ಕುಂಬಳೆ ಮರ್ಚೆಂಟ್ಸ್ ವೆಲ್ಪೇರ್ ಕೋ-ಆಪರೇಟಿವ್ ಸೊಸೈಟಿಯ ನೂತನ ಕಛೇರಿಯನ್ನು ಕಾಸರಗೋಡು ಸಂಸದ ರಾಜಮೋಹನ್ ಉಣ್ಣಿತ್ತಾನ್ ಇತ್ತೀಚೆಗೆ ಉದ್ಘಾಟಿಸಿದರು. ನೂತನ ಕಛೇರಿಯು ಕುಂಬಳೆ ಪೇಟೆಯ ಮುಳಿಯಡ್ಕ ಕಾಂಪ್ಲೆಕ್ಸ್ ನಲ್ಲಿ ಔಪಚಾರಿಕವಾಗಿ ಉದ್ಘಾಟನೆಗೊಂಡಿದ್ದು, ಸಮಾರಂಭದ ಅಧ್ಯಕ್ಷತೆ ಯನ್ನು ಕೆ.ವಿ.ವಿ.ಇ.ಎಸ್ ಕಾಸರಗೋಡಿನ ಜಿಲ್ಲಾಧ್ಯಕ್ಷ ಕೆ.ಅಹಮ್ಮದ್ ಶರೀಫ್ ವಹಿಸಿದ್ದರು.
ಮುಖ್ಯ ಅತಿಥಿಗಳಾಗಿ ಕೇರಳ ಬ್ಯಾಂಕ್ ಕುಂಬಳೆ ಶಾಖೆಯ ಶಾಖಾಧಿಕಾರಿ ಉಣ್ಣಿಕೃಷ್ಣನ್, ಜಿಲ್ಲಾ ಪಂಚಾಯತಿ ಸದಸ್ಯೆ ಜಮೀಲಾ ಸಿದ್ದಿಕ್, ಸಂಘದ ಸ್ಥಾಪಕ ಹಾಗೂ ಮಾಜಿ ಅಧ್ಯಕ್ಷ ಎಂ.ಅಬ್ಬಾಸ್, ಕೆ.ವಿ.ವಿ.ಇ.ಎಸ್ ಕುಂಬಳೆ ಘಟಕದ ಅಧ್ಯಕ್ಷÀ ರಾಜೇಶ್ ಎಂ, ಕುಂಬಳೆ ಸರ್ವಿಸ್ ಬ್ಯಾಂಕ್ ಅಧ್ಯಕ್ಷ ರಾಧಾಕೃಷ್ಣ ರೈ, ಗ್ರಾಮ ಪಂಚಾಯತಿ ಉಪಾಧ್ಯಕ್ಷ ನಾಸಿರ್ ಮೊಗ್ರಾಲ್, ಬಶೀರ್ ಕನಿಲ ಭಾಗವಹಿಸಿದ್ದರು.ಸಂಘದ ನಿರ್ದೇಶಕ,ನಿರ್ದೇಶಕಿಯರಾದ ಅನ್ವರ್ ಸಿ. ಟಿ, ರಾಕೇಶ್ ಕುಮಾರ್, ರುಖ್ಯ ಬಂಬ್ರಾಣ, ಸುಪ್ರಭಾ ಶೆಟ್ಟಿ ಉಪ್ಪಳ, ಮೊಹಮ್ಮದ್ ನವಾಜ್ ಹಾಗೂ ಸಂಘದ ಸಿಬ್ಬಂದಿ ವರ್ಗದವರು ಹಾಗೂ ಸಂಘದ ಸದಸ್ಯರು, ಹಿತೈಷಿಗಳು ಉಪಸ್ಥಿತರಿದ್ದರು. ಸೊಸೈಟಿಯ ಅಧ್ಯಕ್ಷ ಅಬ್ದುಲ್ ಸತ್ತಾರ್ ಕೆ.ಪಿ. ಪ್ರಸ್ತಾವಿಕವಾಗಿ ಮಾತನಾಡಿ ಸ್ವಾಗತಿಸಿ, ಸಂಘದ ಉಪಾಧ್ಯಕ್ಷ ಸಂತೋμï ಕುಮಾರ್ ವಂದಿಸಿದರು.




.jpg)
.jpg)
