ಕಾಸರಗೋಡು: ಬದಿಯಡ್ಕ ಹಾಗೂ ಹೊಸದುರ್ಗ ಪೊಲೀಸ್ ಠಾಣೆ ವ್ಯಾಪ್ತಿಯ ಇಬ್ಬರು ಯುವತಿಯರು ನಾಪತ್ತೆಯಾಗಿರುವ ಬಗ್ಗೆ ಎರಡು ಪ್ರತ್ಯೇಕ ದೂರು ದಕಲಾಗಿದೆ. ಬದಿಯಡ್ಕ ಸನಿಹದ ಪಳ್ಳತ್ತಡ್ಕದ ಬಾಡಿಗೆ ಕೊಠಡಿಯಲ್ಲಿ ವಾಸಿಸುತ್ತಿರುವ ಮಂಜುಳ(19)ಎಂಬಾಕೆ ಫೆ. 3ರಿಂದ ನಾಪತ್ತೆಯಾಗಿರುವ ಬಗ್ಗೆ ತಾಯಿ ಲಲಿತಾ ಬದಿಯಡ್ಕ ಠಾಣೆ ಪೊಲೀಸರಿಗೆ ನೀಡಿದ ದಊರಿನಲ್ಲಿ ತಿಳಿಸಿದ್ದಾರೆ. ಸ್ಥಳೀಯ ನಿವಾಸಿ ಬಿರ್ಮಾ ಎಂಬಾತನೂ ನಾಪತ್ತೆಯಘಿದ್ದು, ಈತನ ಜತೆ ಪರಾರಿಯಾಗಿರುವ ಶಂಕೆ ವ್ಯಕ್ತೊಡಿಸಿದ್ದಾರೆ. ಎರಡೂ ಕುಟುಂಬ ಬಾಗಲಕೋಟೆ ನಿವಾಸಿಗಳಾಗಿದ್ದು, ಕೂಲಿಕಾರ್ಮಿಕರಾಘಿದ್ದರು.
ಇನ್ನೊಂದು ಪ್ರಕರಣದಲ್ಲಿ ಮಾವುಂಗಾಲ್ ಪುಲಯನಡ್ಕ ನಿವಾಸಿ ಮೆರಿನ್ ಥಾಮಸ್(24)ಎಂಬಾಕೆ ನಾಪತ್ತೆಯಾಘಿರುವ ಬಗ್ಗೆ ಹೊಸದುರ್ಗ ಠಾಣೆ ಪೊಲೀಸರು ಕೇಸು ದಾಖಲಿಸಿಕೊಂಡಿದ್ದಾರೆ. ಮಂಗಳೂರಿಗೆ ಕೆಲಸಕ್ಕೆಂದು ತೆರಳಿದ್ದ ಈಕೆಯಬಗ್ಗೆ ಯಾವುದೇ ಮಾಹಿತಿಯಿಲ್ಲ ಎಂಬುದಾಗಿ ತಂದೆ ಥಾಮಸ್ ಕೆ. ಜೋಸೆಫ್ ದೂರಿನಲ್ಲಿ ತಿಳಿಸಿದ್ದಾರೆ. ವೆಳ್ಳಿಕೋತ್ ನಿವಾಸಿ ಇರ್ಫಾನ್‍ಸಲೀಂ ಎಂಬತನ ಜತೆ ಈಕೆ ತೆರಳಿರಬೇಕೆಂದು ಸಂಶಯಿಸಲಾಗಿದೆ.





