ಲಿಸ್ಬೊನ್: ಇಸ್ಮಾಯಿಲಿ ಮುಸ್ಲಿಮರ ಇಮಾಂ ಆಗಿದ್ದ ಅಗಾ ಖಾನ್ ಅವರು ಬುಧವಾರ ಇಲ್ಲಿ ನಿಧನರಾದರು. ಅವರಿಗೆ 88 ವರ್ಷವಾಗಿತ್ತು.
ಅವರು ಸ್ಥಾಪಿಸಿದ್ದ ಅಗಾ ಖಾನ್ ಡೆವಲಪ್‌ಮೆಂಟ್ ನೆಟ್‌ವರ್ಕ್, ಏಷ್ಯಾ ಮತ್ತು ಆಫ್ರಿಕಾದಲ್ಲಿ ವಿವಿಧ ಅಭಿವೃದ್ಧಿಕಾರ್ಯಗಳಿಗೆ ನೆರವು ನೀಡುತ್ತಿದೆ.96 ಸಾವಿರ ಜನರಿಗೆ ಉದ್ಯೋಗ ನೀಡಿದೆ.
'ಶಿಯಾ ಇಸ್ಮಾಯಿಲಿ ಮುಸ್ಲಿಮರ 49ನೇ ಇಮಾಂ ಆಗಿದ್ದ 4ನೇ ಅಗಾ ಖಾನ್ (ಕರೀಂ ಅಲ್ ಹುಸೈನಿ) ಮಂಗಳವಾರ ನಿಧನರಾದರು' ಎಂದು ಸಂಸ್ಥೆಯು ಈ ಬಗ್ಗೆ ಹೇಳಿಕೆ ನೀಡಿದೆ.
ಇವರ ಉತ್ತರಾಧಿಕಾರಿಯನ್ನು ಶೀಘ್ರದಲ್ಲಿಯೇ ಪ್ರಕಟಿಸಲಾಗುವುದು ಎಂದು ತಿಳಿಸಿದೆ.




