ಕಾಸರಗೋಡು: ನಗರದ ಜನರಲ್ ಆಸ್ಪತ್ರೆ, ಐಎಂಎ ಕಾಸರಗೋಡು ಶಾಖೆ ಹಾಗೂ ಸೀಮೆಟ್ ನಸಿರ್ಂಗ್ ಕಾಲೇಜು ವತಿಯಿಂದ ಕುಷ್ಠರೋಗ ನಿವಾರಣಾ ದಿನವನ್ನು ಆಚರಿಸಲಾಯಿತು. ಐಎಂಎ ಜಿಲ್ಲಾ ಸಮಿತಿ ಅಧ್ಯಕ್ಷ ಡಾ.ಬಿ.ನಾರಾಯಣ ನಾಯ್ಕ್ ಸಮಾರಂಭ ಉದ್ಘಾಟಿಸಿದರು.
ಜನರಲ್ ಆಸ್ಪತ್ರೆಯನ್ನು ಉಪ ಅಧೀಕ್ಷಕ ಡಾ. ಜಮಾಲ್ ಅಹ್ಮದ್ ಅಧ್ಯಕ್ಷತೆ ವಹಿಸಿದ್ದರು. ಜನರಲ್ ಆಸ್ಪತ್ರೆ ಅಧೀಕ್ಷಕ ಡಾ. ಶ್ರೀಕುಮಾರ್ ಮುಕುಂದನ್ ಪ್ರಧಾನ ಭಾಷಣ ಮಾಡಿದರು. ಚರ್ಮರೋಗ ತಜ್ಞೆ ಡಾ. ಸಪ್ನಾ ಎ.ಬಿ ಕುಷ್ಠ ರೋಗದ ಬಗ್ಗೆ ಜಾಗೃತಿ ತರಗತಿ ನಡೆಸಿದರು. ಐಎಂಎ ಕ್ರಿಯಾ ಸಮಿತಿ ಅಧ್ಯಕ್ಷ ಡಾ.ಜನಾರ್ದನ ನಾಯ್ಕ್ ಸಿ.ಎಚ್, ಡಾ.ಗೋಪಾಲಕೃಷ್ಣ ಭಟ್, ಡಾ. ಅಣ್ಣಪ್ಪ ಕಾಮತ್ ಹಾಗೂ ಸೀಮೆಟ್ ವಿದ್ಯಾರ್ಥಿ ಶ್ರೀಧರ್ಶ್ ಎಂ ಉಪಸ್ಥಿತರಿದ್ದರು. ಸೀ ಮೆಟ್ ನಸಿರ್ಂಗ್ ಕಾಲೇಜು ವಿದ್ಯಾರ್ಥಿಗಳಿಂದ ಸ್ಕಿಟ್ ಮತ್ತು ಫ್ಲಾಶ್ ಮಾಬ್ ನಡೆಯಿತು.





