ಕಾಸರಗೋಡು: ಚೀಮೇನಿ ಪೊಲಿಸ್ ಠಾಣೆ ವ್ಯಾಪ್ತಿ ಚೀಮೇನಿಯ ಮನೆ ಬಗಿಲು ಒಡೆದ 40ಪವನು ಚಿನ್ನಾಭರಣ ಹಾಗೂ ನಾಲ್ಕು ಕಿಲೋ ಬೆಳ್ಳಿ ಸಾಂಗ್ರಿ ಕಳವುಗೈಯಲಾಗಿದೆ. ಮನೆಯಲ್ಲಿ ಕೆಲಸಕ್ಕಿದ್ದ ನೇಪಾಳ ನಿವಾಸಿ ದಂಪತಿ ತಲೆಮರೆಸಿಕೊಂಡಿರುವುದರಿಂದ ಇವರುಕಳವುಗೈದಿರುವ ಶಂಕೆ ಹೆಚ್ಚಾಗಿದೆ.
ಕಣ್ಣೂರು ನಿವಾಸಿ ಹಾಗೂ ಇಂಜಿನಿಯರ್ ಆಗಿರುವ ಎನ್. ಮುಖೇಶ್ ಅವರ ಚೀಮೇನಿ ಚಂಬ್ರಕಾನದ ಮನೆಯಿಂದ ಈ ಕಳವು ನಡೆದಿದೆ. ಮನೆಯ ಜಾನುವಾರುಗಳ ಪಾಲನೆಗಾಘಿ ನೇಪಾಳ ನಿವಾಸಿ ಚಕ್ರಶಾಹಿ ಹಾಗೂ ಈತನ ಪತ್ನಿ ಇಷಳನ್ನು ಕೆಲಸಕ್ಕಿರಿಸಿಕೊಳ್ಳಲಾಗಿತ್ತು. ಮುಕೇಶ್ ಹಾಗೂ ಅವರ ಕುಟುಂಬ ಸೋಮವಾರ ಮನೆಗೆ ಆಘಮಿಸಿದಾಗ ಕಳವು ಬೆಳಕಿಗೆ ಬಂದಿದ್ದು, ನೇಪಾಳಿ ದಂಪತಿ ನಾಪತ್ತೆಯಾಗಿದ್ದರು. ಈ ಬಗ್ಗೆ ಚೀಮೇನಿ ಠಾಣೆ ಪೊಲೀಸರು ಕೇಸು ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.




