ಮುಳ್ಳೇರಿಯ: ಬೋವಿಕ್ಕಾನ-ಇರಿಯಣ್ಣಿ ರಸ್ತೆಯ ಮಂಜಕ್ಕಲ್ ಪ್ರದೇಶದಲ್ಲಿ ಹಾಡಹಗಲು ಕಾಡುಕೋಣಗಳ ಸಂಚಾರದಿಂದ ಈ ಪ್ರದೇಶದ ಜನತೆಗೆ ಆತಂಕ ಎದುರಾಗಿದೆ. ಭಾರೀ ಗಾತ್ರದ ಕಾಡುಕೋಣಗಳು ಈ ಪ್ರದೇಶದ ರಸ್ತೆಯಲ್ಲಿ ಸುತ್ತಾಡುತ್ತಿದ್ದು, ದ್ವಿಚಕ್ರ ಸೇರಿದಂತೆ ವಿವಿಧ ವಹನ ಪ್ರಯಾಣಿಕರಲ್ಲೂ ಭೀತಿಗೆ ಕಾರಣವಾಗುತ್ತಿದೆ.
ಚಿರತೆ ಹಾವಳಿಯಿಂದ ಕಂಗೆಟ್ಟಿರುವ ಇಲ್ಲಿನ ಜನತೆ ಕಾಡುಕೋಣದ ಭೀತಿಯಲ್ಲಿ ಕಾಲ ಕಳೆಯುವಂತಾಗಿದೆ. ಕಾಡುಕೋಣಗಳು ಕೆಲವೆಡೆ ಕೃಷಿಹಾನಿಗೂ ಕಾರಣವಾಗುತ್ತಿದೆ. ಗುಂಪಾಗಿ ಆಗಮಿಸುವ ಕಾಡುಕೋಣಗಳು ದಾಳಿ ನಡೆಸುವ ಸಾಧ್ಯತೆಯಿರುವುದರಿಂದ ಜನತೆ ಜಾಗ್ರತೆ ಪಾಲಿಸುವಂತೆ ಅರಣ್ಯಾಧಿಕಾರಿಗಳು ತಿಳಿಸುತ್ತಾರೆ.

