪ್ರತಿಷ್ಠಾನದಿಂದ ನಿಧಿಯನ್ನು ಹೊಂದಿರುವ ಸಂಸ್ಥೆಯೊಂದಿಗೆ ಸಂಬಂಧ ಹೊಂದಿದ್ದಾರೆ ಎಂದು ಬಿಜೆಪಿ ಆರೋಪಿಸಿದೆ. ಈ ಆರೋಪಗಳನ್ನು ಕಾಂಗ್ರೆಸ್ ನಿರಾಕರಿಸಿತ್ತು.

ಹಿಂಡನ್​ಬರ್ಗ್​ ರಿಪೋರ್ಟ್​
ಅದಾನಿ ಸಮೂಹವು ಷೇರುಗಳ ಅಕ್ರಮದಲ್ಲಿ ತೊಡಗಿಕೊಂಡಿರುವುದಲ್ಲದೆ ದಶಕಗಳಿಂದ ಲೆಕ್ಕಪತ್ರ ವಂಚನೆ ಎಸಗಿದೆ ಎಂದು ಹಿಂಡನ್​ಬರ್ಗ್ ರಿಸರ್ಚ್ ವರದಿ ಆರೋಪಿಸಿತ್ತು. ಗೌತಮ್ ಅದಾನಿ 120 ಶತಕೋಟಿ ಡಾಲರ್ ಸಂಪತ್ತನ್ನು ಹೊಂದಿದ್ದು, ಕಳೆದ ಮೂರು ವರ್ಷಗಳಲ್ಲಿ ಸುಮಾರು 100 ಶತಕೋಟಿ ಡಾಲರ್​​ನಷ್ಟು ಸಂಪತ್ತು ಹೆಚ್ಚಿಸಿಕೊಂಡಿದ್ದರು. ಅವರ ಒಡೆತನದ ವಿವಿಧ ಕಂಪನಿಗಳ ಷೇರುಗಳ ದರ ಸರಾಸರಿ ಶೇ 819ರಷ್ಟು ಹೆಚ್ಚಾಗಿತ್ತು. ಅದಾನಿ ಸಮೂಹದ ಮಾಜಿ ಹಿರಿಯ ಅಧಿಕಾರಿಗಳು ಸೇರಿದಂತೆ ಅನೇಕರನ್ನು ಸಂದರ್ಶನ ನಡೆಸಿದ್ದ ಕಂಪನಿ ಸಾವಿರಾರು ದಾಖಲೆಗಳನ್ನು ಪರಿಶೀಲಿಸಿ, ವಿವಿಧ ರಾಷ್ಟ್ರಗಳ ವೆಬ್​​ಸೈಟ್​ಗಳನ್ನೂ ಪರಿಶೀಲಿಸಿ ವರದಿ ಸಿದ್ಧಪಡಿಸಲಾಗಿದೆ ಎಂದು ಹಿಂಡನ್​ಬರ್ಗ್ ರಿಸರ್ಚ್ ಹೇಳಿತ್ತು. ಈ ವಿಚಾರ ಸದನದಲ್ಲಿ ಚರ್ಚೆಗೆ ಗ್ರಾಸವಾಗಿತ್ತು.

ಹಿಂಡನ್​ಬರ್ಗ್ ವರದಿ ಬೆನ್ನಲ್ಲೇ ಷೇರು ಮಾರುಕಟ್ಟೆಯಲ್ಲಿ ಅದಾನಿ ಸಮೂಹದ ಅಂಗ ಸಂಸ್ಥೆಗಳ ಷೇರು ಮೌಲ್ಯದಲ್ಲಿ ಭಾರೀ ಕುಸಿತವಾಗಿತ್ತು. ಅದಾನಿ ಟೋಟಲ್ ಗ್ಯಾಸ್, ಅದಾನಿ ಎಂಟರ್​​ಪ್ರೈಸಸ್, ಅದಾನಿ ಟ್ರಾನ್ಸ್​ಮಿಷನ್, ಅದಾನಿ ಗ್ರೀನ್ ಎನರ್ಜಿ, ಅದಾನಿ ಪೋರ್ಟ್ಸ್ ಆಯಂಡ್ ಸ್ಪೆಷಲ್ ಎಕನಾಮಿಕ್ ಝೋನ್, ಅದಾನಿ ಪವರ್, ಅದಾನಿ ವಿಲ್ಮರ್ ಷೇರುಗಳು ಶೇ 1ರಿಂದ 4ರಷ್ಟು ಕೆಳಮಟ್ಟದಲ್ಲಿ ವಹಿವಾಟು ನಡೆಸಿದ್ದವು. ಪರಿಣಾಮವಾಗಿ ಅದಾನಿ ಸಮೂಹ ಬುಧವಾರ ಒಂದೇ ದಿನದ ವಹಿವಾಟಿನಲ್ಲಿ 46,086 ಕೋಟಿ ರೂ. ಕಳೆದುಕೊಂಡಿತ್ತು.

ಪೆಗಾಸಸ್
2017ರಲ್ಲಿ ಇಸ್ರೇಲ್‌ ಜೊತೆ ಮಾಡಿಕೊಂಡ ರಕ್ಷಣಾ ಒಪ್ಪಂದದ ಭಾಗವಾಗಿ ಭಾರತವು ಪೆಗಾಸಸ್‌ ತಂತ್ರಾಂಶ ಖರೀದಿಸಿದೆ ಎಂದು ‘ನ್ಯೂ ಯಾರ್ಕ್‌ ಟೈಮ್ಸ್‌’ ವರದಿಪ್ರಕಟಿಸಿತ್ತು.ಅದಾದ ಬಳಿಕ ಪೆಗಾಸಸ್‌ ವಿವಾದ ಮತ್ತೆ ಮುನ್ನೆಲೆಗೆ ಬಂದಿತ್ತು.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries