ಕಾಸರಗೋಡು: ಆದಾಯ ತೆರಿಗೆ ಮಿತಿಯನ್ನು 7 ಲಕ್ಷದಿಂದ 12 ಲಕ್ಷಕ್ಕೆ ಏರಿಸಿರುವ ಕೇಂದ್ರ ಸರ್ಕಾರದ ಕ್ರಮ ಅತ್ಯಂತ ಶ್ಲಾಘನೀಯ ಹಾಗೂ ಸ್ವಾಗತಾರ್ಹ ಎಂದು ಕೇರಳ ಎನ್. ಜಿ. ಓಹ್ ಸಂಘದ ರಾಜ್ಯ ಕಾರ್ಯಕಾರಿಣಿ ಸದಸ್ಯ ಪಿ. ಪೀತಾಬರನ್ ತಿಳಿಸಿದ್ದಾರೆ.
ಅವರು ಕೇರಳ ಎನ್.ಜಿ. ಸಂಘ್ ಕಾಸರಗೋಡು ಸಿವಿಲ್ ಸ್ಟೇಷನ್ ವಠಾರದಲ್ಲಿ ಸಂಘದ ವತಿಯಿಂದ ನಡೆದ ಆಹ್ಲಾದ ಮೆರವಣಿಗೆ ಉದ್ಘಾಟಿಸಿ ಮಾತನಾಡಿದರು. ಎಡರಂಗ ಸರ್ಕಾರವು ಕೇರಳ ರಾಜ್ಯ ಸರ್ಕಾರಿ ನೌಕರರಿಗೆ ಶೇ. 22 ಡಿಎ ಬಾಕಿಯಿರಿಸಿಕೊಂಡು ವಂಚಿಸುತ್ತಿದ್ದರೆ, ಕೇರಳ ಸೇರಿದಂತೆ ಭಾರತದ ಎಲ್ಲಾ ಸರ್ಕಾರಿ ನೌಕರರು 8 ಕಂತುಗಳ ತುಟ್ಟಿಭತ್ಯೆಗೆ ಸಮಾನವಾದ ಆರ್ಥಿಕ ಲಾಭವನ್ನು ಈ ಮೂಲಕ ಪಡೆಯಲು ಸಾಧ್ಯವಾಘಲಿದೆ. ಪಡೆಯುತ್ತಾರೆ. ವ್ಯಾಪಾರಿಗಳಿಗೂ ಇದರ ಲಾಭ ಲಭ್ಯವಾಗಲಿರುವ ಹಿನ್ನೆಲೆಯಲ್ಲಿ ಜನ ಸಾಮಾನ್ಯರಿಗೂ ಇದರ ಪ್ರಯೋಜನ ತಲುಪುವ ಮೂಲಕ ದುಪ್ಪಟ್ಟು ಲಾಭವಾಗಲಿದೆ. ಕೇವಲ ರಾಜಕೀಯ ದೃಷ್ಟಿಯಿಂದ ನೋಡುತ್ತಿರುವ ಸಂಘಟನೆಗಳು ಮಾತ್ರ ಕೇಂದ್ರ ಸರ್ಕಾರದ ಈ ಮಹತ್ವದ ತೀರ್ಮಾನವನ್ನು ವಿರೋಧಿಸುತ್ತಿವೆ. ಆದರೆ ಎನ್‍ಜಿಒ ಸಂಘಟನೆ ಯಾವುದೇ ಸರ್ಕಾರದ ಜನಪರ ಕಾರ್ಯಕ್ರಮಗಳನ್ನು ಎಂದಿಗೂ ಸ್ವಾಗತಿಸಲಿದೆ ಎಂದು ತಿಳಿಸಿದರು.
ಕೇರಳ ಎನ್. ಜಿ. ಸಂಘ ಕಾಸರಗೋಡು ಜಿಲ್ಲಾಧ್ಯಕ್ಷ ರಂಜಿತ್ ಕೆ ಜಿಲ್ಲಾ ಖಜಾಂಚಿ ರವಿಕುಮಾರ್ ಜಿಲ್ಲಾ ಸಮಿತಿ ಸದಸ್ಯ ರವಿ ಕೊಟ್ಟೋಡಿ, ಸಂತೋಷ ವಿ.ಕೆ, ಕರುಣಾಕರನ್ ಹಾಗೂ ಸಿ.ಅಭಿಜಿತ್ ಮೆರವಣಿಗೆ ನೇತೃತ್ವ ವಹಿಸಿದ್ದರು.





