ಮುಳ್ಳೇರಿಯ: ಮಧೂರು ಶ್ರೀ ಮದನಂತೇಶ್ವರ ಸಿದ್ಧಿವಿನಾಯಕ ದೇವಸ್ಥಾನ ಜೀರ್ಣೋದ್ಧಾರ ಬ್ರಹ್ಮಕಲಶೋತ್ಸವದ ಅಂಗವಾಗಿ ಮಜಕ್ಕಾರು ಶ್ರೀ ಧೂಮಾವತಿ ವಿಷ್ಣುಮೂರ್ತಿ ದೇವಸ್ಥಾನದಲ್ಲಿ ಭಾನುವಾರ ಅಂಬುಕುಂಜೆ ಮಜಕ್ಕಾರು ಪ್ರಾದೇಶಿಕ ಸಮಿತಿ ರೂಪೀಕರಣ ಸಭೆ ಸಭೆ ಜರಗಿತು.
ಬಾಲಕೃಷ್ಣ ಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು. ಸೀತಾರಾಮ ಬಳ್ಳುಳ್ಳಾಯ ಉದಾಟಿಸಿದರು. ಗೋವಿಂದ ಬಳ್ಳಮೂಲೆ ಸಮಿತಿಯ ಕಾರ್ಯಯೋಜನೆಗಳ ಬಗ್ಗೆ ಸಮಗ್ರ ಮಾಹಿತಿಗಳನ್ನಿತ್ತರು. ಸಭೆಯಲ್ಲಿ ಸಮಿತಿಯ ಕಾರ್ಯಕಾರೀ ಸಮಿತಿ ರೂಪೀಕರಿಸಲಾಯಿತು.
ರಕ್ಷಾಧಿಕಾರಿಯಾಗಿ ಗೋಪಾಲಕೃಷ್ಣ ಭಟ್ ಅಂಬುಕುಂಜೆ, ಗೌರವಾಧ್ಯಕ್ಷರಾಗಿ ಕೇಶವ ರಾವ್ ಅಂಬುಕುಂಜೆ, ಅಧ್ಯಕ್ಷರಾಗಿ ಬಾಲಕೃಷ್ಣ ಶೆಟ್ಟಿ, ಉಪಾಧ್ಯಕ್ಷರಾಗಿ ಯಂ. ನಾರಾಯಣ ರಾವ್, ಪ್ರವೀಣ ಅಂಬುಕುಂಜೆ, ಸರೋಜಾ ಎನ್ ಭಟ್, ಉದಯಕುಮಾರ್, ಪ್ರಧಾನ ಕಾರ್ಯದರ್ಶಿಯಾಗಿ ರವೀಂದ್ರ ಅಂಬುಕುಂಜೆ, ಕಾರ್ಯದರ್ಶಿಗಳಾಗಿ ರಮೇಶ್ ಮಜಕ್ಕಾರು, ಪ್ರಕಾಶ್ ಕಟ್ಟದ ಮನೆ, ಹರಿಣಿ ಅಶೋಕ್, ಭರತ್ ಅಂಬುಕುಂಜೆ, ಕೋಶಾಧಿಕಾರಿಯಾಗಿ ಶಂಕರ ಪಾಟಾಳಿ, ಶ್ರಮದಾನ ಸಂಯೋಜಕರಾಗಿ ರಾಜೇಶ್ ಕೊಡಿಯಾಲ್, ಅನೀಶ್ ಆಚಾರ್ಯ, ಹಸಿರು ವಾಣಿ ಸಂಯೋಜಕರಾಗಿ ರವೀಂದ್ರ ರೈ ಕುರಿಕ್ಕಲಡ್ಕ, ಪದ್ಮನಾಭ ರೈ, ಸತ್ಯನಾರಾಯಣ ರಾವ್, ರಾಘವನ್, ಮನಮೋಹನ್ ಕಡ್ಪಂಗಲ್ಲು, ಮಾತೃ ಸಮಿತಿ ಅಧ್ಯಕ್ಷೆಯಾಗಿ ಉಷಾಕುಮಾರಿ ಮತ್ತು ಇತರ ಸದಸ್ಯರನ್ನು ಆಯ್ಕೆಮಾಡಲಾಯಿತು. ಪ್ರಧಾನ ಸಂಯೋಜಕಾರಾಗಿ ಕೃμÉ್ಣೂೀಜಿ ರಾವ್ ಮಾಸ್ತರ್ ಅವರನ್ನು ಆಯ್ಕೆಮಾಡಲಾಯಿತು.
ಸಭೆಯಲ್ಲಿ ನಿವೇದನಾ ಪತ್ರ ಮತ್ತು ರಶೀದಿ ಪುಸ್ತಕಗಳನ್ನು ಸಮಿತಿಯವರಿಗೆ ಹಸ್ತಾ0ತರಿಸಲಾಯಿತು. ಆಯ್ಕೆ ಮಾಡಲಾದ ಪದಾಧಿಕಾರಿಗಳು ಜವಾಬ್ದಾರಿ ಸ್ವೀಕರಿಸಿದ ಬಳಿಕ ತಮ್ಮ ಅಭಿಪ್ರಾಯಗಳನ್ನು ವ್ಯಕ್ತಪಡಿಸಿದರು.
ಈ ಸಂದರ್ಭದಲ್ಲಿ ಹರಿಶ್ಚಂದ್ರ ಅಂಬುಕುಂಜೆ ಅವರು ಕೋಶಾಧಿಕಾರಿ ಶಂಕರ ಪಾಟಾಳಿಯವರಿಗೆ ದೇಣಿಗೆ ನೀಡಿ ಸಂಗ್ರಹ ಅಭಿಯಾ£ಕ್ಕೆ ಚಾಲನೆ ನೀಡಿದರು. ಕೃಷ್ಣೋಜಿರಾವ್ ಮಾಸ್ತರ್ ಪ್ರಸ್ತಾವಿಕವಾಗಿ ಮಾತನಾಡಿ ಸ್ವಾಗತಿಸಿದರು. ಉಷಾಕುಮಾರಿ ವಂದಿಸಿದರು.

.jpg)
.jpg)

