ಕಾಸರಗೋಡು: ಬೇಡಡ್ಕ ಪೊಲೀಸ್ ಠಾಣೆ ವ್ಯಾಪ್ತಿಯಿಂದ ನಾಪತ್ತೆಯಾಗಿದ್ದ ಕುಂಡಂಕುಳಿ 'ಶ್ರೀನಿಲಯ' ನಿವಾಸಿ, ಜ್ಯೋತಿಷಿ ಟಿ.ಕೆ ರತ್ನಾಕರನ್ ಎಂಬವರ ಪತ್ನಿ ಶ್ರೀಕಲಾ(52) ತನ್ನ ಪ್ರಿಯತಮನೊಂದಿಗೆ ಬೇಡಡ್ಕ ಠಾಣೆಗೆ ಹಾಜರಾಗಿದ್ದು, ತಾವಿಬ್ಬರೂ ವಿವಾಹಿತರಾಗಿರುವುದಾಗಿ ಪೊಲೀಸರಲ್ಲಿ ತಿಳಿಸಿದ್ದಾರೆ. ನಂತರ ಇವರನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿತ್ತು. ತಮ್ಮ ಇಚ್ಛಾನುಸಾರ ನಡೆದುಕೊಳ್ಳುವಂತೆ ನ್ಯಾಯಾಲಯ ಸೂಚಿಸಿದ ಹಿನ್ನೆಲೆಯಲ್ಲಿ ಶ್ರೀಕಲಾ ಪತಿಯನ್ನು ತೊರೆದು ಪ್ರಿಯತಮನಾದ ಆಟೋಚಾಲಕನ ಜತೆ ತೆರಳಿದ್ದಾಳೆ.
ಶೀಕಲಾ ಫೆ. 1ರಂದು 'ನಾನು ಹೋಗುತ್ತಿದ್ದೇನೆ'ಎಂದು ಚೀಟಿ ಬರೆದಿಟ್ಟು ನಾಪತ್ತೆಯಾಗಿರುವ ಬಗ್ಗೆ ಬೇಡಡ್ಕ ಠಾಣೆ ಪೊಲೀಸರು ಕೇಸು ದಾಖಲಿಸಿಕೊಂಡಿದ್ದರು.




