ಕಾಸರಗೋಡು: ಸಿಪಿಐ-ಎಂ 24ನೇ ಪಕ್ಷ ಕಾಂಗ್ರೆಸ್ ಪೂರ್ವಭಾವಿಯಾಗಿ ಕಾಸರಗೋಡು ಜಿಲ್ಲಾ ಸಮ್ಮೇಳನ ಫೆ. 4ರಿಂದ 6ರವರೆಗೆ ಕಾಞಂಗಾಡ್‍ನ ಮಾವುಂಗಲ್ ರಸ್ತೆಯಲ್ಲಿರುವ ಎಸ್‍ಬಿಐ ಬಳಿ ವಿಶೇಷವಾಗಿ ಸಿದ್ಧಪಡಿಸಲಾದ ಸೀತಾರಾಮ್ ಯಚೂರಿ ನಗರದಲ್ಲಿ ಜರುಗಲಿದೆ ಎಂದು ಸಿಪಿಎಂ ಜಿಲ್ಲಾ ಕಾರ್ಯದರ್ಶಿ ಎಂ.ವಿ.ಬಾಲಕೃಷ್ಣನ್ ಸಉದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ.
ಫೆ.4ರಂದು ಕಾಞಂಗಾಡ್ ಮಾವುಂಗಲ್ ರಸ್ತೆಯ ಎಸ್‍ಬಿಐ ಬಳಿ ಎ.ಕೆ.ನಾರಾಯಣನ್, ಕೆ.ಕುಞÂರಾಮನ್ ನಗರದಲ್ಲಿ ನಡೆಯಲಿರುವ ಪ್ರತಿನಿಧಿ ಸಮ್ಮೇಳನವನ್ನು ಪಕ್ಷದ ಪಾಲಿಟ್ ಬ್ಯೂರೋ ಸದಸ್ಯ ಎ. ವಿಜಯರಾಘವನ್ ಉದ್ಘಾಟಿಸುವರು. ಕೇಂದ್ರ ಸಮಿತಿ ಸದಸ್ಯರಾದ ಇ.ಪಿ ಜಯರಾಜನ್, ಪಿ.ಕೆ.ಶ್ರೀಮತಿ, ರಾಜ್ಯ ಕಾರ್ಯದರ್ಶಿಗಳಾದ ಶಾಸಕ ಟಿ.ಪಿ.ರಾಮಕೃಷ್ಣನ್, ಅನಾವೂರ್ ನಾಗಪ್ಪನ್ ಮತ್ತು ಪಿ.ಕೆ.ಬಿಜು ಪಾಲ್ಗೊಳ್ಳುವರು. 4ರಂದು ಜಿಲ್ಲೆಯ ವಿವಿಧ ಹುತಾತ್ಮರ ಸ್ಮಾರಕ ಮಂಟಪಗಳಿಂದ ಸಮ್ಮೇಳನ ನಗರದಲ್ಲಿ ಅಳವಡಿಸಲಿರುವ ಧ್ವಜ, ಧ್ವಜಸ್ತಮಬ, ಜ್ಯೋತಿಯ ಮೆರವಣಿಗೆ ಸಮ್ಮೇಳನ ನಗರಕ್ಕೆ ತಲುಪಲಿದೆ.
ಪ್ರತಿನಿಧಿ ಸಮ್ಮೇಳನ ಹಾಗೂ ಸರ್ವಜನಿಕ ಸಮ್ಮೇಳನ ನಡೆಯಲಿರುವ ನಗರಗಳಲ್ಲಿ ಅಳವಡಿಸಲಿರುವ ಧ್ವಜ, ಧ್ವಜಸ್ತಂಭ, ಜ್ಯೋತಿಯ ಮೆರವಣಿಗೆ ಜಿಲ್ಲೆಯ ವಿವಿಧ ಕೇಂದ್ರಗಳಿಂದ 4ರಂದು ಬೆಳಗ್ಗೆ 9ಕ್ಕೆ ಆರಂಭಗೊಂಡು ಸಂಜೆ ವೇಳೆಗೆ ತಲುಪಲಿದೆ. ಪೈವಳಿಕೆ ರಕ್ತಸಾಕ್ಷಿ ಸ್ಮೃತಿ ಮಂಟಪದಲ್ಲಿ ಧ್ವಜ ಜಾಥಾ ಮೆರವಣಿಗೆಗೆ ಶಾಸಕ ಸಿ.ಎಚ್.ಕುಂಜಂಬು ಚಾಲನೆ ನೀಡುವರು. ಜಿಲ್ಲಾ ಸಮಿತಿ ಸದಸ್ಯ ಕೆ.ಆರ್.ಜಯಾನಂದ ಧ್ವಜ ಮೆರವಣಿಗೆ ನೇತೃತ್ವ ವಹಿಸುವರು.
ಜಿಲ್ಲೆಯ ವಿವಿಧ ಹುತಾತ್ಮರ ಮಂಟಪಗಳಿಂದ ತರಲಾದ ಜ್ಯೋತಿಗಳೊಂದಿಗೆ ನಾಲ್ಕು ಮೆರವಣಿಗೆಗಳು ನಾರ್ತ್ ಕೋಟಚ್ಚೇರಿಯ ಸೀತಾರಾಮ್ ಯಚೂರಿ ಮತ್ತು ಕೊಡಿಯೇರಿ ಬಾಲಕೃಷ್ಣನ್ ನಗರಕ್ಕೆ ತೆರಳಲಿದ್ದು ಅಲ್ಲಿ ಸಾವಿರಾರು ಜನರೊಂದಿಗೆ ಅಲಮಿಪ್ಪಲ್ಲಿ ಹೊಸ ಬಸ್ ನಿಲ್ದಾಣದಲ್ಲಿ ಸಾಮಾನ್ಯ ಸಭೆ ನಡೆಯಲಿದೆ. 5ರಂದು ಬೆಳಗ್ಗೆ ಕೇಂದ್ರ ಸಮಿತಿ ಮಾಜಿ ಸದಸ್ಯ ಪಿ.ಕರುಣಾಕರನ್ ಪ್ರತಿನಿಧಿ ಸಮ್ಮೇಳನ ನಗರದಲ್ಲಿ ಧ್ವಜಾರೋಹಣ ನೆರವೇರಿಸುವರು. 6ರಂದು ಸಾರ್ವಜನಿಕ ಸಭೆ ನಡೆಯುವುದು ಎಂದು ತಿಳಿಸಿದರು.
ಸುದ್ದಿಗೋಷ್ಟಿಯಲ್ಲಿ ಸಂಘಟನಾ ಸಮಿತಿ ಅಧ್ಯಕ್ಷ ವಿ.ವಿ.ರಮೇಶನ್, ಪ್ರಧಾನ ಸಂಚಾಲಕ ಕೆ.ರಾಜಮೋಹನ್, ರಾಜ್ಯ ಸಮಿತಿ ಸದಸ್ಯರಾದ ಕೆ.ಪಿ.ಸತೀಶ್ ಚಂದ್ರನ್, ಶಾಸಕ ಸಿ.ಎಚ್.ಕುಂಜಂಬು ಕಾರ್ಯದರ್ಶಿ ಜಿಲ್ಲಾ ಸದಸ್ಯರಾದ ಕೆ.ವಿ.ಕುಞÂರಮನ್, ಪಿ.ಜನಾರ್ದನನ್, ಸಾಬು ಉಪಸ್ಥಿತರಿದ್ದರು.





