ಬದಿಯಡ್ಕ: ಪೈವಳಿಕೆ ಅಟ್ಟೆಗೋಳಿ ಸಮೀಪದ ಸೊಂದಿ ಶ್ರೀವಿಷ್ಣುಮೂರ್ತಿ ದೇವಸ್ಥಾನದಲ್ಲಿ ಪ್ರತಿಷ್ಠಾ ಅಷ್ಟಬಂಧ ಬ್ರಹ್ಮಕಲಶಾಭಿಷೇಕ ಶುಕ್ರವಾರ ಆರಂಭಗೊಂಡು ಸೋಮವಾರ ಸಂಪನ್ನಗೊಂಡಿತು.
ಶುಕ್ರವಾರ ಹೊರೆಕಾಣಿಕೆ ಮೆರವಣಿಗೆ, ಶನಿವಾರ ಗಣಪತಿ ಹೋಮದೊಂದಿಗೆ ವಿವಿಧ ವೈದಿಕ, ಧಾರ್ಮಿಕ ವಿಧಿಗಳು ನಡೆಯಿತು. ಸಂಜೆ 5 ರಿಂದ ಕೆ.ಕೆ.ಶೆಟ್ಟಿ ಮುಂಡಪ್ಪಳ ಅವರ ಅಧ್ಯಕ್ಷತೆಯಲ್ಲಿ ನಡೆದ ಧಾರ್ಮಿಕ ಸಭೆಯಲ್ಲಿ ಶ್ರೀಮದ್.ಎಡನೀರು ಮಠಾಧೀಶರಾದ ಶ್ರೀಸಚ್ಚಿದಾನಂದ ಭಾರತೀ ಶ್ರೀಗಳು ಆಶೀರ್ವಚನ ನೀಡಿದರು. ಕಶೆಕೋಡಿ ಸೂರ್ಯನಾರಾಯಣ ಭಟ್ ಕಲ್ಲಡ್ಕ ಧಾರ್ಮಿಕ ಉಪನ್ಯಾಸ ನೀಡಿದರು. ಎಂ.ಎಸ್.ಮೂಡಿತ್ತಾಯ, ರಮೇಶ್ ಆಳ್ವ ಪಿಲಿಯಂದೂರು, ರಾಮಚಂದ್ರ ಹೊಳ್ಳ ಕಜೆ, ಡಾ.ಜಯಪ್ರಕಾಶ ನಾರಾಯಣ ತೊಟ್ಟೆತ್ತೋಡಿ, ದಾಮೋದರ, ಮಧುಸೂದನ ಭಟ್, ವಿಜಯ ಪಂಡಿತ್ ಉಪ್ಪಳ, ಸತೀಶ್ ಕುಮಾರ್ ನಾಯ್ಕ್, ಡಾ.ವಿಜಯ ನಾರಾಯಣ ಹೊಳ್ಳ ಕೆ.ಮುಖ್ಯ ಅತಿಥಿಗಳಾಗಿ ಉಪಸ್ಥಿತರಿದ್ದರು.
ಭಾನುವಾರ ಬೆಳಿಗ್ಗೆ ಗಣಪತಿಹೋಮ ಸಹಿತ ವಿವಿಧ ವೈದಿಕ ವಿಧಿಗಳು, ಭಜನೆ, ಯಕ್ಷಗಾನ ತಾಳಮದ್ದಳೆ ನಡೆಯಿತು. ಸಂಜೆ 4 ರಿಂದ ನಡೆದ ಮಾತೃ ಸಮಾವೇಶದಲ್ಲಿ ಒಡಿಯೂರಿನ ಶ್ರೀಮಾತಾನಂದಮಯೀ ಆಶೀರ್ವಚನ ನೀಡಿದರು. ಮೀರಾ ಆಳ್ವ ಅಧ್ಯಕ್ಷತೆ ವಹಿಸಿದ್ದರು. ಜಯಲಕ್ಷ್ಮೀ ಕಾರಂತ ಧಾರ್ಮಿಕ ಉಪನ್ಯಾಸ ನೀಡಿದರು. ಶಶಿಕಲಾ ಸುವರ್ಣ, ರಮ್ಯಾ ಎನ್., ಡಾ.ವನಿತಾ ಶೆಟ್ಟಿ ಮುಖ್ಯ ಅತಿಥಿಒಗಳಾಗಿದ್ದರು. ಬಳಿಕ ಭರತ ನೃತ್ಯ ವೈಭವ, ನೃತ್ಯ ವೈವಿಧ್ಯಗಳು ನಡೆಯಿತು.
ಸೋಮವಾರ ಬೆಳಿಗ್ಗೆ 4.30ರಿಂದ ಗಣಹೋಮ, 8.48 ರಿಂದ 9.32ರ ಮುಹೂರ್ತದಲ್ಲಿ ಶ್ರೀವಿಷ್ಣುಮೂರ್ತಿ ದೇವರ ಬಿಂಬ ಪ್ರತಿಷ್ಠೆ ಮತ್ತುಬ್ರಹ್ಮಕಲಶ ಉಳಾಲು ಪೊಯ್ಯಕಂಡ ಬ್ರಹ್ಮಶ್ರೀ ರವಿರಾಜ ಕಡಮಣ್ಣಾಯರ ನೇತೃತ್ವದಲ್ಲಿ ನಡೆಯಿತು. ಬಳಿಕ ಯಕ್ಷಗಾನ ತಾಳಮದ್ದಳೆ, ಮಧ್ಯಾಹ್ನ ಮಹಾಪೂಜೆ, ಅನ್ನಸಂತರ್ಪಣೆ ನಡೆಯಿತು. ಸಂಜೆ 5ರಿಂದ ನಡೆದ ಧಾರ್ಮಿಕ ಸಭೆಯಲ್ಲಿ ಒಡಿಯೂರು ಶ್ರೀಗುರುದೇವಾನಂದ ಸ್ವಾಮೀಜಿ ಹಾಗೂ ಕೊಂಡೆವೂರು ಶ್ರೀಯೋಗಾನಂದ ಸರಸ್ವತೀ ಸ್ವಾಮೀಜಿ ಆಶೀರ್ವಚನ ನೀಡಿದರು. ಸದಾಶಿವ ಶೆಟ್ಟಿ ಕುಳೂರು ಕನ್ಯಾನ ಅಧ್ಯಕ್ಷತೆ ವಹಿಸಿದ್ದರು. ಮುರಳೀಕೃಷ್ಣ ಹಸಂತಡ್ಕ ಧಾರ್ಮಿಕ ಉಪನ್ಯಾಸ ನೀಡಿದರು. ನಾರಾಯಣ ಹೆಗ್ಡೆ ಕೋಡಿಬೈಲು, ಪ್ರಭಾಕರ ಆಳ್ವ ಪಿಲಿಯಂದೂರು, ರಾಧಾಕೃಷ್ಣ ಹೊಳ್ಳ, ಕೃಷ್ಣ ಶಿವಕೃಪಾ ಕುಂಜತ್ತೂರು, ಭಾಸ್ಕರ ರೈ ಮಂಜಲ್ತೋಡಿ, ವಿವೇಕ್ ಭಂಡಾರಿ ಸಣ್ಣತ್ತಡ್ಕ, ಸದಾನಂದ ಸುಲಾಯ ಮುಖ್ಯ ಅತಿಥಿಗಳಾಗಿದ್ದರು. ಬಳಿಕ ನೃತ್ಯಾರ್ಪಣ ಕಾರ್ಯಕ್ರಮ ನಡೆಯಿತು. ರಾತ್ರಿ 9 ರಿಂದ ದೇವರ ಉತ್ಸವ ಬಲಿ, ರಾಜಾಂಗಣ ಪ್ರಸಾದ ವಿತರಣೆಯೊಂದಿಗೆ ಸಂಪನ್ನಗೊಂಡಿತು.

.jpg)
.jpg)
.jpg)


