HEALTH TIPS

ಆದೂರು ಶ್ರೀ ಭಗವತೀ ದೈವಸ್ಥಾನವು ಭ್ರಾತೃತ್ವದ ಸಂದೇಶ ಸಾರುತ್ತದೆ : ವತ್ಸನ್ ತಿಲ್ಲಂಗೇರಿ

ಮುಳ್ಳೇರಿಯ: ಆದೂರು ಶ್ರೀ ಭಗವತೀ ದೈವಸ್ಥಾನವು ಭ್ರಾತೃತ್ವದ ಸಂದೇಶವನ್ನು ಸಾರುತ್ತದೆ. ದೈವಸ್ಥಾನದ ಇತಿಹಾಸದಲ್ಲಿ ಬರುವ ದನ-ಹುಲಿಯ ವಿಚಾರವು ಭ್ರಾತೃತ್ವದ ಸಂದೇಶಕ್ಕೆ ಪೂರಕವಾಗಿದೆ. ಮಾನವೀಯ ಗುಣಗಳನ್ನು ಕಳೆದುಕೊಳ್ಳುತ್ತಾ, ಸಂಬಂಧಗಳ ಮೌಲ್ಯಗಳನ್ನು ಕಳೆದುಕೊಳ್ಳುವ ಕಾರಣದಿಂದ ನಾವಿಂದು ಮನುಷ್ಯತ್ವವನ್ನು ಕಳೆದುಕೊಳ್ಳುತ್ತಿದ್ದೇವೆ. ಮಕ್ಕಳಿಗೆ ಸಂಬಂಧಗಳ ಮೌಲ್ಯಗಳನ್ನು ದಾಟಿಸದಿರುವ ಹಿನ್ನೆಲೆಯಲ್ಲಿ ಮುಂದಿನ ಜನಾಂಗ ಭಾರತೀಯ ಸಂಸ್ಕøತಿ, ಮೌಲ್ಯಗಳನ್ನು ಕಳೆದುಕೊಳ್ಳುವ ಭೀತಿಯಿದೆ. ಈ ಕ್ಷೇತ್ರದ ತಾಯಿಯೇ ಭಗವತಿಯಾಗಿ ಇಲ್ಲಿ ಅವತರಿಸಿ ನಮಗೆ ಆಶೀರ್ವಾದ ನೀಡುತ್ತಿದ್ದಾಳೆ ಎಂದು ಹಿಂದೂ ಐಕ್ಯ ವೇದಿಯ ರಾಜ್ಯ ಕಾರ್ಯಾಧ್ಯಕ್ಷ ವಲ್ಸನ್ ತಿಲ್ಲಂಗೇರಿ ಹೇಳಿದರು. 

ಅವರು ಆದೂರು ಶ್ರೀ ಭಗವತೀ ಕ್ಷೇತ್ರದಲ್ಲಿ ನಡೆಯುತ್ತಿರುವ ಪೆರುಂಕಳಿಯಾಟ ಮಹೋತ್ಸವದ ಅಂಗವಾಗಿ ಮಂಗಳವಾರ ಆಯೋಜಿಸಿದ ಧಾರ್ಮಿಕ ಸಭಾ ಕಾರ್ಯಕ್ರಮದಲ್ಲಿ ಅವರು ಉಪನ್ಯಾಸ ನೀಡಿದರು. 


ಪುತ್ತೂರು ಬಂಟ್ಸ್ ಸಂಘದ ಅಧ್ಯಕ್ಷ ಹೇಮನಾಥ ಶೆಟ್ಟಿ ಕಾರ್ಯಕ್ರಮ ಉದ್ಘಾಟಿಸಿದರು. ಪೆರುಂಕಳಿಯಾಟ ಸಮಿತಿ ಅಧ್ಯಕ್ಷ ಬಿಪಿನ್ ದಾಸ್ ರೈ ಅಧ್ಯಕ್ಷತೆ ವಹಿಸಿದ್ದರು. ಮುಖ್ಯ ಅತಿಥಿಯಾಗಿ ಉದ್ಯಮಿ ಎ.ಜಿ.ಗಣೇಶ್ ಶೆಟ್ಟಿ ಭಾಗವಹಿಸಿದ್ದರು. ಉದ್ಯಮಿ ಸುನೇತ್ರ ರೈ, ಪೆರುಂಕಳಿಯಾಟ ಸಮಿತಿ ಉಪಾಧ್ಯಕ್ಷ ಪ್ರಕಾಶ್ ಭಂಡಾರಿ, ಆದೂರು ದೇಗುಲ ಸಮಿತಿ ಗೌರವಾಧ್ಯಕ್ಷ ರಘುನಾಥ ಶೆಟ್ಟಿ, ಕಾಸರಗೋಡು ಧರ್ಮಶಾಸ್ತಾ ಸೇವಾ ಸಂಘದ ಅಧ್ಯಕ್ಷ ಕೆ.ಸುರೇಶ, ಮುಳ್ಳೇರಿಯ ವ್ಯಾಪಾರಿ ಸಮಿತಿ ಅಧ್ಯಕ್ಷ ಗಣೇಶ ವತ್ಸ, ಕೋಳಿಕ್ಕಾಲು ದೇಗುಲದ ಸಮಿತಿ ಅಧ್ಯಕ್ಷ ಭಾಸ್ಕರ ಕೋಳಿಕ್ಕಾಲು, ಮಾಣಿಕ್ಕೋತ್ ಭಗವತಿ ಕ್ಷೇತ್ರ ಅಧ್ಯಕ್ಷ ಕರುಣನ್ ಮುಟ್ಟತ್ತ್, ನೀಲೇಶ್ವರ ಆರ್ಯಕ್ಕರ ಭಗವತಿ ಕ್ಷೇತ್ರ ಅಧ್ಯಕ್ಷ ಕುಂಞÂಕೃಷ್ಣನ್, ಕರ್ನಾಟಕ ಪರ್ಸೀನ್ ಮೀನುಗಾರರ ಸಂಘ ಮಂಗಳೂರು ಇದರ ಅಧ್ಯಕ್ಷ ಅನಿಲ್ ಕುಮಾರ್ ಎನ್.ಕರ್ಕೇರ, ಪೆರುಂಕಳಿಯಾಟ ಪ್ರಚಾರ ಸಮಿತಿಯ ಅದ್ಯಕ್ಷ ದಿನೇಶ್ ಬಂಬ್ರಾಣ, ಮುಂಡೋಳು ದೇಗುಲ ಆಡಳಿತ  ಮೊಕ್ತೇಸರ ರಘುರಾಮ ಬಲ್ಲಾಳ್, ಬೆಳ್ಳೂರು ದೇಗುಲ ಟ್ರಸ್ಟಿ ಗಂಗಾಧರ ಬಲ್ಲಾಳ್ ಅಡ್ವಳ, ಅಡೂರು ದೇಗುಲ ಉತ್ಸವ ಸಮಿತಿ ಅದ್ಯಕ್ಷ ರಾಮಚಂದ್ರ ಮಣಿಯಾಣಿ, ಕಾಸರಗೋಡು ಶ್ರೀ ಮಲ್ಲಿಕಾರ್ಜುನ ಕ್ಷೇತ್ರ ಸಮಿತಿ ಅಧ್ಯಕ್ಷ ಗೋವಿಂದನ್ ನಾಯರ್, ಕಾಸರಗೋಡು ಭಗವತಿ ಸೇವಾ ಸಂಘದ ಅಧ್ಯಕ್ಷ ಸತೀಶನ್, ಏರಿಯಕೋಟ ಶ್ರೀ ಭಗವತಿ ಕ್ಷೇತ್ರ ಅಧ್ಯಕ್ಷ  ದಿವಾಕರ, ಮೋರ ಭಗವತಿ ಕ್ಷೇತ್ರ ಸಮಿತಿ ಅಧ್ಯಕ್ಷ ನಾರಾಯಣನ್, ಕಾಸರಗೋಡು ಪ್ರಾದೇಶಿಕ ಸಮಿತಿ ಉಪಾಧ್ಯಕ್ಷ ಉಪೇಂದ್ರ ಕೋಟೆಕಣಿ, ಉದ್ಯಮಿ ಗುರುಪ್ರಸಾದ್ ಪ್ರಭು, ಸಾರ್ವಜನಿಕ ಗಣೇಶೋತ್ಸವ ಸಮಿತಿ ಪ್ರಧಾನ ಕಾರ್ಯದರ್ಶಿ ಕಮಲಾಕ್ಷನ್ ಕೆ.ಎನ್,  ನೆಲ್ಲಿಕುನ್ನು ಶ್ರೀ ಸುಬ್ರಹ್ಮಣ್ಯ ಕ್ಷೇತ್ರ ಸಮಿತಿ ಕಾರ್ಯದರ್ಶಿ ಮಹೇಶ್, ಕೊರಕ್ಕೋಡು ಆರ್ಯಕಾತ್ರ್ಯಾಯಿನಿ ಕ್ಷೇತ್ರದ ನವೀನ,  ಹೊಸಮನೆ ಶ್ರೀ ಐವರ್ ಪರಮಾತ್ಮ ದೈವಸ್ಥಾನ ಟ್ರಸ್ಟಿ ಜನಾರ್ದನ ಗಟ್ಟಿ ಮೊದಲಾದವರು ಉಪಸ್ಥಿತರಿದ್ದರು.


ಪೆರುಂಕಳಿಯಾಟ ಸಮಿತಿ ಕಾರ್ಯದರ್ಶಿ ಭಾಸ್ಕರ ಮಲ್ಲಾವರ ಸ್ವಾಗತಿಸಿ, ಪ್ರಚಾರ ಸಮಿತಿ ಸಂಚಾಲಕ ಹರಿಪ್ರಸಾದ್ ವಂದಿಸಿದರು. ದಿವಾಕರ ಉಪ್ಪಳ ನಿರೂಪಿಸಿದರು. 


ವಿವಿಧ ದೈವ ಕೋಲ, ವೆಳ್ಳಾಟ, ತೊಡಂಙಲ್ : ಜ.21 ರಂದು ಬೆಳಗ್ಗೆ ಪನ್ನಿಕುಳತ್ ಚಾಮುಂಡಿ ದೈವದ ಕೋಲ, ಉಷ:ಪೂಜೆ, ಅಣ್ಣಪ್ಪ ಪಂಜುರ್ಲಿ ದೈವದ ಕೋಲ, ವೈರಾಪುರತ್ ವಡಕಾಂಕೋಡಿ ದೈವದ ಕೋಲ, ಅಸುರಾಳನ್ ದೈವದ ಕೋಲ, ಕಲ್ಲಂಗರ ಚಾಮುಂಡಿ ದೈವದ ಕೋಲ, ಪಡು ಚಾಮುಂಡಿ ದೈವದ ಕೋಲ, ವಿಷ್ಣುಮೂರ್ತಿ ಮತ್ತು ಮೇಚೇರಿ ಚಾಮುಂಡಿ ದೈವಗಳ ಕೋಲ, ಮಧ್ಯಾಹ್ನ ಪೂಜೆ, ಸಂಜೆ ಮೂರೂ ಭಗವತೀ ದೈವಗಳ ಉಚ್ಚತೋಟಂ, ವೈರಾಪುರತ್ ವಡಕಾಂಕೋಡಿ ದೈವದ ವೆಳ್ಳಾಟ, ಆದೂರು ಗುತ್ತಿನಿಂದ ಕಲ್ಕುಡ-ಕಲ್ಲುರ್ಟಿ ದೈವಗಳ ಭಂಡಾರ ಆಗಮನ, ಚಳ್ಳಂಗೋಡಿನಿಂದ ಧೂಮಾವತಿ, ರಕ್ತೇಶ್ವರಿ ದೈವಗಳ ಭಂಡಾರ ಆಗಮನ, ಕೃಷ್ಣ ಪಣಿಕ್ಕರ್ ಮನೆಯಿಂದ ಕೊರತ್ತಿ ದೈವದ ಭಂಡಾರ ಆಗಮನ, ರಾತ್ರಿ ವೈರಾಪುರತ್ತ್ ವಡಕಾಂಕೋಡಿ ದೈವದ ವೆಳ್ಳಾಟ, ಕೊರತ್ತಿ ಮತ್ತು ಧೂಮಾವತಿ ದೈವಗಳ ತೊಡಂಙಲ್, ಮಹಾಪೂಜೆ, ಪ್ರದಕ್ಷಿಣೆ, ಕಲ್ಲಂಗರ ಚಾಮುಂಡಿ ದೈವದ ತೊಡಂಙಲ್, ರಕ್ತೇಶ್ವರಿ ದೈವದ ತೊಡಂಙಲ್, ಮೇಚ್ಚೇರಿ ದೈವದ ತೊಡಂಙಲ್, ವಿಷ್ಣುಮೂರ್ತಿ ದೈವದ ತೊಡಂಙಲ್, ಅಸುರಾಳನ್ ದೈವದ ವೆಳ್ಳಾಟ, ತೂವಕ್ಕಾಳ್ ತೂವಕ್ಕಾಳಿ ದೈವಗಳ ವೆಳ್ಳಾಟ, ಮೂರೂ ಭಗವತೀ ದೈವಗಳ ಅಂದಿತೋಟ್ಟಂ, ವಿಷ್ಣುಮೂರ್ತಿ ದೈವಗಳ ಕುಳಿಚ್ಚಾಟಂ ನಡೆಯಿತು.



ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries