ಕಾಸರಗೋಡು: ಕಾಸರಗೋಡು ಜಿಲ್ಲಾ ಎಂಪ್ಲೋಯ್ ಮೆಂಟ್ ಎಕ್ಸ್‍ಚೇಂಜ್ ನ ನೇತೃತ್ವದಲ್ಲಿ ಫೆ.15ರಂದು ಸೀತಾಂಗೋಳಿಯ ಮಾಲಿಕ್ ದಿನಾರ್ ಪದವಿ ಅಧ್ಯಯನ ಕಾಲೇಜಿನಲ್ಲಿ ಉಚಿತ ಉದ್ಯೋಗ ಮೇಳವನ್ನು ಆಯೋಜಿಸಲಾಗಿದೆ. ಆಸಕ್ತ ಉದ್ಯೋಗಾರ್ಥಿಗಳು ಎಲ್ಲಾ ಪ್ರಮಾಣಪತ್ರಗಳು ಮತ್ತು ಬಯೋಡಾಟಾ ಸಹಿತ ಬೆಳಗ್ಗೆ 9.30 ಕ್ಕೆ ಮಾಲಿಕ್ ದಿನಾರ್ ಕಾಲೇಜಿನಲ್ಲಿ ಹಾಜರಾಗಬೇಕು. ಉದ್ಯೋಗಾರ್ಥಿಗಳು ವಾಟ್ಸ್ ಆಪ್ (9207155700) ಅಥವಾ ಸ್ಪಾಟ್ ನೋಂದಣಿ ಮೂಲಕ ಉದ್ಯೋಗ ಮೇಳಕ್ಕೆ ಹಾಜರಾಗಬಹುದು. 9207155700ರಿಂದ ಹೆಚ್ಚಿನ ಮಾಹಿತಿ ಲಬಿಸುವುದು.




