HEALTH TIPS

ಸಾರ್ವಜನಿಕರೇ ಗಮನಿಸಿ.. ಇನ್ನುಂದೆ UPI ಪಾವತಿ ಮಿತಿ 2 ಲಕ್ಷದಿಂದ 5 ಲಕ್ಷ ರೂಗೆ ಏರಿಕೆ..!

ಯುಪಿಐ ಬಂದ ಬಳಿಕ ಬಹುತೇಕ ಡಿಜಿಟಲ್​ ಬ್ಯಾಂಕಿಂಗ್​ ಮೂಲಕವೇ ವಹಿವಾಟು ನಡೆಸಲಾಗುತ್ತಿದೆ. ಸಣ್ಣ ಮೊತ್ತವಿರಲಿ, ದೊಡ್ಡ ಮೊತ್ತವಿರಲಿ ಸುಲಭವಾಗಿ ಆನ್​ಲೈನ್​ ಪಾವತಿಗೆ ಮುಂದಾಗುತ್ತಿದ್ದಾರೆ. ಸದ್ಯ ದೇಶದಲ್ಲಿ ಡಿಜಿಟಲ್​ ಪಾವತಿ ಸಿಕ್ಕಾಪಟ್ಟೆ ಯಶಸ್ಸು ಕಾಣುತ್ತಿದ್ದು, ಜನರನ್ನು ಸೆಳೆಯುತ್ತಿದೆ.

ಸಣ್ಣ ಅಂಗಡಿಗಳಿಂದ ಬ್ಯಾಂಕಿಂಗ್​ ವಹಿವಾಟಿನವರೆಗೆ ಕ್ಷಣಮಾತ್ರದಲ್ಲಿ ಯುಪಿಐ ಪಾವತಿ ನಡೆಸಲಾಗುತ್ತಿದೆ. ಇದೇ ಕಾರಣದಿಂದ ಇತ್ತೀಚೆಗೆ ಆರ್​ಬಿಐ ಡಿಜಿಟಲ್​ ಪಾವತಿ ಹೆಚ್ಚಿಸಲು ಯುಪಿಐ ಲೈಟ್​ ಎಂದು ಬದಲಾಯಿಸಿದೆ.

ಷೇರು ಮಾರುಕಟ್ಟೆಯಲ್ಲಿ ಹೂಡಿಕೆ ಮಾಡಲು ಯುಪಿಐ ಬಳಸುತ್ತಿರುವವರ ಸಂಖ್ಯೆ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ, ಸದ್ಯ ಎರಡು ಲಕ್ಷ ರೂ ಇರುವ ಟ್ರಾನ್ಸಾಕ್ಷನ್ ಲಿಮಿಟ್ ಅನ್ನು ಐದು ಲಕ್ಷ ರೂವರೆಗೆ ಏರಿಸಲು ಸೆಬಿ (SEBI) ನಿರ್ಧರಿಸಿದೆ. ಹೆಚ್ಚಿನ ಜನರಿಗೆ ಅನುಕೂಲವಾಗಲೆಂದು ಸೆಬಿ ಈ ಕ್ರಮ ಕೈಗೊಂಡಿದೆ. ಆದರೆ, ಈ ಕ್ರಮ ಅಂತಿಮವಲ್ಲ. ಸೆಬಿ ಈ ಬಗ್ಗೆ ಇನ್ನೂ ಸಮಾಲೋಚನೆ ಹಂತದಲ್ಲಿದ್ದು ಮುಂದಿನ ದಿನಗಳಲ್ಲಿ ಪರಿಷ್ಕರಿಸುವ ಸಂಭಾವ್ಯತೆಯೂ ಇದೆ.

ವಿವಿಧ ಬ್ರೋಕರ್​ಗಳಿಂದ ಪಡೆದ ದತ್ತಾಂಶಗಳು ಮತ್ತು ಸೆಬಿ ನಿರ್ಧಾರ

ಯುಪಿಐನ ಒಂದು ದಿನದ ವಹಿವಾಟು ಮಿತಿ ವಿಚಾರದಲ್ಲಿ ನಿರ್ಧಾರಗಳನ್ನು ತೆಗೆದುಕೊಳ್ಳುವ ಮುನ್ನ ಸೆಬಿ ವಿವಿಧ ದತ್ತಾಂಶಗಳನ್ನು ಪರಿಶೀಲಿಸಿದೆ. ಪ್ರಮುಖ ಬ್ರೋಕರ್ ಕಂಪನಿಗಳಿಂದ ಪಡೆದ ಕೆಲ ಮಾಹಿತಿ ಆಧಾರವಾಗಿ ಸೆಬಿ ನಿರ್ಧಾರ ತೆಗೆದುಕೊಂಡಿದೆ. ಈ ಮಾಹಿತಿ ಪ್ರಕಾರ, ಷೇರು ವಹಿವಾಟುಗಳಲ್ಲಿ ಯುಪಿಐ ಮೂಲಕ ಹಣ ಪಾವತಿಸುವವರಲ್ಲಿ ಒಂದು ಟ್ರಾನ್ಸಾಕ್ಷನ್​ನಲ್ಲಿ ಒಂದು ಲಕ್ಷ ರೂಗಿಂತ ಕಡಿಮೆ ಮೊತ್ತವನ್ನು ಪಾವತಿಸುವವರ ಪ್ರಮಾಣ ಶೇ 92.9 ಇದೆ.

ಒಂದು ಲಕ್ಷ ರೂನಿಂದ 2 ಲಕ್ಷ ರೂವರೆಗೆ ಒಂದು ಟ್ರಾನ್ಸಾಕ್ಷನ್ ಮಾಡುವವರ ಪ್ರಮಾಣ ಶೇ. 3.9 ಇದೆ. ಹಾಗೆಯೇ, ಎರಡರಿಂದ ಮೂರು ಲಕ್ಷ ರೂ ವಹಿವಾಟು ಮಾಡುವವರು ಶೇ. 1.3ರಷ್ಟಿದ್ದಾರೆ.

ಇಡೀ ದಿನಕ್ಕೆ ತೆಗೆದುಕೊಂಡರೆ, ಒಂದು ದಿನದಲ್ಲಿ ಒಂದು ಲಕ್ಷ ರೂಗಿಂತ ಕಡಿಮೆ ಮೊತ್ತದ ವಹಿವಾಟು ಮಾಡುವವರು ಶೇ. 91.5ರಷ್ಟಿದ್ದಾರೆ. ಒಂದರಿಂದ ಎರಡು ಲಕ್ಷ ರೂ ವಹಿವಾಟು ಶೇ. 4.6, ಹಾಗೂ 2-3 ಲಕ್ಷ ರೂ ವಹಿವಾಟು ಮಾಡುವವರು ಶೇ. 1.6ರಷ್ಟಿದ್ದಾರೆ. ಪ್ರಮುಖ ಬ್ರೋಕರ್ ಸಂಸ್ಥೆಗಳ ಬಳಕೆದಾರರ ಮಾಹಿತಿ ಇದಾಗಿದೆ. ಇದರ ಆಧಾರದ ಮೇಲೆ ಸೆಬಿ ದಿನಕ್ಕೆ 5 ಲಕ್ಷ ರೂ ವಹಿವಾಟಿನ ಮೇಲ್ಮಿತಿಯನ್ನು ನಿಗದಿ ಮಾಡಲು ನಿರ್ಧರಿಸಿದೆ.

ಗಮನಿಸಿ, ಈ ಮೇಲಿನದ್ದು ಷೇರು ಮಾರುಕಟ್ಟೆಯಲ್ಲಿ ನೀವು ಯುಪಿಐ ಮೂಲಕ ಮಾಡುವ ವಹಿವಾಟಿಗೆ ಇರುವ ನಿತ್ಯದ ಮಿತಿ. ಆದಾಯ ತೆರಿಗೆ ಪಾವತಿಸಲು ನೀವು ಯುಪಿಐ ಬಳಸುತ್ತಿದ್ದರೆ ದಿನಕ್ಕೆ 5 ಲಕ್ಷ ರೂವರೆಗೆ ಮಿತಿ ಇರುತ್ತದೆ. ಇವನ್ನು ಹೊರತುಪಡಿಸಿದರೆ ಮಾಮೂಲಿಯಾಗಿ ನೀವು ಅಂಗಡಿಗೋ ಅಥವಾ ಬೇರೆ ವ್ಯಕ್ತಿಗಳಿಗೂ ಹಣ ಪಾವತಿಸುತ್ತಿದ್ದರೆ ಆಗ ನಿತ್ಯದ ಟ್ರಾನ್ಸಾಕ್ಷನ್ ಮಿತಿ ಒಂದು ಲಕ್ಷ ರೂ ಮಾತ್ರವೇ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

src="https://blogger.googleusercontent.com/img/b/R29vZ2xl/AVvXsEik3hLMvgO1WDICUKu_VF5lQRG3CMZau_AmC5MorS73B9lRYpLdDKJGTnB8c-U47BHqrAJ7dkiQUqiUWGQ6qg9A5jtCXrPkzIP4GPJfI00HmwhHX-3VG35FjkD_MxxI10r2v4FqSQ8LuyjG/w640-h360/samarasa+new+add.JPG" width="500px" / />



Qries