ಕಾಸರಗೋಡು: "ನಮ್ಮ ಕಾಸರಗೋಡು" ಜಿಲ್ಲಾಧಿಕಾರಿಯವರ ಮುಖಾಮುಖಿ ಕಾರ್ಯಕ್ರಮದಲ್ಲಿ ಜಿಲ್ಲಾಧಿಕಾರಿ ಕೆ. ಇಂಬಾಶೇಖರ್ ಕಾಸರಗೋಡು ಜಿಲ್ಲೆಯ ಯಕ್ಷಗಾನ ಕಲಾವಿದರೊಂದಿಗೆ ಸಂವಾದ ನಡೆಸಿದರು. ಪಾರ್ತಿಸುಬ್ಬ ಯಕ್ಷಗಾನ ಅಕಾಡೆಮಿಯ ಚಟುವಟಿಕೆಗಳನ್ನು ಪ್ರಾರಂಭಿಸಬೇಕು ಹಾಗೂ ಯಕ್ಷಗಾನ ಕಲಾವಿದರಿಗೆ ಪಿಂಚಣಿ ಮೊದಲಾದ ಸವಲತ್ತುಗಳನ್ನು ಒದಗಿಸಬೇಕೆಂದು ಕಲಾವಿದರು ಬೇಡಿಕೆಯನ್ನು ಮುಂದಿರಿಸಿದರು.
ಹೆಚ್ಚಿನ ಸಂಖ್ಯೆಯಲ್ಲಿ ಕಲಾವಿದರನ್ನು ಒಟ್ಟುಸೇರಿಸಿ, ಮುಂದೆ ದೊಡ್ಡ ಮಟ್ಟದಲ್ಲಿ ಸಭೆಯನ್ನು ಆಯೋಜಿಸುವ ಮೂಲಕ ಯಕ್ಷಗಾನ ಅಕಾಡೆಮಿಗೆ ಸಂಬಂದಿಸಿದ ಚಟುವಟಿಕೆಗಳನ್ನು ಪರಿಶೀಲಿಸಲಾಗುವುದು ಎಂದು ಜಿಲ್ಲಾಧಿಕಾರಿ ತಿಳಿಸಿದರು. ಜಿಲ್ಲಾಧಿಕಾರಿ ಕಛೇರಿಯ ವಿಡಿಯೋ ಸಮ್ಮೇಳನ ಸಭಾಂಗಣದಲ್ಲಿ ನಡೆದ ಸಭೆಯಲ್ಲಿ ಜಿಲ್ಲಾ ಕೈಗಾರಿಕಾ ಕೇಂದ್ರದ ವ್ಯವಸ್ಥಾಪಕಿ ಆರ್ ರೇಖಾ, ಕಲಾವಿದರಾದ ಜಿ. ಸುರೇಶ್ ಕುಮಾರ್, ಚಂದ್ರಮೋಹನ ಕೂಡ್ಲು, ಬಿ ವಾಮನ ಆಚಾರ್ಯ, ಸಾಂಸ್ಕøತಿಕ ಕಾರ್ಯಕರ್ತರಾದ ಸುರೇಶ್ ಬೇಕಲ್ ಮೊದಲಾದವರು ಉಪಸ್ಥಿತರಿದ್ದರು.





