HEALTH TIPS

ಇಂದಿನಿಂದ ಕುಂಬೋಳ್ ಮಖಾಂ ಉರೂಸ್

ಕುಂಬಳೆ: ಕುಂಬೋಳ್ ಮುಸ್ಲಿಂ ವಲಿಯ ಜಮಾಯತ್ ಮಸೀದಿಯಲ್ಲಿ ಸಯ್ಯದ್ ಅರಬಿ ವಲಿಯುಲ್ಲಾಹಿ ಅವರ ಹೆಸರಲ್ಲಿ ಐದು ವರ್ಷಗಳಿಗೊಮ್ಮೆ ನಡೆಸುವ ಕುಂಬೋಳ್ ಮಖಾಂ ಉರೂಸ್ ಜ. 16ರಿಂದ 26ರವರೆಗೆ ವಿವಿಧ ಕಾರ್ಯಕ್ರಮಗಳೊಂದಿಗೆ ನಡೆಯಲಿದೆ ಎಂದು ಉರೂಸ್ ಸಮಿತಿ ಪದಾಧಿಕಾರಿಗಳು ಕುಂಬಳೆಯಲ್ಲಿ ನಡೆಸಿದ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ವಿವಿಧ ದಿನಗಳಲ್ಲಿ ಮತ ಪಂಡಿತರು, ಸಾದಾತುಗಳು, ಪ್ರವಚನಕಾರರು, ರಾಜಕೀಯ ಸಾಂಸ್ಕøತಿಕ ವಲಯದ ಗಣ್ಯರು ಭಾಗವಹಿಸುವರು ಎಂದು ಸುದ್ದಿಗೋಷ್ಠಿಯಲ್ಲಿ ತಿಳಿಸಿದರು. 


ಉರೂಸ್‍ನ ಅಂಗವಾಗಿ ಉಚಿತ ವೈದ್ಯಕೀಯ ಶಿಬಿರ, ಆರೋಗ್ಯ ತಿಳುವಳಿಕಾ ತರಗತಿ, ಮಹಲ್ ಪ್ರತಿನಿಧಿ ಸಂಗಮ, ವಿದ್ಯಾರ್ಥಿ ಯುವಜನಸಂಗಮ, ಮಹಿಳಾ ಸಂಗಮ, ವಿಚಾರಗೋಷ್ಠಿ, ಕುಂಬೋಳ್ ಉಸ್ತಾದ್ ಪಿ.ಎ. ಅಹಮ್ಮದ್ ಮುಸ್ಲಿಯಾರ್ ಸಂಸ್ಮರಣೆ, ಪೂರ್ವ ವಿದ್ಯಾರ್ಥಿ ಸಂಗಮ, ಬುರ್ದಾ ಪಾರಾಯಣ ಸ್ಪರ್ಧೆ, ಪ್ರವಾಸಿ ಸಂಗಮ, ಹಿಫ್ಳ್ ಸನದುದಾನ ಮೊದಲಾದ ಕಾರ್ಯಕ್ರಮಗಳು ನಡೆಯಲಿದೆ.

16 ರಂದು ಬೆಳಿಗ್ಗೆ 10 ಕ್ಕೆ ಮಖಾಂ ಸಿಯಾರತ್‍ಗೆ ಅತ್ತಾವುಲ್ಲ  ತಂಙಳ್ ಉದ್ಯಾವರ ನೇತೃತ್ವ ನೀಡುವರು. ಎಂ.ಅಬ್ಬಾಸ್ ಧ್ವಜಾರೋಹಣಗೈಯ್ಯುವರು. ರಾತ್ರಿ 8 ಕ್ಕೆ ಪಾಣಕ್ಕಾಡ್ ಸಯ್ಯದ್ ಅಬ್ಬಾಸ್ ಅಲಿ ಶಿಹಾಬ್ ತಂಙಳ್ ಉದ್ಘಾಟಿಸುವರು. ಪ್ರೊ ಕೆ.ಆಲಿಕುಟ್ಟಿ ಮುಸ್ಲಿಯಾರ್ ಅಧ್ಯಕ್ಷತೆ ವಹಿಸುವರು. ಕೆ.ಎಸ್. ಆಟಕೋಯ ತಂಙಳ್ ಕುಂಬೋಳ್ ಪ್ರಾರ್ಥನೆ ನಡೆಸುವರು. ವಿವಿಧ ದಿನಗಳಲ್ಲಿ ಹಲವು ಪಂಡಿತರು ಮತ ಪ್ರವಚನ ನಡೆಸುವರು. 

ಸುದ್ಧಿಗೋಷ್ಠಿಯಲ್ಲಿ ಜಮಾಯತ್ ಅಧ್ಯಕ್ಷ ಪಿ.ಕೆ.ಮುಸ್ತಫ ಹಾಜಿ, ಪ್ರಧಾನ ಕಾರ್ಯದರ್ಶಿ ಎ. ಮುಹಮ್ಮದ್ ಕುಂಞÂ್ಞ., ಕೋಶಾಧಿಕಾರಿ ಹುಸೈನ್ ದರ್ವೆಷ್, ಉರೂಸ್ ಸಮಿತಿ ಅಧ್ಯಕ್ಷ ಎಂ. ಅಬ್ಬಾಸ್, ಕೆ.ಪಿ. ಶಾಹುಲ್ ಹಮೀದ್ ಸಹಿತ ಹಲವರು ಭಾಗವಹಿಸಿದ್ದರು.



ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries