ಕಾಸರಗೋಡು: ಪೊಲೀಸರು ನಡೆಸಿದ ಎರಡು ಪ್ರತ್ಯೇಕ ಕಾರ್ಯಾಚರಣೆಯಲ್ಲಿ ಭಾರಿ ಪ್ರಮಾಣದ ನಿಷೇಧಿತ ತಂಬಾಕು ಉತ್ಪನ್ನ ವಶಪಡಿಸಿಕೊಂಡು, ತಂದೆ-ಪುತ್ರ ಸೇರಿದಂತೆ ಮೂವರನ್ನು ಬಂಧಿಸಿದ್ದಾರೆ. ಕೂಡ್ಲು ಕಾಳ್ಯಂಗಾಡಿನ ಮನೆಯೊಂದರಲ್ಲಿ ದಾಸ್ತಾನಿರಿಸಿದ್ದ 7810ಪ್ಯಾಕೆಟ್ ತಂಬಾಕು ಉತ್ಪನ್ನ ವಶಪಡಿಸಿಕೊಂಡು ಇರ್ಫಾನ್ ಅಬ್ದುಲ್ ಖಾದರ್ ಎಂಬಾತನನ್ನು ಬಂಧಿಸಲಾಗಿದೆ. ಕುಟುಂಬದೊಂದಿಗೆ ವಾಸಿಸುತ್ತಿದ್ದ ಈತ ತಂಬಾಕು ಉತ್ಪನ್ನ ದಾಸ್ತಾನಿರಿಸಲು ಮನೆ ಕೊಠಡಿ ಉಪಯೋಗಿಸುತ್ತಿದ್ದನು. ನಗರಠಾಣೆ ಎಸ್.ಐ ಪ್ರದೀಪನ್ ನೇತೃತ್ವದ ಪೊಲೀಸರ ತಂಡ ಕಾರ್ಯಾಚರಣೆ ನಡೆಸಿದೆ.
ಇನ್ನೊಂದು ಘಟನೆಯಲ್ಲಿ ಮಂಗಳವಾರ ಕಾಲಿಕ್ಕಡವಿನಲ್ಲಿ ಚಂದೇರ ಠಾಣೆ ಎಸ್.ಐ ಸುರೇಶ್ ನೇತೃತ್ವದ ಪೊಲೀಸರ ತಂಡ ನಡೆಸಿದ ಕಾರ್ಯಾಚರಣೆಯಲ್ಲಿ ಪಿಕ್‍ಅಪ್ ವಾಹನದಲ್ಲಿ ಸಾಗಿಸುತ್ತಿದ್ದ ನೂರು ಗೋಣಿಚೀಲದಲ್ಲಿ ಸಾಗಿಸುತ್ತಿದ್ದ ಭಾರಿಪ್ರಮಾಣದ ತಂಬಾಕು ಉತ್ಪನ್ನ ವಾಪಪಡಿಸಿಕೊಂಡು ಮಧೂರು ನೇಶನಲ್ ನಗರ ನಿವಾಸಿ ಶಮೀರ್ ಹಾಗೂ ಈತನ ತಂದೆ ಯೂಸುಫ್ ಎಂಬವರನ್ನು ಬಂಧಿಸಿದ್ದಾರೆ. ಲಾರಿಯಲ್ಲಿ ತಂದಿಳಿಸುವ ತಂಬಾಕು ಉತ್ಪನ್ನಗಳನ್ನು ಗ್ರಾಹಕರಿಗೆ ಪಿಕ್‍ಅಪ್ ವಾಹನದ ಮೂಲಕ ರವಾನಿಸುತ್ತಿದ್ದರು.

