ಮುಂಬೈ: ಬಾಲಿವುಡ್‌ನ ಮಾಜಿ ನಟಿ, ರೂಪದರ್ಶಿ ಮಮತಾ ಕುಲಕರ್ಣಿ ಅವರು ಸನ್ಯಾಸ ಸ್ವೀಕರಿಸಿದ್ದಾರೆ. 52 ವರ್ಷ ವಯಸ್ಸಿನ ಅವರು ಇನ್ನು ಮುಂದೆ 'ಯಾಮೈ ಮಮತಾ ನಂದಗಿರಿ' ಹೆಸರಿನಿಂದ ಗುರುತಿಸಿಕೊಳ್ಳುವರು.
ಚಿತ್ರರಂಗದಿಂದ ನಿರ್ಗಮಿಸಿದ್ದ ಅವರು ಕೆಲ ತಿಂಗಳ ಹಿಂದಷ್ಟೇ, ಮತ್ತೆ ಸುಮಾರು 25 ವರ್ಷಗಳ ಬಳಿಕ ಮುಂಬೈಗೆ ಮರಳಿದ್ದರು.
ಇಲ್ಲಿನ ಕಿನ್ನರ್ ಅಖಾಡದಲ್ಲಿ ಸನ್ಯಾಸ ದೀಕ್ಷೆ ಸ್ವೀಕರಿಸುವರು.
ಸದ್ಯ ಅವರು ಮಹಾಕುಂಭಮೇಳದಲ್ಲಿ ಅಧ್ಯಾತ್ಮ ಕಾರ್ಯಗಳಲ್ಲಿ ತೊಡಗಿಸಿಕೊಂಡಿದ್ದಾರೆ.
'ಮಮತಾ ಕುಲಕರ್ಣಿ ನನ್ನ ಜೊತೆ 10 ವರ್ಷದಿಂದ ಸಂಪರ್ಕದಲ್ಲಿದ್ದಾರೆ. ಸನಾತನ ಧರ್ಮಕ್ಕೆ ಬದ್ಧವಾಗಿರುವುದಾಗಿ ಅವರು ತಿಳಿಸಿದ್ದಾರೆ' ಎಂದು ಮಹಾಂಡಲೇಶ್ವರ ಆಚಾರ್ಯ ಲಕ್ಷ್ಮಿ ನಾರಾಯಣ ತ್ರಿಪಾಠಿ ಅವರು ತಿಳಿಸಿದರು.
ಕೇಸರಿ ಬಣ್ಣದ ರುಮಾಲು ಧರಿಸಿರುವ ಚಿತ್ರವನ್ನು ಮಮತಾ ಕುಲಕರ್ಣಿ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.
ವಿಕಿ ಗೋಸ್ವಾಮಿ ಜೊತೆ ವಿವಾಹ ಆಗಿದ್ದ ಅವರು, ಕೆಲ ವರ್ಷ ಆಫ್ರಿಕಾದಲ್ಲಿ ವಾಸವಿದ್ದರು. ಮಾದಕ ವಸ್ತು ಪ್ರಕರಣ ಸಂಬಂಧ ಅಮೆರಿಕದ ತನಿಖಾ ಸಂಸ್ಥೆಯ ತನಿಖೆಗೂ ಒಳಪಟ್ಟಿದ್ದರು.




