ತ್ರಿಶೂರ್: ಗುರುವಾಯೂರು ದೇವಸ್ಥಾನಕ್ಕೆ ಮಾಸಿಕ ಕಾಣಿಕೆಯಾಗಿ ದಾಖಲೆಯ ಹಣ ಹರಿದುಬಂದಿದೆ. ಈ ಬಾರಿ ಏಳೂವರೆ ಕೋಟಿ ರೂ.ಕಾಣಿಕೆ ಲಭಿಸಿದೆ. ಕಳೆದ ಜೂನ್‍ನಲ್ಲಿ 7 ಕೋಟಿ ರೂ.ಗಳಿಗೂ ಹೆಚ್ಚು ಆದಾಯ ಗಳಿಸಿತ್ತು.
ಕಾಣಿಕೆಯಾಗಿ ಸಾಮಾನ್ಯ 5-6 ಕೋಟಿ ರೂ.ಗಳ ಆದಾಯ ಬರುತ್ತದೆ. ಶಬರಿಮಲೆ ಋತುವಿನಲ್ಲಿ ಭಂಡಾರ ಆದಾಯ ಹೆಚ್ಚಳಗೊಂಡಿದೆ. ಇದಲ್ಲದೆ, ಮೂರು ಕಿಲೋಗ್ರಾಂ 906 ಗ್ರಾಂ ಚಿನ್ನ ಮತ್ತು 25 ಕಿಲೋಗ್ರಾಂ 830 ಗ್ರಾಂ ಬೆಳ್ಳಿ ಕೂಡಾ ಲಭಿಸಿದೆ.
ನಿಷೇಧಿತ ನೋಟುಗಳು ಮತ್ತೆ ಬರುತ್ತಿವೆ. 2,000 ರೂ. ಮೌಲ್ಯದ 35 ಮತ್ತು 1,000 ರೂ. ಮೌಲ್ಯದ 33 ಕರೆನ್ಸಿಗಳು ಪತ್ತೆಯಾಗಿವೆ. ಪೂರ್ವ ಮತ್ತು ಪಶ್ಚಿಮ ದ್ವಾರಗಳಲ್ಲಿ ಇ-ಕಾಣಿಕೆ ಹುಂಡಿ ಮೂಲಕ 3.94 ಲಕ್ಷ ರೂ.ಗಳನ್ನು ಪಡೆಯಲಾಗಿದೆ.





