ಕುಂಬಳೆ: ವಾರ್ಷಿಕ ಜಾತ್ರೋತ್ಸವದ ಅಂಗವಾಗಿ ಬುಧವಾರ ಬೆಳಿಗ್ಗೆ 6.ರಿಂದ ಉತ್ಸವ, ಶ್ರೀ ಬಲಿ, 10.30 ರಿಂದ ತುಲಾಭಾರ ಸೇವೆ, ಮಧ್ಯಾಹ್ನ 12.30ಕ್ಕೆ ಮಹಾಪೂಜೆ, ನಿತ್ಯಬಲಿ, 12 ರಿಂದ 2.30ರ ತನಕ ಅನ್ನದಾನ, ಸಂಜೆ 4.30ಕ್ಕೆ ನಡೆ ತೆರೆದು ಪೂಜೆ, 5.15 ರಿಂದ 7.30ರ ತನಕ ರಾಗಮಾಲಿಕಾ ತಂಡ ನೆಲ್ಲಿಕಟ್ಟೆಯವರಿಂದ ಭಕ್ತಿ ರಸಮಂಜರಿ, ಸಂಜೆ 6.30ಕ್ಕೆ ದೀಪಾರಾಧನೆ, 7.30ರಿಂದ ಪೂಜೆ, ಸಣ್ಣದೀಪೋತ್ಸವ, ಶ್ರೀ ಭೂತಬಲಿ ನಡೆಯಿತು.
ಇಂದು(ಜ. 16) ಬೆಳಿಗ್ಗೆ 6.ರಿಂದ ಉತ್ಸವ ಶ್ರೀ ಬಲಿ, 10.30 ರಿಂದ ತುಲಾಭಾರ ಸೇವೆ, ಮಧ್ಯಾಹ್ನ 12.30ಕ್ಕೆ ಮಹಾಪೂಜೆ, ಶ್ರೀ ಬಲಿ, ಮಧ್ಯಾಹ್ನ 12. ರಿಂದ 2.30ರ ತನಕ ಅನ್ನದಾನ, ಸಂಜೆ 4.30ಕ್ಕೆ ನಡೆ ತೆರೆಯುವುದು, 6.30ಕ್ಕೆ ವಿಶ್ವರೂಪ ದರ್ಶನ, 6.30ರಿಂದ 8.45 ರ ತನಕ ವಿನಾಯಕ ಹೆಗಡೆ ಮತ್ತು ಬಳಗದವರಿಂದ ಹಿಂದುಸ್ತಾನಿ ಸಂತವಾಣಿ ಹಾಗೂ ದಾಸವಾಣಿ, ರಾತ್ರಿ 9.ರಿಂದ ಪೂಜೆ, ನಡುದೀಪೋತ್ಸವ, ಶ್ರೀ ಬಲಿ ನಡೆಯಲಿದೆ.
ನಾಳೆ ಐತಿಹಾಸಿಕ ಬೆಡಿ ಉತ್ಸವ:
ನಾಳೆ(ಜ.17) ಬೆಳಿಗ್ಗೆ 6.ರಿಂದ ಉತ್ಸವ ಶ್ರೀ ಬಲಿ, 10.30 ರಿಂದ ತುಲಾಭಾರ ಸೇವೆ, ಮಧ್ಯಾಹ್ನ 12.30ಕ್ಕೆ ಮಹಾಪೂಜೆ, 12. ರಿಂದ 2.30ರ ತನಕ ಅನ್ನದಾನ, ಸಂಜೆ 4.ಕ್ಕೆ ನಡೆ ತೆರೆಯುವುದು, 4.30 ರಿಂದ 6ರ ತನಕ ನೀಲೇಶ್ವರದ ನಾದಂ ಆರ್ಕೆಸ್ಟ್ರಾ ತಂಡದವರಿಂದ ಭಕ್ತಿಗಾನ ಮೇಳ, ಸಂಜೆ 6 ರಿಂದ 6.30 ರ ತನಕ ತಾಯಂಬಕ, 6.30ಕ್ಕೆ ದೀಪಾರಾಧನೆ, ರಾತ್ರಿ 8 ರಿಂದ ಪೂಜೆ, ಶ್ರೀ ಬಲಿ ಉತ್ಸವ, 9.45 ರಿಂದ ವಿಶೇಷ ಬೆಡಿ ಪ್ರದರ್ಶನ ನಡೆಯಲಿದೆ. ಶನಿವಾರ ಮುಂಜಾನೆ 2.45 ರಿಂದ ಶ್ರೀ ಭೂತಬಲಿ, ಶಯನ, ಕವಾಟ ಬಂಧನ ನಡೆಯಲಿದೆ.




