ಪುಣೆ: ಮಹಾರಾಷ್ಟ್ರದಲ್ಲಿ ಶಂಕಿತ 5 'ಗೀಲನ್ ಬಾರೆ'(ಜಿಬಿಎಸ್) ಸೋಂಕು ಪ್ರಕರಣಗಳು ಪತ್ತೆಯಾಗಿದ್ದು, ಒಟ್ಟು ಪ್ರಕರಣಗಳ ಸಂಖ್ಯೆ 163ಕ್ಕೆ ಏರಿಕೆಯಾಗಿದೆ ಎಂದು ಆರೋಗ್ಯ ಅಧಿಕಾರಿಯೊಬ್ಬರು ಮಂಗಳವಾರ ತಿಳಿಸಿದ್ದಾರೆ.
'ರಾಜ್ಯದಲ್ಲಿ ಶಂಕಿತ ಜಿಬಿಎಸ್ ಸೋಂಕಿನ 163 ಪ್ರಕರಣಗಳು ವರದಿಯಾಗಿವೆ.
ಈ ಪೈಕಿ, 127 ಪ್ರಕರಣಗಳಲ್ಲಿ ಜಿಬಿಎಸ್ ಸೋಂಕು ದೃಢಪಟ್ಟಿದೆ. ಈವರೆಗೆ ಐವರು ಮೃತಪಟ್ಟಿದ್ದಾರೆ' ಎಂದು ಅವರು ಹೇಳಿದ್ದಾರೆ.
163 ಪ್ರಕರಣಗಳಲ್ಲಿ ಪುಣೆ ನಗರದಲ್ಲಿ 32, ಪುಣೆ ಮುನ್ಸಿಪಲ್ ಕಾರ್ಪೊರೇಷನ್ ಮಿತಿಯಲ್ಲಿ ಹೊಸದಾಗಿ ಸೇರ್ಪಡೆಯಾದ ಹಳ್ಳಿಗಳಲ್ಲಿ 86, ಪಿಂಪ್ರಿ ಚಿಂಚ್‌ವಾಡ್‌ನಲ್ಲಿ 18, ಪುಣೆ ಗ್ರಾಮೀಣ ಭಾಗದಲ್ಲಿ 19 ಮತ್ತು ಇತರ ಜಿಲ್ಲೆಗಳಲ್ಲಿ 8 ಪ್ರಕರಣಗಳು ವರದಿಯಾಗಿವೆ.
ಈವರೆಗೆ 47 ಜನರನ್ನು ಆಸ್ಪತ್ರೆಯಿಂದ ಡಿಸ್ಚಾರ್ಜ್ ಮಾಡಲಾಗಿದೆ, 47 ಮಂದಿ ಐಸಿಯುನಲ್ಲಿದ್ದಾರೆ. 21 ರೋಗಿಗಳಿಗೆ ವೆಂಟಿಲೇಟರ್ ಅಳವಡಿಸಿ ಚಿಕಿತ್ಸೆ ನೀಡಲಾಗುತ್ತಿದೆ ಎಂದೂ ತಿಳಿಸಿದ್ದಾರೆ.




