ಪೆರ್ಲ: ಏಳ್ಕಾನ ಅನುದಾನಿತ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಹೊಸದಾಗಿ ನಿರ್ಮಿಸಲಾದ ಬಯಲು ತರಗತಿ ಕೊಠಡಿಯನ್ನು ಎಣ್ಮಕಜೆ ಗ್ರಾಮ ಪಂಚಾಯತಿ ಸದಸ್ಯೆ ಜರೀನಾ ಮುಸ್ತಫಾ ಮಂಗಳವಾರ ಉದ್ಘಾಟಿಸಿದರು. ಸುಂದರವಾಗಿ ನಿರ್ಮಿಸಲಾಗಿರುವ ಬಯಲು ತರಗತಿ ವಿದ್ಯಾರ್ಥಿಗಳ ಕಲಿಕೆಯ ಪೂರಕವಾಗಿದ್ದು, ಕಲಿಕಾ ಮಟ್ಟದ ಬೆಳವಣಿಗೆ ಸಾಕಾರಗೊಳ್ಳಲಿ ಎಂದು ಅವರು ಆಶಯ ವ್ಯಕ್ತಪಡಿಸಿದರು.
ಶಾಲಾ ಪಾಲಕರ ಸಮಿತಿ ಅಧ್ಯಕ್ಷ ಅಬ್ದುಲ್ ರೆಹಮಾನ್ ಎಸ್.ಎಂ ಅಧ್ಯಕ್ಷತೆ ವಹಿಸಿದ್ದರು. ಕಾರ್ಯಕ್ರಮದಲ್ಲಿ ಮುಖ್ಯೋಪಾಧ್ಯಾಯ ಎಂ ಅಬ್ದುಲ್ ಅಜೀಜ್, ಅಬ್ದುಲ್ ಜಲೀಲ್ ಪಿ.ಸಿ, ಮತ್ತು ಮುಹಮ್ಮದ್ ಹನೀಫಾ ಎಂ ಮಾತನಾಡಿದರು. ಶಾಲೆಯ ಅಂಗಳದಲ್ಲಿ ಈ ಬಯಲು ತರಗತಿ ಸ್ಥಾಪಿಸಲಾಗಿದೆ.



.jpg)
.jpg)
