ಬ್ರುಸೆಲ್ಸ್: ಬೆಲ್ಜಿಯಂನ ನೂತನ ಪ್ರಧಾನಿಯಾಗಿ ಬರ್ತ್ ದೆ ವೇವರ್ ಅವರು ಸೋಮವಾರ ಪ್ರಮಾಣವಚನ ಸ್ವೀಕರಿಸಿದರು.
ದೇಶವನ್ನು ವಿಭಜಿಸಿ, ಬೆಲ್ಜಿಯಂನ ಉತ್ತರ ಭಾಗದಲ್ಲಿರುವ, ಡಚ್ ಭಾಷೆ ಮಾತನಾಡುವ ಜನರು ಹೆಚ್ಚಿರುವ 'ಫ್ಲಾಂಡರ್ಸ್'ಗೆ ಮತ್ತಷ್ಟು ಸ್ವಾಯತ್ತೆ ನೀಡಬೇಕು, ರಾಜ್ಯದ ಸ್ಥಾನಮಾನ ನೀಡಬೇಕೆಂದು ವೇವರ್ ಅವರು ತಮ್ಮ ಈವರೆಗಿನ ರಾಜಕೀಯ ಜೀವನದ ಉದ್ದಕ್ಕೂ ಹೋರಾಟ ನಡೆಸಿದ್ದರು.
'ರಾಜರಿಗೆ ನಿಷ್ಠೆಯಿಂದ ಇರುವುದಾಗಿ ಪ್ರಮಾಣ ಸ್ವೀಕರಿಸುತ್ತೇನೆ' ಎಂದು ಅವರು ಹೇಳಿದರು.
ರಾಯಲ್ ಅರಮನೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಪ್ರಧಾನಿ ಮತ್ತು ಪ್ರಮುಖ ಸಚಿವರು ಡಚ್ ಮತ್ತು ಫ್ರೆಂಚ್ ಭಾಷೆಯಲ್ಲಿ ಪ್ರಮಾಣ ಸ್ವೀಕರಿಸಿದರು. 15 ಮಂದಿ ಸದಸ್ಯರ ತಂಡದಲ್ಲಿದ್ದ ಇತರ ಸಚಿವರು ತಮ್ಮದೇ ಸ್ಥಳೀಯ ಭಾಷೆಯಲ್ಲಿ ಪ್ರಮಾಣ ವಚನ ಸ್ವೀಕರಿಸಿದರು.