ಅಗರ್ತಲಾ: ತ್ರಿಪುರಾದಲ್ಲಿ ಅಕ್ರಮವಾಗಿ ನೆಲೆಸಿದ್ದ 14 ಬಾಂಗ್ಲಾದೇಶಿ ಪ್ರಜೆಗಳನ್ನು ಗಡಿ ಭದ್ರತಾ ಪಡೆ (ಬಿಎಸ್‌ಎಫ್) ಬಂಧಿಸಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
'ಅಂತರರಾಷ್ಟ್ರೀಯ ಗಡಿಯಲ್ಲಿ ಬಿಎಸ್‌ಎಫ್ ತ್ರಿಪುರಾ ಫ್ರಾಂಟಿಯರ್ ಭದ್ರತೆ ಹೆಚ್ಚಿಸಿದ್ದು, ಕಟ್ಟೆಚ್ಚರ ವಹಿಸಲಾಗಿದೆ.
ಅಕ್ರಮ ಒಳನುಸುಳುವಿಕೆ, ಗಡಿಯಾಚೆಗಿನ ಕಳ್ಳಸಾಗಣೆಯಂತಹ ಹಲವು ಪ್ರಯತ್ನಗಳನ್ನು ವಿಫಲಗೊಳಿಸಿದೆ' ಎಂದು ಅವರು ಹೇಳಿದ್ದಾರೆ.
ಜನವರಿ 26ರಿಂದ ರಾಜ್ಯದಲ್ಲಿ ನಡೆಸಲಾದ ವಿವಿಧ ಕಾರ್ಯಾಚರಣೆಯಲ್ಲಿ 14 ಬಾಂಗ್ಲಾದೇಶೀಯರನ್ನು ಬಂಧಿಸಲಾಗಿದೆ ಎಂದು ಅಧಿಕಾರಿ ತಿಳಿಸಿದ್ದಾರೆ.
ಬಂಧಿತರಿಂದ ಸುಮಾರು ₹2.5 ಕೋಟಿ ಮೌಲ್ಯದ ಅಧಿಕ ಪ್ರಮಾಣದ ಮಾದಕ ದ್ರವ್ಯ, ಸಕ್ಕರೆ, ಕಳ್ಳಸಾಗಣೆ ಮಾಡುತ್ತಿದ್ದ ಜಾನುವಾರುಗಳು ಮತ್ತು ಇತರೆ ಕಳ್ಳಸಾಗಣೆಯ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ' ಎಂದು ಅಧಿಕಾರಿ ಹೇಳಿದ್ದಾರೆ.




