ಕಾಸರಗೋಡು: ಮಂಗಳೂರು-ಚೆನ್ನೈ ಎಕ್ಸ್‍ಪ್ರೆಸ್ ರೈಲಿಗೆ ಕಲ್ಲು ತೂರಾಟ ನಡೆಸಿದ ಪ್ರಕರಣಕ್ಕೆ ಸಂಬಂಧಿಸಿ ಪಶ್ಚಿಮ ಬಂಗಾಳ ನಿವಾಸಿ ರೋಶನ್ ರಾಯ್ ಹಾಗೂ ಕುಂಬ್ಡಾಜ ಪಂಚಾಯಿತಿ ಮವ್ವಾರು ಒಡಂಬಲ ನಿವಾಸಿ ವಿ. ಸುಂದರ ಎಂಬವರನ್ನು ಬೇಕಲ ಠಾಣೆ ಪೊಲೀಸರು ಬಂಧಿಸಿದ್ದಾರೆ.
ಬೇಕಲ ಸನಿಹದ ಕೋಟಿಕುಳಂ ರೈಲು ನಿಲ್ದಾಣದ ಎರಡನೇ ಪ್ಲ್ಯಾಟ್‍ಫಾರಂನ ಉತ್ತರ ಭಾಗದಲ್ಲಿ ಮಂಗಳವಾರ ರೈಲಿಗೆ ಕಲ್ಲು ತೂರಲಾಗಿತ್ತು. ಕಲ್ಲು ತೂರಾಟದ ಬಗ್ಗೆ ಮಾಹಿತಿ ಪಡೆದ ಕಾಸರಗೋಡು ರೈಲ್ವೆ ಭದ್ರತಾ ಪಡೆ ಮತ್ತುಬೇಕಲ ಠಾಣೆ ಪೊಲೀಸರು ಸ್ಥಳಕ್ಕಾಗಮಿಸಿ ಇಬ್ಬರೂ ಆರೋಪಿಗಳನ್ನು ವಶಕ್ಕೆ ತೆಗೆದುಕೊಂಡಿದ್ದರು. ಇಬ್ಬರೂ ಅತಿಯಾದ ಅಮಲುಪದಾರ್ಥ ಸೇವಿಸಿ ರೈಲಿಗೆ ಕಲ್ಲು ತೂರಾಟ ನಡೆಸಿದ್ದಾರೆನ್ನಲಾಗಿದೆ.






