HEALTH TIPS

ನವೀಕೃತ ಪಾಟ್ಲದಳ ಎಸ್.ಟಿ.ಸಮುದಾಯ ಕೇಂದ್ರ ಹಸ್ತಾಂತರ

ಪೆರ್ಲ: ಎಣ್ಮಕಜೆ ಗ್ರಾಮ ಪಂಚಾಯತಿ 11ನೇ ವಾರ್ಡಿನ ಪಾಟ್ಲದಳ ಪರಿಶಿಷ್ಟ ವರ್ಗದ ಸಮುದಾಯ ಕೇಂದ್ರವನ್ನು ಪಂಚಾಯತಿ ಯೋಜನೆಯಂತೆ ನವೀಕರಿಸಿ ಹಸ್ತಾಂತರಿಸಲಾಯಿತು. ಈ ಹಿಂದೆ ಪಾಳು ಬಿದ್ದ ಕಟ್ಟಡ ಶಿಥಿಲಾವಸ್ಥೆಯಲ್ಲಿದ್ದು 2024-25ರ ಯೋಜನೆಯಲ್ಲಿ ಇದನ್ನು ನವೀಕರಿಸಲಾಗಿದೆ. ಈ ಬಗ್ಗೆ ಕೀಲಿಕೈ ಹಸ್ತಾಂತರ ಕಾರ್ಯಕ್ರಮವನ್ನು ಎಣ್ಮಕಜೆ ಗ್ರಾ.ಪಂ.ಅಧ್ಯಕ್ಷ ಸೋಮಶೇಖರ್ ಜೆ.ಎಸ್. ಉದ್ಘಾಟಿಸಿದರು. 


ವಾರ್ಡ್ ಸದಸ್ಯ ರಾಧಾಕೃಷ್ಣ ನಾಯಕ್ ಶೇಣಿ ಅಧ್ಯಕ್ಷತೆವಹಿಸಿದ್ದರು.ಸಮುದಾಯ ಗುರಿಕಾರ ಶಿವನಾಯ್ಕ, ಎಸ್.ಟಿ.ಪ್ರಮೋಟರ್ ಸಂಧ್ಯಾ ಕೆ, ಗುತ್ತಿಗೆದಾರ ಆಶ್ರಫ್ ಬೆದ್ರಂಪಳ್ಳ ಮೊದಲಾದವರು ಉಪಸ್ಥಿತರಿದ್ದರು. ಈ ಸಂದರ್ಭದಲ್ಲಿ ಸಮುದಾಯ ಕೇಂದ್ರ ನಿರ್ವಹಣೆಗಾಗಿ ಸಮುದಾಯಿಕ ಸಮಿತಿಯೊಂದನ್ನು ರಚಿಸಿ ಜವಾಬ್ದಾರಿ ನೀಡಲಾಯಿತು. ರಾಜೇಶ್  ನಾಯ್ಕ್ (ಅಧ್ಯಕ್ಷರು), ಭಾರತಿ (ಕಾರ್ಯದರ್ಶಿ) ಹಾಗೂ ಕಾರ್ಯಕಾರಿ ಸಮಿತಿ ಸದಸ್ಯರಾಗಿ ಸಂಧ್ಯಾ ಕೆ, ತುಳಸಿ, ವಸಂತ ಕೆ.ಕೆ.ಕಾಡು, ಗೋವಿಂದ ನಾಯ್ಕ್, ಚಿತ್ರಕಲಾ ಬಲ್ತಕಲ್ಲು ಆಯ್ಕೆಯಾದರು.



ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries