ಕಾಸರಗೋಡು: ಜಿಲ್ಲಾ ಎಂಪ್ಲಾಯ್‍ಮೆಂಟ್ ಎಕ್ಸ್‍ಚೇಂಜ್ ಆಶ್ರಯದಲ್ಲಿ ಕಾರ್ಯನಿರ್ವಹಿಸುತ್ತಿರುವ ಎಂಪ್ಲಾಯಬಿಲಿಟಿ ಕೇಂದ್ರದ ವತಿಯಿಂದ ಖಾಸಗಿ ಸಂಸ್ಥೆಗಳಲ್ಲಿ ಉದ್ಯೋಗ ಪಡೆಯಲು ಅವಕಾಶ ಕಲ್ಪಿಸಲಾಗಿದೆ.
ಈ ನಿಟ್ಟಿನಲ್ಲಿ ಫೆ. 28ರಂದು ಬೆಳಗ್ಗೆ 10.30ರಿಂದ ವಿದ್ಯಾನಗರದ ಜಿಲ್ಲಾ ಎಂಪ್ಲಾಯಬಿಲಿಟಿ ಕೇಂದ್ರದಲ್ಲಿ ಮಿನಿ ಉದ್ಯೋಗ ಮೇಳ ಹಮ್ಮಿಕೊಳ್ಳಲಾಗಿದೆ. ಎಲ್.ಜಿ ಇಲೆಕ್ಟ್ರಾನಿಕ್ಸ್, ಆಡಿಟ್ ಇನ್ಫೋ ಪ್ರೈವೇಟ್ ಲಿಮಿಟಡ್ ಮೊದಲಾದ ಕಂಪನಿಗಳಿಗೆ ಅಕೌಂಟೆಂಟ್, ಡಿಜಿಟಲ್ ಮಾರ್ಕೆಟಿಂಗ್, ಸ್ಟೂಡೆಂಟ್ ರಿಲೇಶನ್ ಆಫೀಸರ್, ಕೌನ್ಸಿಲರ್, ಫೀಲ್ಡ್ ಸರ್ವಿಸ್ ಇಂಜಿನಿಯರ್, ಟೆಕ್ನಿಷಿಯನ್ ಇತ್ಯಾದಿ 32 ಖಾಲಿ ಹುದ್ದೆಗಳಿಗೆ ಸಂದರ್ಶನ ನಡೆಸಲಾಗುವುದು. ಎಂಪ್ಲಾಯಬಿಲಿಟಿ ಸೆಂಟರ್ ನಲ್ಲಿ ನೋಂದಾಯಿಸಿಕೊಂಡವರಿಗೆ ಅವಕಾಶ. ನೋಂದಣಿಯಾಗದ ಉದ್ಯೋಗಾರ್ಥಿಗಳಿಗೆ ಅದೇ ದಿನ ಬೆಳಗ್ಗೆ 10 ಗಂಟೆಗೆ ನೋಂದಾಯಿಸಿಕೊಳ್ಳಬಹುದು. ಹೆಚ್ಚಿನ ಮಾಹಿತಿಗಾಗಿ ಮೊಬೈಲ್ ಸಂಖ್ಯೆ(9207155700) ಸಂಪರ್ಕಿಸುವಂತೆ ಪ್ರಕಟಣೆ ತಿಳಿಸಿದೆ.




