ಮಂಜೇಶ್ವರ: ಎಸ್ ಎಸ್ ಕೆ ಕಾಸರಗೋಡು ಹಾಗೂ ಬಿ ಆರ್ ಸಿ ಮಂಜೇಶ್ವರ ಇದರ ಸಹಕಾರದೊಂದಿಗೆ ಗುವೆದಪಡ್ಪು ಪ್ರತಿಭಾ ಕೇಂದ್ರ ಇದರ ನೇತೃತ್ವದಲ್ಲಿ ಪ್ರತಿಭೋತ್ಸವ 2025 ಎಂಬ ವಿಶಿಷ್ಟ ಕಾರ್ಯಕ್ರಮ ಗುವೆದಪಡ್ಪು ಪ್ರತಿಭಾ ಕೇಂದ್ರದಲ್ಲಿ ಇತ್ತೀಚೆಗೆ ಜರಗಿತು. ಕಾರ್ಯಕ್ರಮದ ಉದ್ಘಾಟನೆಯನ್ನು ವರ್ಕಾಡಿ ಗ್ರಾಮ ಪಂಚಾಯತಿ ಸದಸ್ಯೆ ಸೀತಾ ನಿರ್ವಹಿಸಿ ಮಾತನಾಡಿ, ಪ್ರತಿಭಾ ಕೇಂದ್ರವು ಪ್ರತಿಭೆಗಳನ್ನು ಅರಳಿಸುವ ಕೇಂದ್ರವಾಗಿದ್ದು ಇದರ ಸದುಪಯೋಗವನ್ನು ಎಲ್ಲರೂ ಪಡೆದುಕೊಳ್ಳಬೇಕು ಎಂದು ತಿಳಿಸಿದರು.
ಆನೆಕಲ್ಲು ಶಾಲೆಯ ಶಿಕ್ಷಕ ರವಿಶಂಕರ್ ಅಧ್ಯಕ್ಷತೆ ವಹಿಸಿದ್ದ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಕೃಷ್ಣ ನಾಯ್ಕ ಮಾಸ್ತರ್, ಅಶೋಕ್ ಕೊಡ್ಲಮೊಗರು ಭಾಗವಹಿಸಿ ಶುಭ ಹಾರೈಸಿದರು. ಮಕ್ಕಳ ರಕ್ಷಕರು ಭಾಗವಹಿಸಿದ್ದರು. ಸಿ ಆರ್ ಸಿ ಸಂಯೋಜಕಿ ಚಂದ್ರಿಕಾ ಟೀಚರ್ ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿದರು. ಶಿಕ್ಷಕಿ ಚೈತ್ರ ಶೆಟ್ಟಿ ವಂದಿಸಿದರು.
ಬಳಿಕ ಮಕ್ಕಳಿಗೆ ಜಾನಪದ ಗೀತೆ,ಸಿನಿಮಾ ಗೀತೆ ಹಾಗೂ ನಡಿಗೆ ಸ್ಪರ್ಧೆ ಜರಗಿತು. ಜನಪದ ಗೀತೆ ಸ್ಪರ್ಧೆಯಲ್ಲಿ ಮುಪಿದಾ ಪ್ರಥಮ ಸ್ಥಾನ ಹಾಗೂ ಅಂಕಿತಾ ದ್ವಿತೀಯ ಸ್ಥಾನ ಮತ್ತು ಸಿನಿಮಾ ಗೀತೆಯಲ್ಲಿ ತಪ್ಸನಾ ಪ್ರಥಮ ಮತ್ತು ಸಮ್ನ ದ್ವಿತೀಯ ಸ್ಥಾನ ಹಾಗೂ ನಡಿಗೆ ಸ್ಪರ್ಧೆಯಲ್ಲಿ ಮುಜೈನ್ ಮತ್ತು ತಪ್ಸಿನಾ ಪ್ರಥಮ ಸ್ಥಾನ ಪಡೆದರು. ವಿಜೇತರಿಗೆ ಬಹುಮಾನ ನೀಡಿ ಅಭಿನಂದಿಸಲಾಯಿತು.

.jpg)
.jpg)

