ಕಾಸರಗೋಡು: ಕುಂಡಂಗುಳಿ ಶ್ರೀ ಪಂಚಲಿಂಗೇಶ್ವರ ದೇವಸ್ಥಾನ ಆರಾಟು ಮಹೋತ್ಸವ ಸಂದರ್ಭ ಪಟಾಕಿ ಸಿಡಿಸಿದ ಪ್ರಕರಣದಲ್ಲಿ ಮೂರು ಮಂದಿ ವಿರುದ್ಧ ಆದೂರು ಠಾಣೆ ಪೊಲೀಸರು ಕೇಸು ದಾಖಲಿಸಿಕೊಂಡಿದ್ದಾರೆ.
ಕುಂಡಂಗುಳಿ ಪಾಂಡಿಕಂಡ ನಿವಾಸಿ ಮಧುಸೂದನನ್ ಸೇರಿದಂತೆ ಮೂರು ಮಂದಿ ವಿರುದ್ಧ ಈ ಕೇಸು. ಉತ್ಸವದಲ್ಲಿ ಯಾವುದೇ ಮುಂಜಗ್ರತೆ ಪಾಲಿಸದೆ ನಿರ್ಲಕ್ಷ್ಯವಾಗಿ ಪಟಾಕಿ ಸಿಡಿಸಿರುವ ಬಗ್ಗೆ ಕೇಸು ದಾಖಲಿಸಲಾಗಿದೆ. ಬುಧವಾರ ಸಂಜೆ 7ಕ್ಕೆ ಆದೂರು ಪೊಲೀಸ್ ಠಾಣೆ ವ್ಯಾಪ್ತಿಯ ಮುಳಿಯಾರು ಪಾಂಡಿಕಂಡ ರಸ್ತೆಯ ಸೇತುವೆ ಬಳಿ ಪಟಾಕಿ ಸಿಡಿಸಲಾಗಿತ್ತು.

