ಕಾಸರಗೋಡು: ಟ್ರಾನ್ಸ್‍ಪೋರ್ಟ್ ಡೆಮಾಕ್ರೆಟಿಕ್ ಫೆಡರೇಶನ್(ಟಿಡಿಎಫ್)ಕಾಸರಗೋಡು ಜಿಲ್ಲಾ ಸಮಿತಿ ವತಿಯಿಂದ ಓಪನ್ ಜನರಲ್‍ಬಾಡಿ ಹಾಗೂ ಮುಷ್ಕರ ವಿಷದೀಕರಣ ಸಭೆ ಕಾಸರಗೋಡು ಕೆಎಸ್ಸಾರ್ಟಿಸಿ ಡಿಪೋ ಸನಿಹ ನಡೆಯಿತು.
ಟಿಡಿಎಫ್ ಸಂಘಟನೆ ರಾಜ್ಯ ಉಪಾಧ್ಯಕ್ಷ ಬಿಜು ಜಾನ್ ಸಮಾರಂಭ ಉದ್ಘಾಟಿಸಿದರು. ಟಿಡಿಎಫ್ ಅಧ್ಯಕ್ಷ ಪಿ.ಪಿ.ಸುಧೀರ್ ಅಧ್ಯಕ್ಷತೆ ವಹಿಸಿದ್ದರು. ಲೀಡರ್ಸ್ ವರ್ಕರ್ಸ್ ಯೂನಿಯನ್ ರಾಜ್ಯ ಕಾರ್ಯದರ್ಶಿ ಎ.ಎನ್.ರಾಜೇಶ್, ಐಎನ್‍ಟಿಯುಸಿ ಜಿಲ್ಲಾ ಉಪಾಧ್ಯಕ್ಷ ಎಂ.ವಿ ಪದ್ಮನಾಭನ್, ವರ್ಕರ್ಸ್ ಯೂನಿಯನ್ ಅಧ್ಯಕ್ಷ ಜಲೀಲ್ ಮಲ್ಲಂ, ಜಿಲ್ಲಾ ಕಾರ್ಯದರ್ಶಿ ವಿನೋದ್ ಜೋಸೆಫ್, ಎ.ಮಧು, ವಿ.ಕೆ.ಪವಿತ್ರನ್ ಉಪಸ್ಥಿತರಿದ್ದರು. ಟಿಡಿಎಫ್ ಕಾರ್ಯದರ್ಶಿ ಪಿ.ಕೆ.ಶಂಶುದ್ದೀನ್ ಸ್ವಾಗತಿಸಿದರು.
ವೇತನ ಹಾಗೂ ಪಿಂಚಣಿ ಸಕಾಲಿಕವಾಗಿ ವಿತರಿಸಬೇಕು, ಬಾಕಿಯಿರಿಸಿಕೊಂಡಿರುವ ಡಿ.ಎ ಮೊತ್ತ ಸಂಪೂರ್ಣ ವಿತರಿಸಬೇಖು, ಕೆಎಸ್‍ಆರ್‍ಟಿಸಿ ಬಸ್ ಸಂಚಾರದ ರೂಟ್‍ಗಳನ್ನು ಸಂರಕ್ಷಿಸಬೇಕು, ಕೆಎಸ್‍ಆರ್‍ಟಿಸಿಗೆ ಹೊಸ ಬಸ್‍ಗಳನ್ನು ಖರೀದಿಸಬೇಕು, 16 ದೈಹಿಕ ಕರ್ತವ್ಯದ ನಿಬಂಧನೆ ಹಿಂತೆಗೆದುಕೊಳ್ಳಬೇಕು ಸೇರಿದಂತೆ ವಿವಿಧ ಬೇಡಿಕೆ ಮುಂದಿರಿಸಿ ಟಿಡಿಎಫ್ ಫೆ. 4ರಂದು ಕೆಸ್ಸಾರ್ಟಿಸಿ ಕಾರ್ಮಿಕರು ಹಮ್ಮಿಕೊಂಡಿರುವ ಮುಷ್ಕರದ ಪೂರ್ವಭಾವಿಯಾಗಿ ಮುಷ್ಕರ ವಿಷದೀಕರಣ ಸಭೆ ಆಯೋಜಿಸಲಾಗಿತ್ತು.




