ಬದಿಯಡ್ಕ: ಯಕ್ಷಮಿತ್ರರು ಮತ್ತು ಊರ ಹತ್ತುಸಮಸ್ಥರು ಬಾಂಜತ್ತಡ್ಕ ಇವರ ವತಿಯಿಂದ ಸುಂಕದಕಟ್ಟೆ ಶ್ರೀ ಅಂಬಿಕಾ ಅನ್ನಪೂರ್ಣೇಶ್ವರೀ ಪ್ರಸಾದಿತ ದಶಾವತಾರ ಯಕ್ಷಗಾನ ಮಂಡಳಿ ಸುಂಕದ ಕಟ್ಟೆ ಇವರಿಂದ ಫೆ.16ರಂದು ಭಾನುವಾರ ಬದಿಯಡ್ಕ ಸಮೀಪದ ಬಾಂಜತ್ತಡ್ಕದಲ್ಲಿ ರಾತ್ರಿ 7 ರಿಂದ ಶ್ರೀ ದೇವಿ ಮಹಾತ್ಮೆ ಯಕ್ಷಗಾನ ಬಯಲಾಟ ನಡೆಯಲಿದೆ. ಈ ಸಂದರ್ಭದಲ್ಲಿ ನಡೆಯಲಿರುವ ಸಭಾ ಕಾರ್ಯಕ್ರಮದಲ್ಲಿ ರಾಮ ಮಾಸ್ತರ್ ಇಕ್ಕೇರಿ ಅಧ್ಯಕ್ಷತೆ ವಹಿಸುವರು. ನಾಟ್ಯಗುರು ಜಯರಾಮ ಪಾಟಾಳಿ ಪಡುವಲೆ ಮುಖ್ಯ ಅತಿಥಿಗಳಾಗಿ ಭಾಗವಹಿಸುವರು. ಉಪ್ಲೇರಿ ಮಂತ್ರಮೂರ್ತಿ ಗುಳಿಗ ಸನ್ನಿಧಿಯ ಪ್ರಧಾನ ಕರ್ಮಿ ಗೋಪಾಲಕೃಷ್ಣ ಕುಲಾಲ್ ವಾಂತಿಚ್ಚಾಲು ಮುಖ್ಯ ಭಾಷಣ ಮಾಡಲಿರುವರು. ಗ್ರಾಮ ಪಂಚಾಯಿತಿ ಸದಸ್ಯ ಈಶ್ವರ ಮಾಸ್ತರ್, ಧಾರ್ಮಿಕ ಮುಂದಾಳು ಪುರುಷೋತ್ತಮ ಭಟ್ ಮಿಂಚಿನಡ್ಕ ಶುಭಾಶಂಸನೆಗೈಯಲಿರುವರು.
ಯಕ್ಷಗಾನ ಬಯಲಾಟಕ್ಕೆ ಅತಿಥಿ ಭಾಗವತರಾಗಿ ಗಿರೀಶ್ ಕಕ್ಕೆಪದವು, ಭಾಗವತರಾಗಿ ಶಿವಪ್ರಸಾದ್ ಎಡಪದವು, ಸುೀಶ್ ಪಾಣಾಜೆ, ಹಿಮ್ಮೆಳದಲ್ಲಿ ಹಾಗೂ ಮುಮ್ಮೇಳದಲ್ಲಿ ಪ್ರಸಿದ್ಧ ಕಲಾವಿದರು ಯಕ್ಷರಂಗದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ರಾತ್ರಿ ಭೋಜನ ಹಾಗೂ ಉಪಹಾರದ ವ್ಯವಸ್ಥೆಯನ್ನು ಮಾಡಲಾಗಿದ್ದು, ಕಲಾಸಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳಬೇಕೆಂದು ಸಂಘಟಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

