HEALTH TIPS

ಸಂಪ್ರದಾಯದ ತೀವ್ರ ಉಲ್ಲಂಘನೆ: ಶ್ರೀ ಪದ್ಮನಾಭಸ್ವಾಮಿಯ ಆರಾಟ್ಟು ಪೂಜೆಯ ಶಂಖುಮುಖಂ ಕಲ್ಮಂಟಪದಲ್ಲಿ ಮಾಂಸಾಹಾರ ತಯಾರಿ

ತಿರುವನಂತಪುರಂ: ಶ್ರೀ ಪದ್ಮನಾಭಸ್ವಾಮಿ ದೇವಾಲಯದ ಆರಾಟ್ಟು ಪೂಜೆ ನಡೆಯುವ  ಶಂಖುಮುಖಂನಲ್ಲಿರುವ ಕಲ್ಮಂಟಪದಲ್ಲಿ ಮಾಂಸಾಹಾರಿ ಆಹಾರವನ್ನು ಬೇಯಿಸುವುದಕ್ಕೆ ವ್ಯಾಪಕ ಪ್ರತಿಭಟನೆ ವ್ಯಕ್ತವಾಗಿದೆ.

ಕುಟುಂಬಶ್ರೀ ಮಿಷನ್‍ನ "ತೀರ ಸಂಗಮ" ಎಂಬ ಆಹಾರ ಉತ್ಸವದ ಸಂದರ್ಭದಲ್ಲಿ ಈ ಘಟನೆ ಸಂಭವಿಸಿದೆ. ಕಲ್ಮಂಟಪದಲ್ಲಿ ಮೀನು ಮತ್ತು ಮಾಂಸ ಭಕ್ಷ್ಯಗಳನ್ನು ಬೇಯಿಸಲಾಗುತ್ತಿತ್ತು. ಕುಟುಂಬಶ್ರೀಯ ಈ ಕ್ರಮವು ಹಿಂದೂ ನಂಬಿಕೆಗಳು ಮತ್ತು ಪದ್ಧತಿಗಳ ಉಲ್ಲಂಘಟನೆಯಾಗಿದೆ ಎಂದು ಟೀಕೆ ವ್ಯಕ್ತವಾಗಿದೆ. 


ಘಟನೆ ಅರಿವಿಗೆ ಬರುತ್ತಿರುವಂತೆ, ಬಿಜೆಪಿ ತಿರುವನಂತಪುರಂ ಕೇಂದ್ರ ಜಿಲ್ಲಾ ಸಮಿತಿಯ ಅಧ್ಯಕ್ಷ ಮತ್ತು ಶ್ರೀ ಪದ್ಮನಾಭಸ್ವಾಮಿ ದೇವಾಲಯ ನಿರ್ವಹಣಾ ಸಮಿತಿಯ ಸದಸ್ಯ ಕರಮಣ ಜಯನ್ ಮತ್ತು ಇತರರು ಮಧ್ಯಪ್ರವೇಶಿಸಿ, ಕಲ್ಮಂಟಪದಲ್ಲಿ ಮೀನು ಮತ್ತು ಮಾಂಸ ಬೇಯಿಸುವುದನ್ನು ನಿಲ್ಲಿಸಲಾಯಿತು. ಶಂಖುಮುಖಂ ಸಿಐ ನೇತೃತ್ವದ ತಂಡವು ಸ್ಥಳದಲ್ಲಿದ್ದ ತಾತ್ಕಾಲಿಕ ಶೌಚಾಲಯವನ್ನು ಕೆಡವಿತು. ಆದರೆ ಇದುವರೆಗೆ ತಪ್ಪಿತಸ್ಥರ ವಿರುದ್ಧ ಯಾವುದೇ ಕಾನೂನು ಕ್ರಮ ಕೈಗೊಂಡಿಲ್ಲ.

ಶ್ರೀ ಪದ್ಮನಾಭಸ್ವಾಮಿ ದೇವಾಲಯದ ಅರಾಟ್ಟು ಮಂಟಪವನ್ನು ಅಪವಿತ್ರಗೊಳಿಸುವ ಕೃತ್ಯವನ್ನು ಪೂರ್ವನಿಯೋಜಿತವಾಗಿ ಮಾಡಲಾಗಿದೆ ಎಂದು ಕೇರಳ ದೇವಾಲಯ ಸಂರಕ್ಷಣಾ ಸಮಿತಿ ಹೇಳಿದ್ದು, ಇದನ್ನು ಬಲವಾಗಿ ಖಂಡಿಸಿದೆ. ಸರ್ಕಾರಿ ಅಧಿಕಾರಿಗಳು ಮತ್ತು ಕುಟುಂಬಶ್ರೀ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕೆಂದು ಸಮಿತಿ ಹೇಳಿಕೆ ನೀಡಿದೆ.

"ಇದು ತಿಳಿದೂ ತಿಳಿದೂ ಮಾಡಲ್ಪಟ್ಟಿದೆ ಎಂಬುದು ಸ್ಪಷ್ಟವಾಗಿದೆ ಮತ್ತು ಇದು ಹಿಂದೂ ಪದ್ಧತಿಗಳಿಗೆ ಉದ್ದೇಶಪೂರ್ವಕವಾಗಿ ಮಾಡಿದ ಅವಮಾನದ ಉದಾಹರಣೆಯಾಗಿದೆ" ಎಂದು ಕೇರಳ ದೇವಾಲಯ ಸಂರಕ್ಷಣಾ ಸಮಿತಿಯ ನಾಯಕರು ಆರೋಪಿಸಿದ್ದಾರೆ. ಈ ಮಂಟಪವನ್ನು ಪುನಃ ಪ್ರತಿμÁ್ಠಪಿಸಲು ದೇವಾಲಯ ಆಡಳಿತ ಮಂಡಳಿಯು ತಕ್ಷಣ ಕ್ರಮ ಕೈಗೊಳ್ಳಬೇಕೆಂದು ಮತ್ತು ಸರ್ಕಾರವು ಈ ನಿಟ್ಟಿನಲ್ಲಿ ಸಂಪೂರ್ಣ ಸಹಕಾರ ನೀಡಬೇಕೆಂದು ಸಮಿತಿಯು ವಿನಂತಿಸಿದೆ.

ಸಮಿತಿಯ ರಾಜ್ಯ ಅಧ್ಯಕ್ಷ ಮುಲ್ಲಪಳ್ಳಿ ಕೃಷ್ಣನ್ ನಂಬೂದಿರಿ ಮತ್ತು ರಾಜ್ಯ ಪ್ರಧಾನ ಕಾರ್ಯದರ್ಶಿ ಕೆ.ಎಸ್.ನಾರಾಯಣ್ ಅವರು ತಪ್ಪಿತಸ್ಥರ ವಿರುದ್ಧ ಕಾನೂನು ಕ್ರಮ ಕೈಗೊಳ್ಳದಿದ್ದರೆ ಪ್ರಬಲ ಪ್ರತಿಭಟನಾ ಕಾರ್ಯಕ್ರಮಗಳನ್ನು ಆಯೋಜಿಸಲಾಗುವುದು ಎಂದು ಎಚ್ಚರಿಸಿದ್ದಾರೆ.



ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries