ಒರೆಬ್ರೊ: ಸ್ಟಾಕ್‌ಹೋಂನಲ್ಲಿರುವ ವಯಸ್ಕರ ಶಿಕ್ಷಣ ಕೇಂದ್ರದಲ್ಲಿ ಅಪರಿಚಿತ ನಡೆಸಿದ ಗುಂಡಿನ ದಾಳಿಯಲ್ಲಿ 11 ಮಂದಿ ಸತ್ತಿದ್ದು, ಕನಿಷ್ಠ ಐವರು ಗಾಯಗೊಂಡಿದ್ದಾರೆ.
ದಾಳಿಕೋರನ ಗುರುತು, ದಾಳಿಗೆ ಕಾರಣ ಪತ್ತೆಯಾಗಿಲ್ಲ. ಮೃತರು 20 ವರ್ಷ ವಯಸ್ಸಿನ ಕೆಳಗಿನವರು. ಘಟನೆ ಕುರಿತು ತನಿಖೆ ನಡೆಯುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಮೂವರು ಮಹಿಳೆಯರು ಸೇರಿ ಗಾಯಾಳುಗಳನ್ನು ಆಸ್ಪತ್ರೆಗೆ ಸೇರಿಸಿದ್ದು, ಪರಿಸ್ಥಿತಿ ಗಂಭೀರವಾಗಿದೆ ಎಂದು ತಿಳಿಸಿದ್ದಾರೆ.




