HEALTH TIPS

ದೇಶದ ಚುನಾವಣೆಗಳಿಗೆ ಅಮೆರಿಕ ನೆರವು; ಟ್ರಂಪ್‌ ಹೇಳಿಕೆ ಗಂಭೀರ: ಶರದ್ ಪವಾರ್

ಮುಂಬೈ: ದೇಶದ ಚುನಾವಣೆ ಪ್ರಕ್ರಿಯೆ ಕುರಿತು ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ನೀಡಿರುವ ಹೇಳಿಕೆ ತುಂಬಾ ಗಂಭೀರವಾಗಿದೆ ಎಂದು ಎನ್‌ಸಿಪಿ (ಎಸ್‌ಪಿ) ಮುಖ್ಯಸ್ಥ ಶರದ್‌ ಪವಾರ್‌ ಹೇಳಿದ್ದಾರೆ.

ಈ ಕುರಿತು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, 'ಭಾರತದ ಚುನಾವಣಾ ಪ್ರಕ್ರಿಯೆಗೆ ಅಮೆರಿಕ ನೆರವು ನೀಡಿದೆ ಎಂಬ ಟ್ರಂಪ್‌ ಅವರ ಹೇಳಿಕೆ ನನಗೆ ಅತ್ಯಂತ ಗಂಭೀರವೆನಿಸಿದೆ.

ಆ ಹೇಳಿಕೆ ನಿಜವಾಗಿದ್ದರೆ, ಅದು ತುಂಬಾ ಆತಂಕಕಾರಿ. ‌ದೇಶದ ಪ್ರಜಾಪ್ರಭುತ್ವ ಪ್ರಕ್ರಿಯೆಗಳಲ್ಲಿ ಯಾವುದೇ ಬಾಹ್ಯ ಹಸ್ತಕ್ಷೇಪದ ಕುರಿತು ಸ್ಪಷ್ಟತೆ ಮತ್ತು ಪಾರದರ್ಶಕತೆ ಬಹಳ ಅಗತ್ಯ' ಎಂದು ಪವಾರ್‌ ತಿಳಿಸಿದ್ದಾರೆ.

ಭಾರತದ ಚುನಾವಣಾ ಪ್ರಕ್ರಿಯೆಗೆ ನೆರವಾಗಲು ಜೋ ಬೈಡನ್‌ ಆಡಳಿತವು (ಅಮೆರಿಕದ ಹಿಂದಿನ ಅಧ್ಯಕ್ಷ) ₹182 ಕೋಟಿ ನೆರವು ನೀಡಿದೆ ಎಂದು ಡೊನಾಲ್ಡ್‌ ಟ್ರಂಪ್‌ ಹೇಳಿದ್ದರು.

ಈ ಹೇಳಿಕೆಯು ಬಿಜೆಪಿ ಮತ್ತು ಕಾಂಗ್ರೆಸ್ ಪಕ್ಷಗಳ ನಡುವೆ ತೀವ್ರ ಜಟಾಪಟಿಗೆ ಕಾರಣವಾಗಿತ್ತು.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries