ಕಾಸರಗೋಡು: ಅರಣ್ಯ ಇಲಾಖೆಯ ಸಾಮಾಜಿಕ ಅರಣ್ಯ ವಿಭಾಗ ಕೊಟ್ಟಂಚೇರಿ ವನ ವಿದ್ಯಾಲಯದಲ್ಲಿ ಆಯೋಜಿಸಿದ್ದ 'ಹಸಿರು ವನ ಸಾಹಿತ್ಯ ಸಹವಾಸ ಶಿಬಿರ' ಸಮಾರೋಪಗೊಂಡಿತು. ಎರಡು ದಿನಗಳ ಕಾಲ ನಡೆದ ಶಿಬಿರವನ್ನು ಖ್ಯಾತ ಸಾಹಿತಿ, ಪರಿಸರ ಹೋರಾಟಗಾರ ಡಾ.ಅಂಬಿಕಾಸುತನ್ ಮಾಂಗಾಡ್ ಉದ್ಘಾಟಿಸಿ ಮಾತನಾಡಿ, ಮನುಷ್ಯನ ಅತಿಯಾದ ವ್ಯಾಮೋಹದಿಂದ ಪರಿಸರ ನಾಶಗೊಳ್ಳುತ್ತಿದ್ದು, ಇದು ಇಂದಿನ ಅನಾಹುತಗಳಿಗೆ ಮುಖ್ಯ ಕಾರಣವಾಗಿದೆ. ಅರಣ್ಯ ಜಿವಿಗಳಿಗೂ ಬದುಕುವ ಹಕ್ಕಿದೆ. ವನ್ಯಮೃಗಗಳ ವಾಸಸ್ಥಳ ಕಬಳಿಸಿದರೆ, ಅವುಗಳು ನಾಡಿಗಿಳಿದು ಉಪಟಳ ನೀಡುವುದು ಸಹಜ. ಪರಿಸರ ಸಂರಕ್ಷಣೆಯಿಂದ ಮಾತ್ರ ಪ್ರಾಕೃತಿಕ ಸಮತೋಲನ ಕಾಪಾಡಿಕೊಳ್ಳಲು ಸಾಧ್ಯ ಎಂಬುದಾಗಿ ತಿಳಿಸಿದರು.
ಕವಿ ಮತ್ತು ಮುಖ್ಯ ವನ್ಯಜೀವಿ ವಾರ್ಡನ್ ಪ್ರಮೋದ್ ಜಿ ಕೃಷ್ಣನ್ ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು. ಸಾಮಾಜಿಕ ಅರಣ್ಯ ವಿಭಾಗದ ಉಪ ಅರಣ್ಯ ಸಂರಕ್ಷಣಾಧಿಕಾರಿ ಪಿ. ಬಿಜು, ವಲಯ ಅರಣ್ಯಾಧಿಕಾರಿ ಕೆ.ಅಶ್ರಫ್, 'ಸೀಕ್'ಸಂಘಟನೆ ಅದ್ಯಕ್ಷ ಸಿ. ರಾಜನ್, ರೇಂಜ್ ಆಫೀಸರ್ ಗಳಾದ ಸೊಲೊಮನ್ ಟಿ.ಜಿ, ಪಿ. ರತೀಶನ್, ಕೆ.ಗಿರೀಶ್, ಡಿಪೆÇೀ ಅಧಿಕಾರಿ ಕೆ.ಇ.ಬಿಜುಮೋನ್ ಉಪಸ್ಥಿತರಿದ್ದರು. ಪ್ರಕೃತಿ, ವಿಜ್ಞಾನ ಮತ್ತು ಸಾಹಿತ್ಯ ಎಂಬ ವಿಷಯದ ಬಗ್ಗೆ ಸೀಕ್ ನಿರ್ದೇಶಕ ಟಿ.ಪಿ.ಪದ್ಮನಾಭನ್ ತರಗತಿ ನಡೆಸಿದರು.
ಕಾದಂಬರಿಕಾರ ವಿನೋಯ್ ಥಾಮಸ್, ಕವಿ ಪದ್ಮನಾಭನ್ ಬ್ಲಾತ್ತೂರ್ ಮತ್ತು ಮಾಧವನ್ ಪುರಚೇರಿ, ಡಾ.ಪಿ.ಕೆ.ಭಾಗ್ಯಲಕ್ಷ್ಮಿ, ಲೇಖಕರದ ಮೃದುಲ್ ವಿಎಂ ಮತ್ತು ಅರ್ಜುನ್ ಕೆ, ವಿ ಸಂಸ್ಥೆಯ ಸಂಚಾಲಕ ಎಂ.ವಿ.ಸಂತೋಷ್‍ಕುಮಾರ್, ಹುಬಾಶಿಕಾ, ಇ ಉನ್ನಿಕೃಷ್ಣನ್ ಮತ್ತು ಸುಶ್ಮಿತಾ ಚಂದ್ರನ್, ಉಪ ವಲಯ ಅರಣ್ಯಾಧಿಕಾರಿ ಎನ್.ವಿ.ಸತ್ಯನ್ ಸಂವಾದದಲ್ಲಿ ಪಾಲ್ಗೊಂಡಿದ್ದರು.





