HEALTH TIPS

Budget 2025 | ರೇಡ್‌ ರಾಜ್‌, ತೆರಿಗೆ ಭಯೋತ್ಪಾದನೆ ನಿಲ್ಲಿಸಿ: ಜೈರಾಮ್‌ ರಮೇಶ್‌

 ನವದೆಹಲಿ: 'ಬೆಳವಣಿಗೆಯನ್ನು ಹಿಮ್ಮುಖವಾಗಿಸುವಂಥ ಪ್ರಧಾನಿ ನರೇಂದ್ರ ಮೋದಿ ಸರ್ಕಾರದ ನೀತಿಗಳು ಭಾರತದ ಹೂಡಿಕೆದಾರರ ವಿಶ್ವಾಸವನ್ನೇ ಕಳೆದುಬಿಟ್ಟಿವೆ. 'ರೇಡ್‌ ರಾಜ್‌ (ವಿವಿಧ ತನಿಖಾ ಸಂಸ್ಥೆಗಳಿಂದ ದಾಳಿ ಮಾಡಿಸುವುದು) ಮತ್ತು ತೆರಿಗೆ ಭಯೋತ್ಪಾದನೆಯನ್ನು ತೊಡೆದು ಹಾಕಲು ಮುಂಬರುವ ಬಜೆಟ್‌ನಲ್ಲಿ ಕ್ರಮ ಕೈಗೊಳ್ಳಿ' ಎಂದು ಕಾಂಗ್ರೆಸ್‌ ಭಾನುವಾರ ಆಗ್ರಹಿಸಿದೆ.

ಫೆ.1ರಂದು ಕೇಂದ್ರ ಬಜೆಟ್‌ ಮಂಡನೆಯಾಗಲಿರುವುದರಿಂದ ಕಾಂಗ್ರೆಸ್‌ ಪ್ರಧಾನ ಕಾರ್ಯದರ್ಶಿ ಜೈರಾಮ್‌ ರಮೇಶ್‌ ಅವರು ಹೇಳಿಕೆ ಬಿಡುಗಡೆ ಮಾಡಿದರು. 'ಭಾರತದ ತಯಾರಿಕಾ ವಲಯದಲ್ಲಿ ಉದ್ಯೋಗವನ್ನು ರಕ್ಷಿಸುವ ಮತ್ತು ವೇತನವನ್ನು ಹೆಚ್ಚಿನ ಬಗ್ಗೆ ಸರ್ಕಾರವು ನಿರ್ಧಾರಕ ಕ್ರಮ ಕೈಗೊಳ್ಳಬೇಕು. ಆ ಮೂಲಕ ಜನರ ಖರೀದಿ ಸಾಮರ್ಥ್ಯವನ್ನು ವೃದ್ಧಿಸಬೇಕು. ಆಗ ಹೂಡಿಕೆ ಮಾಡಲು ಜನ ಮುಂದೆ ಬರುತ್ತಾರೆ' ಎಂದರು.

'ಕಳೆದ 10 ವರ್ಷಗಳಲ್ಲಿ 17.5 ಲಕ್ಷ ಭಾರತೀಯರು ಬೇರೆ ದೇಶಗಳ ಪೌರತ್ವವನ್ನು ಪಡೆದು ದೇಶ ಬಿಟ್ಟಿದ್ದಾರೆ. 2022 ಮತ್ತು 2025ರ ಮಧ್ಯೆ ಸುಮಾರು 21,300 ಕೋಟ್ಯಧಿಪತಿಗಳು ಭಾರತ ಬಿಟ್ಟಿದ್ದಾರೆ ಎಂದು ಅಂದಾಜಿಸಲಾಗಿದೆ. ಕ್ಲಿಷ್ಟ ಜಿಎಸ್‌ಟಿ, ಚೀನಾದಿಂದ ನಿರಂತರ ಆಮದು ಕಾರಣದಿಂದ ಈ ಬೆಳವಣಿಗೆ ನಡೆದಿದೆ' ಎಂದು ಅಭಿಪ್ರಾಯಪಟ್ಟರು.


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries