ಬದಿಯಡ್ಕ: ಶ್ರೀರಾಮಚಂದ್ರಾಪುರ ಮಠದ ಶ್ರೀ ರಾಘವೇಶ್ವರ ಭಾರತೀ ಮಹಾಸ್ವಾಮಿಗಳು ಮಂಗಳವಾರ ಬದಿಯಡ್ಕ ಶ್ರೀ ಭಾರತೀ ವಿದ್ಯಾಪೀಠಕ್ಕೆ ಭೇಟಿನೀಡಿ ಶಾಲೆಯಲ್ಲಿ ನೂತನವಾಗಿ ನಿರ್ಮಾಣವಾಗಲಿರುವ ಭೋಜನಶಾಲಾ ಕಟ್ಟಡಕ್ಕೆ ಶಂಕುಸ್ಥಾಪನೆಗೈದರು.
ಇದೇ ಸಂದರ್ಭದಲ್ಲಿ ಆಡಳಿತ ಸಮಿತಿಯ ಸದಸ್ಯರು, ಅಧ್ಯಾಪಕ, ಸಿಬ್ಬಂದಿ ವರ್ಗ ಗುರುವಂದನೆಗೈÀು ಫಲಕಾಣಿಕೆ ಸಮರ್ಪಿಸಿ ಆಶೀರ್ವಾದ ಪಡೆದುಕೊಂಡರು. ಸಂಸ್ಥೆಯ ಪ್ರಗತಿಯ ಬಗ್ಗೆ ಸಮಿತಿಯ ಸದಸ್ಯರಿಗೆ ಮಾರ್ಗದರ್ಶನ ನೀಡಿದರು. ಅಧ್ಯಾಪಕ ವೃಂದದವರೊಂದಿಗೆ ಮಾತನಾಡಿ, ಉತ್ತಮ ಸಮಾಜ ನಿರ್ಮಾಣಕಾರ್ಯದಲ್ಲಿ ಅಧ್ಯಾಪಕರದ್ದೇ ಮುಖ್ಯ ಪಾತ್ರವಾಗಿರುತ್ತದೆ. ಉತ್ತಮ ನಡವಳಿಕೆಯೊಂದಿಗಿನ ಆಧುನಿಕ ವಿದ್ಯಾಭ್ಯಾಸದ ಜ್ಞಾನವನ್ನೂ ಧಾರೆಯೆರೆಯುತ್ತಾ ಅಧ್ಯಾಪನ ವೃತ್ತಿಯನ್ನು ಸಾರ್ಥಕಗೊಳಿಸಿ ಎಂದು ಆಶೀರ್ವದಿಸಿದರು. ಉತ್ತಮ ಜ್ಞಾನಸಂಪಾದನೆ ಮಾಡುತ್ತಾ ಸೂರ್ಯನು ಪ್ರಕಾಶಿಸುವಂತೆ ಬೆಳಕಾಗಿ ಬಾಳಿರಿ. ಕನ್ನಡ ಹೋರಾಟಗಾರರ ನಾಡಿನಲ್ಲಿ ಅಚ್ಚಕನ್ನಡ ಕಂಪನ್ನು ಪಸರಿಸುವುದರೊಂದಿಗೆ ಆಂಗ್ಲ ಭಾಷೆಯ ಪ್ರೌಢಿಮೆಯನ್ನೂ ಪಡೆದುಕೊಳ್ಳಿ ಎಂದರು.
ಶ್ರೀಮಠದ ಮಾತೃತ್ವಂ ವಿಭಾಗದ ಮುಖ್ಯಸ್ಥೆ ಈಶ್ವರಿ ಬೇರ್ಕಡವು, ಶಾಲಾ ಆಡಳಿತ ಮಂಡಳಿ ಅಧ್ಯಕ್ಷ ಜಯಪ್ರಕಾಶ್ ಪಜಿಲ, ಡಾ. ವೈ.ವಿ.ಕೃಷ್ಣಮೂರ್ತಿ, ಈಶ್ವರ ಭಟ್ ಹಳೆಮನೆ, ಮಧುಸೂದನ ತಿಮ್ಮಕಜೆ, ಕೆ.ಎನ್.ಭಟ್, ಜ್ಯೋತಿಷಿ ನವನೀತಪ್ರಿಯ ಕೈಪ್ಪಂಗಳ, ರಾಜಗೋಪಾಲ ಚುಳ್ಳಿಕ್ಕಾನ, ಡಾ.ಬೇ.ಸೀ.ಗೋಪಾಲಕೃಷ್ಣ ಭಟ್, ಶ್ಯಾಮ ಭಟ್ ಬೇರ್ಕಡವು, ಪಾಲಕರು, ಶ್ರೀಮಠದ ಶಿಷ್ಯವೃಂದದವರು ಪಾಲ್ಗೊಂಡಿದ್ದರು. ಮುಖ್ಯೋಪಾಧ್ಯಾಯ ಸತ್ಯನಾರಾಯಣ ಶರ್ಮ ಪಂಜಿತ್ತಡ್ಕ ನಿರೂಪಿಸಿದರು.

.jpg)

