HEALTH TIPS

Maha Kumbh 2025: ಜನವರಿ 29ರಂದು 10 ಕೋಟಿ ಭಕ್ತರಿಂದ 'ಅಮೃತ ಸ್ನಾನ'ದ ನಿರೀಕ್ಷೆ

ಮಹಾಕುಂಭ ನಗರ: ಜನವರಿ 29ರ 'ಮೌನಿ ಅಮವಾಸ್ಯೆ' ದಿನ ಮಹಾಕುಂಭ ಮೇಳದಲ್ಲಿ ಸುಮಾರು 10 ಕೋಟಿ ಜನರು 'ಅಮೃತ ಸ್ನಾನ' ಮಾಡುವ ನಿರೀಕ್ಷೆ ಇದೆ. ಹೀಗಾಗಿ, ಜನಸ್ತೋಮ ಮತ್ತು ಸಂಚಾರ ದಟ್ಟಣೆ ನಿರ್ವಹಣೆಗೆ ಅಗತ್ಯ ಕ್ರಮ ಕೈಗೊಳ್ಳಲಾಗಿದೆ ಎಂದು ಉತ್ತರ ಪ್ರದೇಶ ಸರ್ಕಾರ ಶುಕ್ರವಾರ ತಿಳಿಸಿದೆ.

ಶಬ್ದ ಮಾಲಿನ್ಯ(ನಿರ್ವಹಣೆ ಮತ್ತು ನಿಯಂತ್ರಣ) ನಿಯಮಗಳು- 2000 ಹಾಗೂ ಮಹಾರಾಷ್ಟ್ರ ಪೊಲೀಸ್‌ ಕಾಯ್ದೆ ಮತ್ತು ಪರಿಸರ ಸಂರಕ್ಷಣೆ ಕಾಯ್ದೆಯ ನಿಯಮಗಳನ್ನು ಉಲ್ಲಂಘಿಸುವ ಧ್ವನಿವರ್ಧಕಗಳ ವಿರುದ್ಧ ತಕ್ಷಣವೇ ಕ್ರಮ ಕೈಗೊಳ್ಳುವಂತೆ ಸಂಬಂಧಪಟ್ಟ ಸಂಸ್ಥೆಗಳಿಗೆ ಹೈಕೋರ್ಟ್‌ ಗುರುವಾರ ನಿರ್ದೇಶನ ನೀಡಿದೆ.

ನ್ಯಾಯಮೂರ್ತಿಗಳಾದ ಅಜಯ್ ಗಡ್ಕರಿ ಹಾಗೂ ಶ್ಯಾಮ್ ಚಾಂಡಕ್ ಅವರು ಇದ್ದ ವಿಭಾಗೀಯ ಪೀಠ ನೀಡಿರುವ ಈ ತೀರ್ಪು ರಾಷ್ಟ್ರ ಮಟ್ಟದಲ್ಲಿ ಪರಿಣಾಮ ಬೀರುವ ಸಾಧ್ಯತೆ ಇದೆ.

ಮುಂಬೈನ ಕುರ್ಲಾದ ಜಾಗೊ ನೆಹರೂನಗರ ರೆಸಿಡೆಂಟ್ಸ್‌ ವೆಲ್‌ಫೇರ್ ಅಸೋಸಿಯೇಶನ್ ಹಾಗೂ ಶಿವಸೃಷ್ಟಿ ಕೋ-ಆಪರೇಟಿವ್ ಹೌಸಿಂಗ್‌ ಸೊಸೈಟೀಸ್‌ ಅಸೋಸಿಯೇಸನ್ ಲಿಮಿಟೆಡ್ ಸಲ್ಲಿಸಿದ್ದ ಮೇಲ್ಮನವಿಗಳ ವಿಚಾರಣೆಯನ್ನು ವಿಭಾಗೀಯ ಪೀಠ ನಡೆಸಿದೆ.

ಹಲವು ಮಸೀದಿಗಳು ಹಾಗೂ ಮದರಸಾಗಳು, ಶಬ್ದ ಮಾಲಿನ್ಯಕ್ಕೆ ಸಂಬಂಧಿಸಿದ ನಿಯಮಗಳನ್ನು ಉಲ್ಲಂಘಿಸುತ್ತಿದ್ದು, ಇವುಗಳ ವಿರುದ್ಧ ಎಫ್‌ಐಆರ್‌ ದಾಖಲಿಸುವಂತೆ ಕೋರಿ ಈ ಎರಡು ಸಂಘಟನೆಗಳು ಕೋರಿದ್ದವು.

ಮಹಾರಾಷ್ಟ್ರ ಸರ್ಕಾರ, ಮಹಾರಾಷ್ಟ್ರ ಮಾಲಿನ್ಯ ನಿಯಂತ್ರಣ ಮಂಡಳಿ ಹಾಗೂ ಮುಂಬೈ ಪೊಲೀಸ್‌ ಅನ್ನು ಪ್ರತಿವಾದಿಗಳನ್ನಾಗಿ ಮಾಡಲಾಗಿತ್ತು.

ಚರ್ಚ್‌ ಆಫ್ ಗಾಡ್‌(ಫುಲ್‌ ಗಾಸ್ಪೆಲ್) ಇನ್ ಇಂಡಿಯಾ ವರ್ಸಸ್ ಕೆ.ಕೆ.ಆರ್‌ ಮೆಜೆಸ್ಟಿಕ್ ಕಾಲೊನಿ ವೆಲ್‌ಫೇರ್‌ ಅಸೋಸಿಯೇಶನ್‌ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್‌ ನೀಡಿರುವ ತೀರ್ಪನ್ನು ಉಲ್ಲೇಖಿಸಿರುವ ಪೀಠ, 'ಇತರರ ಶಾಂತಿಗೆ ಭಂಗ ತರುವ ಮೂಲಕ ಪ್ರಾರ್ಥನೆ ಸಲ್ಲಿಸಬೇಕು ಎಂದು ಯಾವ ಧರ್ಮವೂ ಬೋಧನೆ ಮಾಡುವುದಿಲ್ಲ ಎಂಬುದು ನಿರ್ವಿವಿವಾದ. ಇನ್ನೊಂದೆಡೆ, ಜೋರಾದ ಧ್ವನಿಯಲ್ಲಿ ಇಲ್ಲವೇ ಡ್ರಮ್‌ಗಳನ್ನು ಬಾರಿಸುವ ಮೂಲಕ ಪ್ರಾರ್ಥನೆ ಸಲ್ಲಿಸುವಂತೆ ಯಾವ ಧರ್ಮವೂ ಉಪದೇಶ ಮಾಡುವುದಿಲ್ಲ' ಎಂದು ಹೇಳಿದೆ.

ಹೈಕೋರ್ಟ್‌ ತೀರ್ಪಿನ ಪ್ರಮುಖಾಂಶಗಳು

  • ಹಲವು ಆಯಾಮಗಳಿಂದ ನೋಡಿದಾಗ ಶಬ್ದವು ಕೂಡ ಆರೋಗ್ಯಕ್ಕೆ ಅಪಾಯ ಒಡ್ಡಬಲ್ಲ ಪ್ರಮುಖ ಅಂಶ. ಯಾವುದೇ ವ್ಯಕ್ತಿಗೆ ಧ್ವನಿವರ್ಧಕ ಬಳಕೆಗೆ ಅನುಮತಿ ನೀಡದಿದ್ದಾಗ ತನ್ನ ಹಕ್ಕುಗಳಿಗೆ ಚ್ಯುತಿ ಬಂದಿದೆ ಎಂದು ಆ ವ್ಯಕ್ತಿ ಹೇಳುವಂತಿಲ್ಲ.

  • ಸಾರ್ವಜನಿಕ ಹಿತದೃಷ್ಟಿಯಿಂದ ಧ್ವನಿವರ್ಧಕಗಳ ಬಳಕೆಗೆ ಅನುಮತಿ ನೀಡಬಾರದು.

  • ಧ್ವನಿವರ್ಧಕಗಳ ಬಳಕೆಗೆ ಅನುಮತಿ ನಿರಾಕರಿಸುವುದು ಸಂವಿಧಾನದ 19 ಅಥವಾ 25ನೇ ವಿಧಿಯ ಉಲ್ಲಂಘನೆ ಆಗುವುದಿಲ್ಲ.

  • ನಾಗರಿಕ ಸಮಾಜವೊಂದರಲ್ಲಿ ಧರ್ಮದ ಹೆಸರಿನಲ್ಲಿ ಅಥವಾ ಇತರ ಚಟುವಟಿಕೆಗಳ ಮೂಲಕ ವಯೋವೃದ್ಧರು ರೋಗಿಗಳು ವಿದ್ಯಾರ್ಥಿಗಳು ಅಥವಾ ಮಕ್ಕಳ ಸುಖನಿದ್ರೆಗೆ ಭಂಗ ತರುವುದಕ್ಕೆ ಅನುಮತಿ ನೀಡಲಾಗದು.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries