ಕುಂಬಳೆ: ರಾಜ್ಯ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ, ಕಾಸರಗೋಡು, ಮಕ್ಕಳಸಂರಕ್ಷಣಾ ಸಮಿತಿ ಕಾಸರಗೋಡು ಹಾಗೂ ಮಕ್ಕಳ ಬಗೆಗಿನ ನಮ್ಮ ಜವಾಬ್ದಾರಿ ಸಂಸ್ಥೆ ಜಂಟಿಯಾಗಿ ಹಮ್ಮಿಕೊಂಡ ತ್ರಿದಿನ ಜೀವನ ನೈಪುಣ್ಯ ಶಿಬಿರ ಸೂರಂಬೈಲು ಸರ್ಕಾರಿ ಪ್ರೌಢಶಾಲೆಯಲ್ಲಿ ಶಾಲೆಯಲ್ಲಿ ಸೋಮವಾರ ಸಂಪನ್ನವಾಯಿತು.
ಸಮಾರೋಪ ಸಮಾರಂಭದಲ್ಲಿ ಶಾಲಾ ವಿದ್ಯಾರ್ಥಿ ನಾಯಕಿ ವರ್ಷಾ ಬಿ ಅಧ್ಯಕ್ಷತೆ ವಹಿಸಿದ್ದರು. ಕಾರ್ತಿಕ್ ಕಾರ್ಯಕ್ರಮ ಉದ್ಘಾಟಿಸಿದರು. ತನ್ಮಯ್, ತೇಜಸ್ವಿ, ಅನ್ನಪೂರ್ಣೇಶ್ವರಿ. ಉಜ್ವಲ್, ಮಾತೃಸಂಘದ ಅಧ್ಯಕ್ಷೆ ಆಸಿಯತ್ ಅಸೀದ ಶುಭ ಹಾರೈಸಿದರು. ಶಿನಿಶ್ ಎಸ್ ಪಿ ಸ್ವಾಗತಿಸಿ, ನಿರೀಕ್ಷಾ ಸಿ ಎಚ್ ವಂದಿಸಿದರು. ಶ್ರದ್ಧಾ ಎ ಎಸ್ ನಿರೂಪಿಸಿದರು. ಸಂಪನ್ಮೂಲ ವ್ಯಕ್ತಿಗಳಾಗಿ ನಿರ್ಮಲ್ ಕುಮಾರ್ ಕಾರಡ್ಕ, ನಿರ್ಮಲ, ಯತೀಶ್ ಬಲ್ಲಾಳ್, ಶ್ರೀಲತ, ಐಶ್ವರ್ಯ, ಅನೀಶ್ ಜಾರ್ಜ್, ಆರಿಫ್ ಮೊಹಮ್ಮದ್ ಸಹಕರಿಸಿದರು. ಮಕ್ಕಳ ಕಲ್ಯಾಣ ಇಲಾಖೆಯ ಜಿಲ್ಲಾ ಯೋಜನಾಧಿಕಾರಿ ರಮ್ಯಶ್ರೀ ವೈ ನೇತೃತ್ವ ನೀಡಿದರು.

.jpg)
.jpg)

