ತಿರುವನಂತಪುರಂ: ರಾಜ್ಯ ಸರ್ಕಾರದ ಕ್ರಿಸ್‍ಮಸ್ ಮತ್ತು ಹೊಸ ವರ್ಷದ ಬಂಪರ್ ಲಾಟರಿಯ ವಿಜೇತರನ್ನು ನಾಳೆ (ಫೆ.5) ಘೋಷಿಸಲಾಗುವುದು.
ಡ್ರಾ ಮಧ್ಯಾಹ್ನ 2:00 ಗಂಟೆಗೆ ನಡೆಯಲಿದೆ. 20 ಕೋಟಿ ರೂಪಾಯಿಗಳ ಪ್ರಥಮ ಬಹುಮಾನ ಬಂಪರ್ ಡ್ರಾ ಮೂಲಕ 21 ಜನರು ಕೋಟ್ಯಾಧಿಪತಿಗಳಾಗಲಿದ್ದಾರೆ. ಎರಡನೇ ಬಹುಮಾನ 20 ಜನರಿಗೆ ತಲಾ 1 ಕೋಟಿ ರೂ.ಲಭಿಸಲಿದೆ.
ಡ್ರಾಗೆ ಕೆಲವೇ ಗಂಟೆಗಳು ಬಾಕಿ ಉಳಿದಿದ್ದು, ಎಲ್ಲಾ ಮಾರಾಟ ಕೇಂದ್ರಗಳಲ್ಲಿ ಬಂಪರ್ ಟಿಕೆಟ್ ಮಾರಾಟ ನಡೆಯುತ್ತಿದೆ. ಸೋಮವಾರ (ಫೆಬ್ರವರಿ 3) ಮಧ್ಯಾಹ್ನ 1 ಗಂಟೆಯ ಹೊತ್ತಿಗೆ ಮಾರಾಟದಲ್ಲಿರುವ ಒಟ್ಟು 50,000,00 ಟಿಕೆಟ್‍ಗಳಲ್ಲಿ 45,34,650 ಟಿಕೆಟ್‍ಗಳು ಮಾರಾಟವಾಗಿವೆ. ಡ್ರಾ ಹತ್ತಿರವಾಗುತ್ತಿದ್ದಂತೆ ಟಿಕೆಟ್ ಮಾರಾಟವು ವೇಗ ಪಡೆದುಕೊಂಡಿದೆ.
ಪಾಲಕ್ಕಾಡ್ ಜಿಲ್ಲೆ 8,87,140 ಟಿಕೆಟ್‍ಗಳು ಮಾರಾಟವಾಗಿ ಮೊದಲ ಸ್ಥಾನದಲ್ಲಿದೆ, ತಿರುವನಂತಪುರಂ ಜಿಲ್ಲೆ 5,33,200 ಟಿಕೆಟ್‍ಗಳು ಮಾರಾಟವಾಗಿ ಎರಡನೇ ಸ್ಥಾನದಲ್ಲಿದೆ ಮತ್ತು ತ್ರಿಶೂರ್ ಜಿಲ್ಲೆ 4,97,320 ಟಿಕೆಟ್‍ಗಳು ಮಾರಾಟವಾಗಿ ಮೂರನೇ ಸ್ಥಾನದಲ್ಲಿದೆ. ಇತರ ಜಿಲ್ಲೆಗಳಲ್ಲಿಯೂ ಟಿಕೆಟ್ ಮಾರಾಟ ಗಮನಾರ್ಹವಾಗಿ ಹೆಚ್ಚಾಗಿದೆ. ಕ್ರಿಸ್‍ಮಸ್-ಹೊಸ ವರ್ಷದ ಬಂಪರ್ ಟಿಕೆಟ್‍ನ ಬೆಲೆ 400 ರೂ.





