HEALTH TIPS

ರಾಜ್ಯ ಗಡಿ (ಸೀಮಾ) ನಿರ್ಣಯ ಆಯೋಗದ ವಿಚಾರಣೆಯ ಸಭೆ ಫೆಬ್ರವರಿ 11 ರಂದು ಕಾಸರಗೋಡಿನಲ್ಲಿ

ಕಾಸರಗೋಡು: ಸ್ಥಳೀಯಾಡಳಿತ ಸಂಸ್ಥೆಗಳ ಕರಡು ವಾರ್ಡ್ ವಿಭಜನೆಗೆ ಸಂಬಂದಿಸಿ ಲಭಿಸಿದ ದೂರುಗಳ ಪರಿಹಾರಕ್ಕಾಗಿ ರಾಜ್ಯ ವಿಚಾರಣಾ ಆಯೋಗ ಫೆಬ್ರವರಿ 11 ರಂದು ಬೆಳಗ್ಗೆ 9: ಕ್ಕೆ ಕಾಸರಗೋಡು ಮುನ್ಸಿಪಲ್ ಕಾನ್ಫರೆನ್ಸ್ ಸಭಾಂಗಣದಲ್ಲಿ ನಡೆಯಲಿದೆ.  ಕರಡು ವಾರ್ಡು/ ವಿಧಾನ ಸಭಾ ಕ್ಷೇತ್ರಗಳ ವಿಭಜನೆಗೆ ಸಂಬಂಧಿಸಿದ  ಅಕ್ಷೇಪಣೆಗಳ ಮತ್ತು ಅಭಿಪ್ರಾಯಗಳ ಕುರಿತಾಗಿ ಅರ್ಜಿ ಸಲ್ಲಿಸಿದವರು ಈ ವಿಚಾರಣೆಯಲ್ಲಿ ಭಾಗವಹಿಸಬಹುದು. ಸಾಮೂಹಿಕ ಅರ್ಜಿ ಸಲ್ಲಿಸಿದವರಿಂದ ಒಬ್ಬ ಪ್ರತಿನಿಧಿಗೆ ಮಾತ್ರ ವಿಚಾರಣೆಗೆ ಹಾಜರಾಗಲು ಅವಕಾಶ ನೀಡಲಾಗುವುದು ಎಂದು ಜಿಲ್ಲಾ ಚುನಾವಣಾ ಅಧಿಕಾರಿ ಹೇಳಿದ್ದಾರೆ.

ಕಾಸರಗೋಡು ಮತ್ತು ಕಾರಡ್ಕ ಬ್ಲಾಕ್‍ಗಳ ಗ್ರಾಮ ಪಂಚಾಯತಿಗಳು, ಕಾಸರಗೋಡು ನಗರಸಭೆ ಸೇರಿರುವ 311 ಅರ್ಜಿಗಳನ್ನು  ಬೆಳಗ್ಗೆ 9: ಗಂಟೆಗೆ, ಕಾಞಂಗಾಡು ಮತ್ತು ನೀಲೇಶ್ವರ ಬ್ಲಾಕ್‍ಗಳ ಗ್ರಾಮ ಪಂಚಾಯತ್ ಗಳು (ಪಡನ್ನ ಗ್ರಾಮ ಪಂಚಾಯತ್ ಹೊರತುಪಡಿಸಿ),  ಕಾಞಂಗಾಡು ನಗರಸಭೆ ಸೇರಿ ಒಟ್ಟು 298 ಅರ್ಜಿಗಳನ್ನು ಬೆಳಗ್ಗೆ 11 ಗಂಟೆಗೆ, ಮಂಜೇಶ್ವರ ಮತ್ತು ಪರಪ್ಪ ಬ್ಲಾಕ್‍ಗಳ ಗ್ರಾಮ ಪಂಚಾಯತ್ ಗಳು ಮತ್ತು ನೀಲೇಶ್ವರ ನಗರಸಭೆ ಯ 245 ಅರ್ಜಿಗಳನ್ನು  ಮಧ್ಯಾಹ್ನ 2:00  ಗಂಟೆಗೆ ಪರಿಗಣಿಸಲಾಗುವುದು.


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries