ಕಾಸರಗೋಡು: ಜಿಲ್ಲೆಯ ವಿವಿಧ ಪ್ರದೇಶಗಳಲ್ಲಿ ತಲೆದೋರಿರುವ ವನ್ಯಮೃಗ ಹಾವಳಿ ತಡೆಗಟ್ಟುವಂತೆ ಆಗ್ರಹಿಸಿ ಬೋವಿಕ್ಕಾನದಲ್ಲಿ ಸಂಸದ ರಾಜ್‍ಮೋಹನ್ ಉಣ್ಣಿತ್ತಾನ್ ಶನಿವಾರ 12ತಾಸುಗಳ ಧರಣಿ ಸತ್ಯಾಗ್ರಹ ನಡೆಸಿದರು. ಕಾರಡ್ಕ-ಮುಳಿಯಾರ್ ಕಾಂಗ್ರೆಸ್ ಸಮಿತಿ ವತಿಯಿಂದ ಪ್ರತಿಭಟನೆ ಆಯೋಜಿಸಲಾಗಿತ್ತು.
ಬೋವಿಕ್ಕಾನದಲ್ಲಿ ನಡೆದ ಸಮಾರಂಭದಲ್ಲಿ ಎಐಸಿಸಿ ಪ್ರಧಾನ ಕಾರ್ಯದರ್ಶಿ ದೀಪಾದಾಸ್ ಮುನ್ಶಿ ಉದ್ಘಾಟಿಸಿದರು. ಈ ಸಂದರ್ಭ ಮಾತನಾಡಿದ ಅವರು, ಜನರ ಜೀವ ಹಾಗೂ ಆಸ್ತಿಗೆ ಕಾಡುಪ್ರಾಣಿಗಳಿಂದ ರಕ್ಷಣೆ ನೀಡಬೇಕಾದ ಸರ್ಕಾರ, ತೀವ್ರ ನಿರ್ಲಕ್ಷ್ಯ ವಹಿಸುತ್ತಿದ್ದು, ಇದರಿಂದ ಕಾಡುಪ್ರಾಣಿಗಳು ನಾಡಿಗಿಳಿದು ವ್ಯಾಪಕ ಕೃಷಿನಾಶ ಹಾಗೂ ಮನುಷ್ಯರಲ್ಲಿ ಭೀತಿಯ ವಾತಾವರಣ ಸೃಷ್ಟಿಸುತ್ತಿದೆ. ಜನರ ಜೀವ ಹಾಗೂ ಆಸ್ತಿಗೆ ರಕ್ಷಣೆ ನೀಡಲು ಸರ್ಕಾರ ತಕ್ಷಣ ಮುಂದಾಗದಿದ್ದಲ್ಲಿ ಪ್ರತಿಭಟನೆ ಪ್ರಬಲಗೊಳಿಸಲಾಗುವುದು ಎಂದು ತಿಳಿಸಿದರು.
ಕೆ. ನೀಲಕಂಠನ್ ಅಧ್ಯಕ್ಷತೆ ವಹಿಸಿದ್ದರು. ಕೆಪಿಸಿಸಿ ಕಾರ್ಯದರ್ಶಿ ಟೋನಿ ಸಎಬಾಸ್ಟಿಯನ್, ಮುಖಂಡರಾದ ಮನ್ಸೂರ್‍ಆಲಿ, ಡಿಸಿಸಿ ಅಧ್ಯಕ್ಷ ಪಿ.ಕೆ ಫೈಸಲ್, ಹಾಕಿಂ ಕುನ್ನಿಲ್, ಕುಞಂಬು ನಂಬ್ಯಾರ್, ಎಂ.ಸಿ ಪ್ರಭಾಕರನ್, ಕೆ.ಪಿ ಪ್ರಕಾಶನ್, ಧನ್ಯಾಸುರೇಶ್, ಖಾದರ್ ಮಾಙËಡ್, ಸಾಜಿದ್ ಮವ್ವಲ್, ಮಾಮನಿ ವಿಜಯನ್, ಗೋವಿಂದನ್ ನಾಯರ್, ಕಲ್ಲಗ ಚಂದ್ರಶೇಖರ ರಆವ್. ಕೆ.ವಿ ಸಉರೇಶ್, ಗೀತಾಕೃಷ್ಣನ್ ಉಪಸ್ಥಿತರಿದ್ದರು.




