ಕಾಸರಗೋಡು: ಜಿಲ್ಲೆಯಲ್ಲಿ ಕೇರಳ ರಾಜ್ಯ ಕೋಳಿ ಯೋಜನೆ ಆರಂಭಿಸಲು ಫಾರ್ಮ್ ಸೂಪರ್‍ವೈಸರ್ ನೇಮಕಾತಿ ನಡೆಸಲಾಗುವುದು. ಪೌಲ್ಟ್ರಿ ಪೆÇ್ರಡಕ್ಷನ್ ಆಂಡ್ ಬಿಸಿನೆಸ್ ಮ್ಯಾನೇಜ್ಮೆಂಟ್ ನಲ್ಲಿ ಪದವಿ ಅಥವಾ ಪೌಲ್ಟ್ರಿ ಪೆÇ್ರಡಕ್ಷನ್ ನಲ್ಲಿ ಡಿಪೆÇ್ಲೀಮ, ಕಂಪ್ಯೂಟರ್ ಜ್ಞಾನ ಮತ್ತು ದ್ವಿಚಕ್ರ ವಾಹನ ಪರವಾನಗಿ ಅರ್ಹತೆಯಾಗಿದೆ.
ಗರಿಷ್ಠ ವಯಸ್ಸಿನ ಮಿತಿ 30 ವರ್ಷಗಲಾಗಿದ್ದು (01/02/2025 ರಂದು 30 ವರ್ಷಗಳನ್ನು ಮೀರಬಾರದು). ಪ್ರತಿ ತಿಂಗಳಿಗೆ 15000+5000 ಟಿಎ ನೀಡಲಾಗುವುದು. ಅರ್ಜಿ ಫೆÇೀರ್ಮ್ www.keralachicken.org.in ಎಂಬ ವೆಬ್ ಸೈಟ್ ನಲ್ಲಿ ಲಭ್ಯವಿದೆ. ಆಸಕ್ತ ಅಭ್ಯರ್ಥಿಗಳು ಪ್ರಮಾಣಪತ್ರಗಳ ನಕಲು ಮತ್ತು ಕುಟುಂಬಶ್ರೀ ಸದಸ್ಯತ್ವ ಸಹಿತ ಫೆಬ್ರವರಿ 26 ರೊಳಗೆ ಅಂಚೆ ಮೂಲಕ ಅಥವಾ ನೇರವಾಗಿ ಅರ್ಜಿ ಸಲ್ಲಿಸಬಹುದು. ಪ್ರಸಕ್ತ ಇತರ ಜಿಲ್ಲೆಗಳಲ್ಲಿ ಕೆ.ಬಿ.ಎಫ್.ಪಿ.ಸಿ ಎಲ್ ನ ಫಾರ್ಮ್ ಸೂಪರ್‍ವೈಸರ್ ಆಗಿ ಸೇವೆ ಸಲ್ಲಿಸುತ್ತಿರುವ ಅಧಿಕಾರಿಗಳು ಈ ಹುದ್ದೆಗೆ ಅರ್ಜಿ ಸಲ್ಲಿಸುವ ಅಗತ್ಯವಿಲ್ಲ. ಜಿಲ್ಲಾ ಮಿಷನ್ ಸಂಯೋಜಕರು, ಕುಟುಂಬಶ್ರೀ ಜಿಲ್ಲಾ ಮಿಷನ್ ಕಛೇರಿ, ಸಿವಿಲ್ ಸ್ಟೇಶನ್ ವಿದ್ಯಾನಗರ, ಕಾಸರಗೋಡು -671123 ಎಂಬ ವಿಳಾಸಕ್ಕೆ ಅರ್ಜಿ ಸಲ್ಲಿಸಬಹುದು. ಇ ಬಗ್ಗೆ ಮಾಹಿತಿಗಾಗಿ (04994 256111, 7012766725) ಎಂಬ ಸಂಖ್ಯೆ ಸಂಪರ್ಕಿಸುವಂತೆ ಪ್ರಕಟಣೆ ತಿಳಿಸಿದೆ.




