ಕಾಸರಗೋಡು: ನಾಪತ್ತೆಯಾಗಿದ್ದ ಕೂಲಿ ಕಾರ್ಮಿಕ ಕುತ್ತಿಕೋಲು ವೆಳ್ಳಾಲ ನಿವಾಸಿ ನಾರಾಯಣ ಎಂಬವರ ಪುತ್ರ ರಾಜೇಶ್(25)ಮೃತದೇಹ ಅತ್ತನಾಡಿ ಸೇತುವೆಯ ಸನಿಹ ಹೊಳೆಯಲ್ಲಿ ಪತ್ತೆಯಾಗಿದೆ. ಮೃತದೇಹ ನೀರಿಂದ ಮೇಲಕ್ಕೆತ್ತಿ ಕಾಸರಗೋಡು ಜನರಲ್ ಆಸ್ಪತ್ರೆಗೆ ಸಾಗಿಸಲಾಗಿದೆ. ಪ್ರಕರಣಕ್ಕೆ ಸಂಬಂಧಿಸಿ ಇವರ ಸ್ನೇಹಿತನನ್ನು ಪೊಲೀಸರು ವಶಕ್ಕೆ ತೆಗೆದುಕೊಂಡು ವಿಚಾರಣೆ ನಡೆಸುತ್ತಿದ್ದಾರೆ.
ರಾಜೇಶ್ ಅವರು ಅಡೂರು ನಾಗತ್ತಮೂಲೆಯಲ್ಲಿನ ಪತ್ನಿ ಮನೆಯಲ್ಲಿ ವಾಸಿಸುತ್ತಿದ್ದರು. ಫೆ. 22 ರಂದು ಕೆಲಸದ ವೇತನ ಸಿಗಲಿದೆಯೆಂದು ಮನೆಯಿಂದ ಹೊರಟಿದ್ದ ರಾಜೇಶ್ ನಾಪತ್ತೆಯಾಗಿದ್ದರು. ಈ ಬಗ್ಗೆ ಪತ್ನಿ ಅಶ್ವತಿ ಆದೂರು ಠಾನೆ ಪೆÇಲೀಸರಿಗೆ ದೂರು ನೀಡಿದ್ದರು. ಅಂದು ಸ್ನೇಹಿತನ ಜತೆ ಗಾಳಿಮುಖಕ್ಕೆ ತೆರಳಿದ್ದ ರಾಜೇಶ್, ರಾತ್ರಿ ಅತ್ತನಾಡಿ ಸೇತುವೆಯ ವಠಾರದಲ್ಲಿ ಕುಳಿತು ಸ್ನೇಹಿತನೊಂದಿಗೆ ಮದ್ಯ ಸೇವಿಸಿದ್ದು, ನಂತರ ರಾಜೇಶ್ ನಾಪತ್ತೆಯಾಗಿದ್ದಾರೆನ್ನಲಾಗಿದೆ. ಈ ಮದ್ಯೆ ರಾಜೇಶ್ ಮನೆಗೆ ತೆರಳಿದ್ದ ಸ್ನೇಹಿತ ರಾಜೇಶ್ ಅವರದ್ದೆಂದು ತಿಳಿಸಿ ಮೊಬೈಲು ನೀಡಿ ತೆರಳಿರುವುದು ಸಂಶಯಕ್ಕೆ ಕಾರಣವಾಗಿತ್ತು. ಈ ಹಿನ್ನೆಲೆಯಲ್ಲಿ ಆದೂರು ಪೆÇಲೀಸರು ರಾಜೇಶ್ ಸ್ನೇಹಿತನನ್ನು ವಶಕ್ಕೆ ತೆಗೆದುಕೊಂಡಿದ್ದಾರೆ. ಸವಿನ ಬಗ್ಗೆ ರಾಜೇಶ್ ಸಂಬಂಧಿಕರು ಸಂಶಯ ವ್ಯಕ್ತಪಡಿಸಿದ್ದಾರೆ.




