ನವದೆಹಲಿ: ದೆಹಲಿ ಪೊಲೀಸ್‌ನ ಮಾನವ ಕಳ್ಳಸಾಗಣೆ ವಿರೋಧಿ ಘಟಕಕ್ಕೆ (ಎಎಚ್‌ಟಿಯು) ಬ್ಯೂರೋ ಆಫ್ ಇಂಡಿಯನ್ ಸ್ಟ್ಯಾಂಡರ್ಡ್ಸ್ (ಬಿಐಎಸ್) ಐಎಸ್‌ಒ ಪ್ರಮಾಣಪತ್ರ ಲಭಿಸಿದೆ ಎಂದು ಅಧಿಕಾರಿಯೊಬ್ಬರು ಸೋಮವಾರ ತಿಳಿಸಿದ್ದಾರೆ.
ಮಾನವ ಕಳ್ಳಸಾಗಣೆ, ಬಾಲ ಕಾರ್ಮಿಕರು ಮತ್ತು ಲೈಂಗಿಕ ಶೋಷಣೆಯನ್ನು ತಡೆಯಲು 2014 ರಲ್ಲಿ ಘಟಕವನ್ನು ಸ್ಥಾಪಿಸಲಾಗಿತ್ತು.
ಕಳೆದ 10 ವರ್ಷದಲ್ಲಿ, ನಾಪತ್ತೆಯಾದ ಸಾವಿರಾರು ಮಕ್ಕಳನ್ನು ಅವರ ಕುಟುಂಬಗಳೊಂದಿಗೆ ಮತ್ತೆ ಸೇರಿಸಿದೆ. 100ಕ್ಕೂ ಹೆಚ್ಚು ನ್ಯಾಯಾಲಯದ ಆದೇಶದ ಪ್ರಕರಣಗಳನ್ನು ಪರಿಹರಿಸಿದೆ. 253 ಆರೋಪಿಗಳನ್ನು ಎಎಚ್‌ಟಿಯು ಬಂಧಿಸಿದೆ.
2024ರಲ್ಲಿ, ದೆಹಲಿಯ ಹೊರಗಿನ 89 ಸೇರಿದಂತೆ 227 ಕಾಣೆಯಾದ ಮಕ್ಕಳನ್ನು ಪತ್ತೆಹಚ್ಚಿದೆ. 150 ಎಫ್‌ಐಆರ್‌ಗಳನ್ನು ಪರಿಹರಿಸಿದೆ ಮತ್ತು 38 ಶಂಕಿತರನ್ನು ಬಂಧಿಸಿದೆ ಎಂದು ಅಧಿಕಾರಿ ಹೇಳಿದರು.
ರಕ್ಷಿಸಿದ ಮಕ್ಕಳ ಕುಟುಂಬಗಳ ಸಮ್ಮುಖದಲ್ಲಿ ಶುಕ್ರವಾರ ನಡೆದ ಕಾರ್ಯಕ್ರಮದಲ್ಲಿ ದೆಹಲಿ ಪೊಲೀಸ್ ಆಯುಕ್ತ ಸಂಜಯ್ ಅರೋರಾ ಅವರು ಪ್ರಮಾಣಪತ್ರವನ್ನು ನೀಡಿದರು.




