HEALTH TIPS

ಕೂಡ್ಲು ಪಾರೆಕಟ್ಟೆ ಮಡಪ್ಪುರ ಶ್ರೀ ಮುತ್ತಪ್ಪನ್ ಕ್ಷೇತ್ರ ವಾರ್ಷಿಕೋತ್ಸವಕ್ಕೆ ಚಾಲನೆ

ಕಾಸರಗೋಡು: ಕೂಡ್ಲು ಮೀಪುಗುರಿ ಪಾರೆಕಟ್ಟೆ ಮಡಪ್ಪುರ ಶ್ರೀ ಮುತ್ತಪ್ಪನ್ ಕ್ಷೇತ್ರದಲ್ಲಿ 17ನೇ ವಾರ್ಷಿಕೋತ್ಸವ ಹಾಗೂ ವಾರ್ಷಿಕ ಭಜನಾ ಕಾರ್ಯಕ್ರಮ ಶನಿವರ ಅರಂಭಗೊಮಡಿದ್ದು, ಜ. 29ರ ವರೆಗೆ ಜರುಗಲಿದೆ.  ಪಾರೆಕಟ್ಟೆ ಗುಡ್ಡಮನೆ ಶ್ರೀ ವಿಷ್ಣುಮೂರ್ತಿ ಕ್ಷೇತ್ರದಿಂದ ಹಸಿರುವಾಣಿ ಹೊರೆಕಾಣಿಕೆ ಸಮರ್ಪಣೆ,  ಭಜನೆ, ಪೈಂಗುತ್ತಿ ಸೇವೆಯೊಂದಿಗೆ ವರ್ಷಿಕೋತ್ಸವ ಆರಂಭಗೊಂಡಿತು. 

26ರಂದು ನಾಗ ಪ್ರತಿಷ್ಠಾ ಆಚರಣೆಯ ಅಂಗವಾಗಿ ಬೆಳಗ್ಗೆ 7ಕ್ಕೆ ಬ್ರಹ್ಮಶ್ರೀ ಉಳಿಯತ್ತಾಯ ವಿಷ್ಣು ಆಸ್ರ ಅವರ ನೇತೃತ್ವದಲ್ಲಿ ಗಣಪತಿ ಹೋಮ, ಸ್ಥಳಸುದ್ದಿ, 8 ಗಂಟೆಗೆ ವಾಗದೇವರಿಗೆ ಪಂಚಾಮೃತ ಅಭಿಷೇಕ ನಾಗತಂಬಿಲ,10 ಗಂಟೆಗೆ ಸಾಮೂಹಿಕ ಶ್ರೀ ಸತ್ಯನಾರಾಯಣ ಪೂಜೆ ನಡೆಯುವುದು. ಸಂಜೆ 6ಕ್ಕೆ ಶ್ರೀ ಮುತ್ತಪ್ಪನ್ ಬಾಲಗೋಕುಲದ ಮಕ್ಕಳು ಹಾಗೂ ಸ್ಥಳೀಯ ನೃತ್ಯ ಕಲಾವಿದರಿಂದ ಸಾಂಸ್ಕøತಿಕ ಕಾರ್ಯಕ್ರಮ, 7.15ಕ್ಕೆ ಧಾರ್ಮಿಕ ಸಭೆ ನಡೆಯಲಿದೆ. ಸೇವಾ ಸಮಿತಿ ಅಧ್ಯಕ್ಷ ಗಣೇಶ್ ಪಾರೆಕಟ್ಟೆ ಅಧ್ಯಕ್ಷತೆ ವಹಿಸುವರು. ಹಿಂದೂ ಏಕ್ಕನೇದಿಕೆ ರಾಜ್ಯಾಧ್ಯಕ್ಷ ಆರ್.ವಿ.ಬಾಬು ಧಾರ್ಮಿಕ ಭಾವಣ ಮಾಡುವರು. 

ಜ.27ರಂದು ಶ್ರೀ ಮುತ್ತಪ್ಪನ್ ತಿರುವಪ್ಪನ್ ಪ್ರತಿಷ್ಠಾ ದಿನಾಚರಣೆಯ ಅಂಗವಾಗಿ ಬೆಳಗ್ಗೆ 9ರಿಂದ ವಿವಿಧ ಭಜನಾ ತಂಡಗಳಿಮದ ಭಜನೆ,  ಮಧ್ಯಾಹ್ನ 12 ಗಂಟೆಗೆ ವಾರ್ಷಿಕ ಪೈಂಗುತ್ತಿ,  ಪೈಂಗುತ್ತಿ ದರ್ಶನ, ಸಂಜೆ 4ಕ್ಕೆ ಕಲಶ ತಟ್ಟಿನ ಮುಹೂರ್ತ, 6.28ಕ್ಕೆ ದೀಪಾರಾಧನೆ, 6.30ಕ್ಕೆ ಶ್ರೀ ಮುತ್ತಪ್ಪ ದೈವದ ವಳ್ಳಾಟ (ಕೋಲ), ಪೈಂಗುತ್ತಿ ಪ್ರಸಾದ ವಿತರಣೆ, ಸ್ಪೋಟಿರ್ಂಗ್ ಪಾರೆಕಟ್ಟೆ ವತಿಯಿಂದ ಮೀಪುಗುರಿ ಶ್ರೀ ದುರ್ಗಾ ಪರಮೇಶ್ವರಿ ಸನ್ನಿಧಿಯಿಂದ ಹಸಿರುವಾಣಿ ಹೊರೆಕಾಣಿಕೆ ಮೆರವಣಿಗೆ, ರಾತ್ರಿ 7.30ಕ್ಕೆ ಚೌಕಾರ ಗುಳಿಗಸನ್ನಿಧಿಯಿಂದ ಮುತ್ತಪ್ಪ ಬಾಲಗೋಕುಲ ವತಿಯಿಂದ ಹಸಿರುವಾಣಿ ಹೊರಕಾಣಿಕೆ ಮೆರವಣಿಗೆ, 10 ಗಂಟೆಗೆ ಶ್ರೀ ಮುತ್ತಪ್ಪನ್ ದೈವದ ಕಳಿಗಪಾಟ್ಟ್, 11 ಗಂಟೆಗೆ ತಿರುವಪ್ಪ ದೈವವನ್ನು ಮಲೆ ಇಳಿಸುವ ಕಾರ್ಯಕ್ರಮ ನಡೆಯುವುದು. ಜ.28ರಂದು ಬೆಳಗ್ಗೆ 6ಗಂಟೆಗೆ ಶ್ರೀ ಮುತ್ತಪ್ಪನ್ ತಿರುವಪ್ಪಫ್ ದೈವಗಳ ವೆಳ್ಳಾಟ, ಕಲಶ ಮೆರವಣಿಗೆ, ಪಳ್ಳಿಬೇಟೆ, ತುಲಾಭಾರ, ಸಂಜೆ 4ಕ್ಕೆ ಮುತ್ತಪ್ಪನ್ ತಿರುವಪ್ಪನ್ ದೈವಗಳ ಮಲೆ ಏರಿಸುವುದು ನಡೆಯಲಿದೆ.

ಜ.29ರಂದು ಸಂಜೆ 6.29ಕ್ಕೆ ದೀಪಾರಾಧನೆ, 6.30ಕ್ಕೆ ದೀಪ ಪ್ರತಿಷ್ಠೆ, ವಿವಿಧ ಭಜನಾ ಸಂಘಗಳಿಂದ ಭಜನೆ , ರಾತ್ರಿ 8ಕ್ಕೆ ಪೈಂಗುತ್ತಿ, ರಾತ್ರಿ 11.40ಕ್ಕೆ ಮಹಾಪೂಜೆ, ದೀಪ ವಿಸರ್ಜನೆ ನಡೆಯಲಿದೆ.



ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries